ದೇವಕಿ ಜೈನ್ ಆತ್ಮಕತೆಯ ಕೆಲವು ಪುಟಗಳು

ಮೈಸೂರು ನಾಗರಿಕ ಸೇವೆಯ ಪ್ರೊಬೇಷನರಿ ಕಲಿಕೆಯಲಿದ್ದಾಗ, ಅಪ್ಪ ಕುದುರೆ ಸವಾರಿ ಕಲಿತಿದ್ದರು. ಈ ಕತೆಯನ್ನು ಹೇಳುತ್ತ ಹೇಳುತ್ತ ಅಮ್ಮ ನಗುತ್ತಿದ್ದಳು. ‘ನೋಡು, ನಾನು ಅವರನ್ನು ಮೊದಲು ಹರಿವಾಣದಲ್ಲಿ ತುಂಬಿದ್ದ ನೀರಿನಲ್ಲಿ ನೋಡಿದ್ದೆ’. ಸಾಮಾನ್ಯವಾಗಿ ಆ ಕಾಲದಲ್ಲಿ ಸಾಂಪ್ರದಾಯಿಕ ಮದುವೆಗಳಲ್ಲಿ ಸಂಬಂಧಗಳು ಮಧುರವಾಗಿರುವುದು ಅಪರೂಪ. ಆದರೆ ನನ್ನ ಅಪ್ಪ ಅಮ್ಮನ ಸಂಬಂಧ ಬಹಳ ಮಧುರವಾಗಿ ಆರಂಭವಾಗಿ, ಅವರ ಬದುಕಿನುದ್ದಕ್ಕೂ ಮಧುರವಾಗಿಯೇ ಸಾಗಿತು. ದೇವಕಿ ಜೈನ್ ಅವರ ಆತ್ಮಕತೆ ‘ದ ಬ್ರಾಸ್ ನೋಟ್‍ ಬುಕ್’ ಅನ್ನು ಕೋಡಿಬೆಟ್ಟು ರಾಜಲಕ್ಷ್ಮಿ ‘ಹಿತ್ತಾಳೆ ಬಣ್ಣದ ಪುಸ್ತಕ’ ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದು, ಆ ಪುಸ್ತಕದ ಕೆಲವು ಪುಟಗಳು ಇಲ್ಲಿವೆ.

Read More