Advertisement

Tag: ಸುಮಾ ಸತೀಶ್

ಅಪ್ಪ ಅಂಬೋ ಆಲದಮರ: ಸುಮಾ ಸತೀಶ್ ಸರಣಿ

ಅಪ್ಪ ಅವ್ರ ಕಾಲದ ಗಂಡಸ್ರಿಗಿಂತ ವಸಿ ಮುಂದ್ವರೆದ ಯೋಚ್ನೆ ಮಾಡೋರು. ಎಲ್ರೂ ಓದ್ಬೇಕೂನ್ನೋರು. ತಾತಂಗೆ, ನಮ್ಮತ್ತೆದೀರ್ಗೆ ಲೈಬ್ರರೀಯಿಂದ ಕತೆ ಪುಸ್ತಕ ತಂದ್ಕೊಡೋರು. ತಂಗಿದೀರು ಕತೆ ಬರಿತೀವಿ ಅಂದ್ರೆ ಪುಸ್ತಕ ಪೆನ್ನು ತಂದ್ಕೊಟ್ಟು ಬೆನ್ನು ತಟ್ಟೋರು. ಸಂಗೀತ ಕಲಿಸಾಕೆ ಹಾರ್ಮೋನಿಯಂ ಮೇಷ್ಟ್ರು ಇಟ್ಟಿದ್ರು. ಕೊನೆ ತಂಗೀಗೆ ಮೊದ್ಲನೇ ಸಲ ಹೆರಿಗೇಲಿ ಮಗ ಹೋಗಿಬಿಟ್ತಂತೆ. ಮಂಕಾಗಿ ಬಿಟ್ಟಾಗ ಅಪ್ಪ ಕತೆಪುಸ್ತಕ ತಂದ್ಕೊಟ್ಟು ಓದೋಕೆ ಯೋಳತಿದ್ರಂತೆ. ನಾಗರ ಪಂಚಮಿ ಬಂದ್ರೆ ಎಲ್ಲಾ ಅಕ್ಕತಂಗೀರೂ ಖುಷೀಲಿಂದ್ಲೆ ಬೆನ್ನು ತೊಳ್ಯೋರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ತಂದೆಯವರ ಕುರಿತ ಬರಹ ಇಲ್ಲಿದೆ

Read More

ಬೇರು – ಬಿಳಲು: ಸುಮಾ ಸತೀಶ್ ಸರಣಿ

ಹೊಸ್ದಾಗಿ ಮದ್ವೆ ಆಗಿದ್ದ ಅಳಿಯ ಅತ್ತೆ ಮನೇಗೆ ಬಂದ್ನಂತೆ. ಅತ್ತೆ ಕಡುಬು ಮಾಡಿದ್ರು. ತೆಳ್ಳಗೆ, ಸಣ್ಣವು. ಹೊಸ ಅಳಿಯನಿಗೇಂತ ಕಷ್ಟ ಪಟ್ಟು ಸಣ್ಣ ಸಣ್ಣಕೆ ಮಾಡಿದ್ರು. ಅಳಿಯನ ತಟ್ಟೇಗೆ ಬಡಿಸಿದ್ರು. ಅವ್ನು ಒನೊಂದು ಸತೀಗೆ ಒಂದು ಗುಳುಂ ಮಾಡ್ತಿದ್ದ. ಅಳಿಯನ ಅಪ್ಪ ಥೋ ನಮ್ ಮರ್ವಾದೆ ತೆಗೀತಾವ್ನೆ ಅಂತ ಮೆಲ್ಲಕೆ ಮೂಗ್ಸನ್ನೆ ಮಾಡೀರು. ಒಂದು ಮುರಿದು ಎರ್ಡು ಭಾಗ ಮಾಡಿ ತಿನ್ನಾಕೆ ಸೈಗು (ಸನ್ನೆ) ಮಾಡಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಚಿಕ್ಮಾಲೂರಿನ ಅಜ್ಜ-ಅಜ್ಜಿಯರ ಕುರಿತ ಬರಹ ಇಲ್ಲಿದೆ

Read More

ಚಿಕ್ಕ್ಮಾಲೂರಿನ ದೊಡ್ಮನೆ: ಸುಮಾ ಸತೀಶ್ ಸರಣಿ

ಮೈಗೆ ಲೈಫ಼್ ಬಾಯ್ ಸೋಪು.‌ ಮಕಕ್ಕೆ ಮೈಸೂರು ಸ್ಯಾಂಡಲ್ ಸೋಪು.‌ ಮನೆ ಮಂದೀಗೆಲ್ಲಾ ಒಂದೆ ಸೋಪು. ಅದ್ಯಾಕೋ ಗೊತ್ತಿಲ್ಲಪ್ಪ ಮೈಸೂರು ಸ್ಯಾಂಡ್ಲು ಮಕಕ್ಕೆ ಮಾತ್ರ. ಮೈಗೆಲ್ಲ ಲೈಫ್ ಬಾಯಿ. ಮಕ ಬೆಳ್ಳಕಾದ್ರೆ ಸಾಕು ಅಂತ್ಲೋ ಏನೋ! ನಾನು ಚಿಕ್ಕೋಳಾಗಿದ್ದಾಗಿಂದ ಮದ್ವೆ ಆಗಾತಂಕ ಅದೇ ಎರ್ಡು ಸೋಪುಗಳ ರೂಡಿ ಬಂದಿತ್ತು. ಹಲ್ಲಿಗೆ ನಂಜನಗೂಡು ‌ಹಲ್ಲಿನಪುಡಿ. ಒಂದೇ ಕಿತ ಹಲ್ಲುಜ್ಜೋದು. ರಾತ್ರಿ ಉಜ್ಜೋ ಇಸ್ಯವೇ ಗೊತ್ತಿರ್ಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಚಿಕ್ಮಾಲೂರಿನ ಮನೆ-ಮನೆಯ ಜನಗಳ

Read More

ನಮ್ಮೂರಿನ ಕತೆಗಳು: ಸುಮಾ ಸತೀಶ್ ಸರಣಿ

ಅವರ ಮನ್ಯಾಗೆ ಲೆಟ್ರಿನ್ ಇತ್ತು. ಇಲ್ಲಿ ಬಯಲಿಗೆ ಹೋಗೋಕೆ ಸುತ್ರಾಂ ಒಪ್ತಿಲ್ಲ. ಚೊಂಬು ಹಿಡಿಯಾಕಿಲ್ಲ ಅಂದ್ಲು. ಕೊನೀಗೆ ಸಣ್ಣ ಹುಡ್ಗಿ ಅಂತ ನನ್ನ ಅವಳ ಹಿಂದೆ ಚೊಂಬು ಹಿಡ್ಕೊಂಡು ಮೆರವಣಿಗೆ ಕಳಿಸಿದ್ರು. ಥೋ, ನಂಗೋ ಕೋಪ. ಅವಳ ಹಿಂದೆ ಹೋಗಿ, ಚೊಂಬು ಕೊಟ್ಟೆ. ಆ ನೀರು ಸಾಲಲಿಲ್ಲ ಅಂತ ಅಲ್ಲೇ ಕುಂತ್ಲು. ಇನ್ನೊಂದು ಚೊಂಬು ತರಾಣಿ ಅಂತ ಹೊಂಟ್ರೇ, ಚೊಂಬು ಸಾಲಾಕಿಲ್ಲ, ಬಿಂದಿಗೇಲಿ ತತ್ತಾ ಅಂತ‌ ಹಠ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮೂರಿನ ಕುರಿತ ಬರಹ

Read More

ಸುತ್ತೂರ್ಗೊಂದೇ ಗೌರ್ಮೆಂಟು ಇಸ್ಕೂಲ್: ಸುಮಾ ಸತೀಶ್ ಸರಣಿ

ಅಲ್ಲಾ ನಮ್‌ ಮೇಷ್ಟ್ರು ಹೇಳಿರೋ ಸಿನ್ಮಾ‌ ಇದೇನಾ ಅಂತ ಕಣ್ಣು ತಿಕ್ಕೊಂಡು ಇನ್ನೊಂದು ದಪ ನೋಡಿದ್ರೂ ಆ ಪಟಗ್ಳು ವಸೀನೂ ಬದಲಾಗ್ಲೇ ಇಲ್ಲ. ‘ಅಯ್ ಇದೇನಮ್ಮಿ ನಮ್ಮೇಷ್ಟ್ರು ಕುಲಗೆಟ್ಟೋಗವ್ರೆ. ಅಲ್ಲಾ ವಾಗಿ ವಾಗಿ ಇಂತ ಸಿನಿಮ್ವೇ ನಮ್ಮಂತ ಸಣ್ಣೈಕ್ಳುಗೆ ನೋಡಾಕ್ ಯೇಳಾದು. ತಗ್ ತಗಿ ಯಾರಾದ್ರೂ ಮರ್ವಾದಸ್ಥರು ನೋಡೋ ಸಿನಿಮ್ವೇ ಇದು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಮಕ್ಕಳು ಸಿನಿಮಾ ನೋಡಿದ ಪ್ರಸಂಗ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ