Advertisement

Tag: ಬಾಲ್ಯ

ಸುಂದರ, ಸಮೃದ್ಧ ಕಾಡಿನ ರೋಚಕ ಕಥೆಗಳು: ರೂಪಾ ರವೀಂದ್ರ ಜೋಶಿ ಸರಣಿ

ತುಂಬ ದಟ್ಟವಾದ ಎತ್ತರವಾದ ಮರಗಳಿಂದ ಕಂಗೊಳಿಸುವ ಕಾಡಿನಿಂದ ಆವೃತವಾದ ಆ ಗುಡ್ಡ ನೋಡುವುದೆಂದರೆ ಎಲ್ಲಿಲ್ಲದ ಖುಶಿ ನನಗೆ. ಅದರಲ್ಲಿ ಒಂದು ವಿಚಿತ್ರ ಆಕರ್ಷಣೆ ಇತ್ತು. ಹಗಲು ಅಷ್ಟು ಪ್ರೀತಿಯಿಂದ ನೋಡುವ ಗುಡ್ಡ, ರಾತ್ರಿ ಮಾತ್ರ ಭಯ ಹುಟ್ಟಿಸುತ್ತಿತ್ತು. ರಾತ್ರಿ ಊಟ ಮಾಡಿ ಕೈತೊಳೆಯಲು, ‘ವಂದ’ ಮಾಡಲು ಹೊರಗೆ ಬಂದಾಗಲೆಲ್ಲ ನಾವು ಅತ್ತ ದೃಷ್ಟಿ ಹರಿಸುವ ಸಾಹಸವನ್ನೇ ಮಾಡುತ್ತಿರಲಿಲ್ಲ. ಆಕಸ್ಮಿಕವಾಗಿ ಕಣ್ಣು ಅತ್ತ ಹೋದರೆ ಸಾಕು, ಕಾರ್ಗತ್ತಲೆಯಲ್ಲಿ ಮಸಿ ಬಳಿದಷ್ಟು ಕರ್ರಗೆ ಬೃಹದಾಕಾರವಾಗಿ ಕುಳಿತ ಅದು, ಭಯಂಕರವಾದ ಕಲ್ಪನೆ ಮೂಡಿಸಿ, ಎದೆಯ ನಗಾರಿ ಬಡಿತ ಏರುತ್ತಿತ್ತು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

Read More

ಮಿಸ್ ಜೊತೆಗೆ ಆಪ್ತರಾಗುವ ಸಾಹಸಗಳು: ಅನುಸೂಯ ಯತೀಶ್ ಸರಣಿ

ಕೆಡುಕನ್ನೇ ಕಾಣದ ಮುಗ್ಧ ಮನಸ್ಸುಗಳ ಜೊತೆ ನಾವು ಮಕ್ಕಳಾಗಿ ನಲಿಯುವುದಿದೆಯಲ್ಲ ಅಂತಹ ಖುಷಿಯನ್ನ ಯಾವುದರಿಂದಲೂ ಪಡೆಯಲು ಸಾಧ್ಯವಿಲ್ಲ. ಶಾಲಾ ಗೇಟಿನಿಂದ ಟೀಚರ್ ಬ್ಯಾಗ್ ಶಾಲೆಗೆ ತೆಗೆದುಕೊಂಡು ಹೋಗಿ ತರಗತಿಯೊಳಗೆ ಇಡುವುದರಲ್ಲಿ, ಟೀಚರ್‌ಗೆ ಹಾಜರಾತಿ ತಂದು ಕೊಡುವುದರಲ್ಲಿ ಮಕ್ಕಳ ನಡುವೆ ಪೈಪೋಟಿ ನಡೆಯುತ್ತಿರುತ್ತದೆ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ

Read More

ಪ್ರೀತಿಯೆಂಬ ಭಾವ ಮಾತ್ರ ಸ್ಥಾಯಿಯಾಗಲಿ…: ಆಶಾ ಜಗದೀಶ್ ಅಂಕಣ

ನಂತರದ ನಾಲ್ಕೈದು ದಿನಗಳು ನಿತ್ಯದ ನಿಯತಿಯಲ್ಲಿಯೇ ಕಳೆದವು. ಅವಳು ನಮ್ಮಲ್ಲೇ ಒಬ್ಬಳಂತಾಗಿ ಹೋಗಿದ್ದಳು. ಯಾವ ಜನ್ಮದ ಋಣವೋ ಎಂಬಂತೆ. ಪ್ರತಿ ನಿತ್ಯ ಅವಳನ್ನು, ಅವಳ ಮಕ್ಕಳನ್ನು ನೋಡುವುದು ಅಭ್ಯಾಸವಾಯಿತು. ಇವತ್ತೂ ಎಂದಿನಂತೆಯೇ ಕೋಣೆಯ ಒಳ ಹೋಗಿ ಬಗ್ಗಿ ನೋಡಿದೆ. ಅವಳಾಗಲೀ ಅವಳ ಒಂದೇ ಒಂದು ಕೂಸೇ ಆಗಲೀ ಎಲ್ಲಿಯೂ ಕಾಣಲಿಲ್ಲ… ಮನಸು ಮುದುಡಿ ಕಣ್ಣುಗಳು ತುಂಬಿಕೊಂಡವು.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

Read More

ಸಮೃದ್ಧ ಬಾಲ್ಯಕ್ಕೆ, ಕಳೆದ ಬದುಕಿಗೆ ಥ್ಯಾಂಕ್ಯು…: ಮಾರುತಿ ಗೋಪಿಕುಂಟೆ ಸರಣಿ

ಆತ ನಮ್ಮ ಶಾಲೆ ಬಿಟ್ಟ ಮೇಲೆ ನಿಗೂಢವಾಗಿ ಕಣ್ಮರೆಯಾದ. ನಮ್ಮ ಮನೆಯಲ್ಲಿ ಆಗ ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಸದೃಡತೆ ಇತ್ತು. ಆತ ಯಾವಾಗಲಾದರೂ ಖರ್ಚಿಗೆ ಬೇಕೆಂದರೆ ಒಂದಿಷ್ಟು ಚಿಲ್ಲರೆ ಪಡೆದುಕೊಳ್ಳುತ್ತಿದ್ದ. ನಮ್ಮದು ಕಿರಾಣಿ ಅಂಗಡಿ ಇದ್ದುದರಿಂದ ಅಪ್ಪನಿಗೆ ಗೊತ್ತಿಲ್ಲದೆ ಚಿಲ್ಲರೆ ಕಾಸನ್ನು ಎತ್ತಿಟ್ಟುಕೊಂಡು ಆತನಿಗೆ ಕೊಡುತ್ತಿದ್ದೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಕೊನೆಯ ಕಂತು ನಿಮ್ಮ ಓದಿಗೆ

Read More

ಪ್ರಾರಂಭಿಕ ದಿನಗಳು…: ಬಸವನಗೌಡ ಹೆಬ್ಬಳಗೆರೆ ಸರಣಿ

ಮಲ್ಲಾಡಿಹಳ್ಳಿಯ ಇಂಗ್ಲೀಷ್ ಮೀಡಿಯಂಗೆ ಸೀಟು ಸಿಕ್ಕಿದೆ ಎಂಬ ಪೋಸ್ಟ್ ಕಾರ್ಡ್ ಮನೆಗೆ ತಲುಪಿದಾಗ ನಾನು ಸಿಕ್ಕಾ ಪಟ್ಟೆ ಖುಷಿಯಾಗಿದ್ದೆ. ಮುಂದೆ ಬರಬಹುದಾದ ಹಾಸ್ಟೆಲ್ಲಿನ ಕಷ್ಟದ ದಿನಗಳ ಅರಿವು ನನಗಿರಲಿಲ್ಲವಾದ್ದರಿಂದ ನಾನು ಹಾಸ್ಟೆಲ್ ಸೇರೋಕೆ ಉತ್ಸುಕನಾಗಿದ್ದೆ. ಮಲ್ಲಾಡಿಹಳ್ಳೀಗೆ ಅಡ್ಮಿಷನ್‌ಗೆ ಹೋದಾಗ ಅಲ್ಲಿಗೆ ದಾಖಲಾಗಲು ಬಂದ ಅಪ್ಲಿಕೇಷನ್‌ಗಳಲ್ಲಿ ಅತೀ ಹೆಚ್ಚಿನ ಅಂಕಗಳು ನನ್ನವೇ ಇದ್ದುದ್ದರಿಂದ ಅಲ್ಲಿಯ ಮೇಷ್ಟ್ರು ನನ್ನನ್ನು ವಿಚಿತ್ರವಾಗಿ ನೋಡಿದರು. ಕಾರಣವಿಷ್ಟೇ…
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ