ನೀನೆ ಭುವನಕ್ಕಾರಾಧ್ಯನೈ… ಚೂತರಾಜಾ: ಚಂದ್ರಮತಿ ಸೋಂದಾ ಸರಣಿ

ಮಲೆನಾಡು, ಕರಾವಳಿ ಭಾಗದಲ್ಲಿ ಕೊಸಗಾಯಿ ಅಥವಾ ಕುಚ್ಚುಮಾವಿನಕಾಯಿ ಎನ್ನುವುದು ಮಳೆಗಾಲದಲ್ಲಿ ಅಡಿಗೆಗೆ ಸಹಾಯಕ. ಕುದಿಯುವ ಹಂತದಲ್ಲಿದ್ದ ನೀರಿಗೆ ತೊಳೆದು ಶುದ್ಧಗೊಳಿಸಿದ ಮಾವಿನಕಾಯಿಗಳನ್ನು ಹಾಕಿ ಒಂದು ಕ್ಷಣಬಿಟ್ಟು ಅದನ್ನು ಅಲ್ಲಿಂದ ತೆಗೆದು ಆರಿದ ಮೇಲೆ ಉಪ್ಪುನೀರಿನಲ್ಲಿ ಹಾಕಿಡಬೇಕು. ಇದರಿಂದಲೂ ಹಸಿಮಾವಿನಕಾಯಿಯಲ್ಲಿ ಮಾಡುವ ವ್ಯಂಜನಗಳನ್ನೆಲ್ಲ ಮಾಡಬಹುದು. ಇದಕ್ಕೂ ಅಷ್ಟೆ, ಎಲ್ಲ ಮಾವಿನಕಾಯಿಯೂ ಬಾರದು. ಸಿಪ್ಪೆ ದಪ್ಪವಿದ್ದು ಉಪ್ಪಿನಲ್ಲಿ ಕರಗಬಾರದು. ಜೋಓಓ ಎಂದು ಹೊಯ್ಯುವ ಮಳೆಯಲ್ಲಿ ಕಮ್ಮಗೆ ಉಂಡು, ಬೆಚ್ಚನೆ ಹೊದ್ದು ಮಲಗಿದರೆ ʻಸ್ವರ್ಗಕ್ಕೆ ಕಿಚ್ಚು ಹಚ್ಚೆಂದ….ʼ
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ನಾಲ್ಕನೆ ಕಂತು

Read More