ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಥ ಪವಡಿ ಕತೆ

ಹಸಿದ ಹೊಟ್ಟೆಗಳನ್ನು ಹೊತ್ತುಕೊಂಡು ಪಕ್ಕೂ ಮಾಡಿದ ರೇಜಿಗೆಯಿಂದ ದಿಗಿಲುಗೊಂಡವರು ಫುಟ್‌ಪಾತಿನ ಮೇಲೆ ಕೂರುತ್ತಿದ್ದಂತೆ ತಾವು ತಂದಿದ್ದ ರೊಟ್ಟಿ ಗಂಟುಗಳನ್ನು ಬಿಚ್ಚಿ ತಿನ್ನತೊಡಗಿದರು. ದಾಜಿ ಧೋಂಡಿಬಾನ ಅಂಗಡಿ ಪಕ್ಕದ ಮನೆಯಿಂದ ನೀರಿನ ವ್ಯವಸ್ಥೆ ಮಾಡಿದ. ಒಂದಿಷ್ಟು ಗಂಡಸರು ಊಟ ಒಲ್ಲದೆ ಸಿಗರೇಟು, ಎಲೆ ಅಡಿಕೆ ತಂಬಾಕುಗಳ ತಲುಬಿಗೆ ಶರಣೆಂದರು. ಸಣ್ಣ ಮಕ್ಕಳು ತಮ್ಮ ಅವ್ವ ಅಪ್ಪಂದಿರರಿಂದ ದುಡ್ಡು ಇಸಿದುಕೊಂಡು ಭೈಯ್ಯಾನ ಸ್ವೀಟ್ ದುಕಾನಿನಿಂದ ಸೇವು, ಉಂಡಿ, ಮೈಸೂರ ಪಾಕ್, ಭಜಿ, ಮೊದಲಾದ ತಿಂಡಿಗಳನ್ನು ಖರೀದಿಸಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಥ ಪವಡಿ ಕತೆ “ಒಂದು ಪಯಣ ಪ್ರಸಂಗ”

Read More