Advertisement

Tag: ಅಂಜಲಿ ರಾಮಣ್ಣ

ಆಪರೇಷನ್ ವಿಜಯ್ ನ ಜೀವಂತ ನೆನಪುಗಳು

ಹಾಲ್ ಆಫ್ ಫೇಂನಲ್ಲಿ ಆಪರೇಷನ್ ವಿಜಯ್ ಹೆಸರಿನಲ್ಲೇ ಒಂದು ಗ್ಯಾಲೆರಿ ತೆರೆದಿದ್ದಾರೆ. ಅಲ್ಲಿ ಕಾರ್ಗಿಲ್ ಯುದ್ಧಕ್ಕೆ ಬಳಸಲಾದ ಗನ್ನುಗಳನ್ನು ಇಡಲಾಗಿದೆ. ಮಾರ್ಗದರ್ಶನ ಮಾಡುತ್ತಿದ್ದ ಆ ಯೋಧ “ಈ ಗನ್ನ್ ಅನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆಸಿಕೊಳ್ಳಿ” ಎಂದ. ನನ್ನ ಆನಂದಕ್ಕೆ ಮಿತಿಯೇಯಿರಲಿಲ್ಲ. ನಿಜಕ್ಕೂ ನಾನು ಆ ಘಳಿಗೆಯಲ್ಲಿ ವೈರಿಪಡೆಯನ್ನು ಸೆದೆಬಡಿದು ಬಿಡುತ್ತೇನೆ ಎನ್ನುವ ಭಾವದಿಂದ ಗನ್ನೊಂದನ್ನು ಕೈಗೆತ್ತಿಕೊಳ್ಳಲು ಹೋದೆ. ಉಹುಂ, ಆಗಲೇ ಇಲ್ಲ! ಎಷ್ಟೊಂದು ಭಾರವಿತ್ತು. ನಗರ ಜೀವನ ಶೈಲಿಗೆ ಹೊಂದಿಕೊಂಡ ನನ್ನ ತಾಕತ್ತು ಸೈನಿಕನ ಉಂಗುಷ್ಠವನ್ನೂ ಹೋಲಲು ಸೋತಿತು. ಕೊನೆಗೆ ಅಲ್ಲಿದ್ದ ಆ ಯೋಧ, ಗನ್ ಎತ್ತಿ ನನ್ನ ಕೈಯಲ್ಲಿ ತೂರಿಸಿದ, ಫೋಟೊ ಸೆರೆಹಿಡಿದ. ‘ಕಂಡಷ್ಟೂ ಪ್ರಪಂಚ’ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಲೇಖನ ಇಲ್ಲಿದೆ.

Read More

ಪ್ರಾರ್ಥನೆಯೊಂದೇ ಆಯ್ಕೆಯಾಗಿ ಉಳಿದಾಗ…

ಆ ದಿನ ಅಲ್ಲಿ ಹಾಗೆ ಆದಾಗ ಆಕೆಗೆ ಒಳಿತಾಗಲಿ ಎಂದು ಬಯಸಿದ್ದು ಅಲ್ಲಿದ್ದ ನೂರಾರು ಮನಸ್ಸುಗಳು. ಅನುಮಾನವೇ ಇಲ್ಲ. ಆದರೆ ನನ್ನ ಗಮನ ಆಕೆಯ ಇಬ್ಬರು ಹರೆಯದ ಹೆಣ್ಣುಮಕ್ಕಳಾದ ಶ್ರದ್ಧಾ ಮತ್ತು ಪೂಜಾರೆಡೆಗೆ ಇದ್ದದ್ದೂ ಸುಳ್ಳಲ್ಲ. ಇಡೀ ಗುಂಪಿನಲ್ಲಿ ಅವರಿಬ್ಬರಿಗೇ ಇಂಗ್ಲಿಷ್ ಬರುತ್ತಿದ್ದದ್ದು. ಸ್ವಂತ ತಾಯಿ ಕುಸಿದು ಬಿದ್ದಿದ್ದಾಳೆ. ಅಪ್ಪನಿಗೆ ದಿಗ್ಭ್ರಮೆಯಾಗಿದೆ. ಪುಟ್ಟ ತಮ್ಮ ಅಳುತ್ತಿದ್ದಾನೆ. ವಯಸ್ಸಾದ ನೆಂಟರಿಷ್ಟರೆಲ್ಲಾ ಆತಂಕಗೊಂಡಿದ್ದಾರೆ. ಡಾಕ್ಟರ್‌ಗಳು ಹತ್ತು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
“ಕಂಡಷ್ಟೂ ಪ್ರಪಂಚ” ಪ್ರವಾಸ ಅಂಕಣದಲ್ಲಿ ವಿಮಾನ ಪ್ರಯಾಣದ ಒಂದು ಭಿನ್ನ ಅನುಭವವನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ

Read More

ಗಾಂಧಿತಾತನ ಜೊತೆಗೆ ಒಲಿವಿಯಾಳೂ ಸಿಕ್ಕಳು

ವಿದ್ಯಾರ್ಥಿಗಳು, ಕಲಾವಿದರು ತಮ್ಮ ಖರ್ಚು ಸರಿದೂಗಿಸಿಕೊಳ್ಳಲು ಹೀಗೆ ಸ್ವಯಂಸೇವೆ ಮಾಡುತ್ತಾರೆ ಮತ್ತು ಪಗಾರ ಪಡೆಯುತ್ತಾರೆ. ಬಹಳಷ್ಟು ಸ್ಮಶಾನಗಳಿಗೆ ಭೇಟಿ ನೀಡಿದ್ದೇನೆ. ಅವುಗಳು ಪಾರ್ಕ್‌ನಂತೆ ಬಳಸಲ್ಪಡುತ್ತವೆ. ಸ್ವಚ್ಛತೆ ಮತ್ತು ಮೌನವು ಮಾರ್ದನಿಸುತ್ತಿರುತ್ತವೆ. ಕೆಲವು ಕಡೆ ಸಮಯ ನಿಗಧಿಯಾಗಿರುತ್ತದೆ, ಆದರೆ ಬಹುಪಾಲು ಸ್ಮಶಾನಗಳಿಗೆ ಸಾರ್ವಜನಿಕರು ದಿನದ ಯಾವ ಸಮಯದಲ್ಲಿಯಾದರೂ ಹೋಗಬಹುದು, ಅಲ್ಲಿ ಕುಳಿತು ಸಮಯ ಕಳೆಯಬಹುದಾಗಿರುತ್ತದೆ.
ಅಂಜಲಿ ರಾಮಣ್ಣ ಬರಹ

Read More

ನೈನಿತಾಲ್ ಟ್ರಿಪ್ ನಲ್ಲಿ ಭೇಟಿಯಾದ ಭಗಿನಿ ಮತ್ತು ಕವಿ

1929ರಲ್ಲಿ ಗಾಂಧೀಜಿ ಕೌಸಾನಿಗೆ ಬಂದು, ಒಂದು ಅತಿಥಿ ಗೃಹದಲ್ಲಿ 3 ತಿಂಗಳು ತಂಗಿದ್ದರು. ಅಲ್ಲಿ ಅವರು “ ಅನಾಸಕ್ತಿ ಯೋಗ” ದ ಬಗ್ಗೆ ಬರೆದ್ದದ್ದರಿಂದ ಆ ಗೆಸ್ಟ್ ಹೌಸ್ ಈಗ ಅನಾಸಕ್ತಿ ಆಶ್ರಮ ಎಂದು ಕರೆಸಿಕೊಳ್ಳುತ್ತಿದೆ. ಗಾಂಧಿ ಆಗ ಕೌಸಾನಿಯನ್ನು ‘ಸ್ವಿಟ್ಸರ್ ಲ್ಯಾಂಡ್’ ಎಂದು ಕರೆದಿದ್ದರಂತೆ. ಈಗ ಅನಾಸಕ್ತಿ ಆಶ್ರಮದಲ್ಲಿ ಮ್ಯೂಸಿಯಮ್, ಪುಸ್ತಗಳ ಸಂಗ್ರಹಾಲಯ ಮಾಡಲಾಗಿದೆ. ಸರ್ಕಾರದ ದೇಖ್‍ರೇಕಿಯಲ್ಲಿ ಇನ್ನೂ ಮೌನ ಮತ್ತು ಕಳಚಿಕೊಳ್ಳುವುದರ ಬಗ್ಗೆ ಆಸಕ್ತಿ ಹುಟ್ಟಿಸುತ್ತಾ ಸದ್ದು ಮಾಡದೆ ನಿಂತಿದೆ ಅನಾಸಕ್ತಿ ಆಶ್ರಮ.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ  ಅಂಜಲಿ ರಾಮಣ್ಣ ಬರಹ ಇಂದಿನ ಓದಿಗಾಗಿ.

Read More

ಮೌಂಟ್‌ಅಬುವಿನ ಒಳಹೊರಗೆಲ್ಲ ಸುತ್ತುತ್ತಾ…

ಬೆಟ್ಟದ ದಾರಿ. ಸಂಜೆಯಾಗುವ ಮೊದಲೇ ಮೇಲೇರಬೇಕು ಎನ್ನುವ ಧಾವಂತದಲ್ಲೇ ಹೊರಟೆ. ಇಕ್ಕೆಲಗಳಲ್ಲೂ ಅರಾವಳಿ ಪರ್ವತಶ್ರೇಣಿಯ ಸ್ನಿಗ್ಧ ಸೌಂದರ್ಯಾಸ್ವಾದನೆ. ಸ್ವಪ್ನಲೋಕದ ದಾರಿಯಲ್ಲಿ ಪಯಣಿಸಿ ಸೂರ್ಯಾಸ್ತದ ವೇಳೆಗೆ ತಲುಪಿದ್ದು ಸಮುದ್ರಮಟ್ಟದಿಂದ 1200 ಮೀಟರುಗಳಷ್ಟು ಮೇಲಿರುವ, ಬೇಸಿಗೆ ಅರಮನೆಗಳ ನಗರ ಮೌಂಟಬುವನ್ನು. ಥಾರ್ ಮರುಭೂಮಿಯ ಈ ನಾಡಿಗೆ ಉಣ್ಣೆ ಬಟ್ಟೆಯನ್ನು ಹೊತ್ತಿ ಹೋಗುವ ಕಲ್ಪನೆಯೂ ನನಗಿರಲ್ಲಿಲ್ಲ. ಆದರೆ ಕಾಲಿಟ್ಟೊಡನೆ ಮೈನಡುಗಿಸಿತ್ತು ಅಲ್ಲಿನ ಹವೆ.
‘ಕಂಡಷ್ಟೂ ಪ್ರಪಂಚʼ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ