ಮೋಡದ ಮೇಲೆ…. ತೇಲುತ್ತಾ ತೇಲುತ್ತಾ..

ರಸ್ತೆಗಳಲ್ಲಿ ಇಳಿಮುಖವಾಗಿ ಕಾರು ಚಲಿಸುತ್ತಿತ್ತು. ಸ್ವಲ್ಪ ದೂರ ಚಲಿಸಿದ ಮೇಲೆ ಒಂದು ಕಡಿದಾದ ತಿರುವು ದಾಟಿದ ತಕ್ಷಣ, ಕಣ್ಣ ಮುಂದೆ ಏನಿದೆ ಎಂದು ಅರ್ಥೈಸಲು ಸ್ವಲ್ಪ ಕಾಲಾವಕಾಶ ಬೇಕಾಯಿತು. ಒಂದು ಬಿಳಿಯ ಚಾದರ ಹಾಸಿದಂತೆ ಮೋಡಗಳು ಭಾಸವಾದವು. ಅದಕ್ಕಿಂತಲೂ ಎತ್ತರದ ಜಾಗದಲ್ಲಿ ನಾನು ಕಾರು ಓಡಿಸುತ್ತಿದ್ದರಿಂದ, ನಾವು ಮೋಡದ ಮೇಲೆ ಇರುವಂತೆ ಭಾಸವಾಯಿತು. ನನ್ನ ಪ್ರವಾಸದ ಅನುಭವಗಳಲ್ಲಿ ಅತ್ಯಂತ ಆಪ್ಯಾಯಮಾನವಾದ ದೃಶ್ಯ ಎಂದರೆ ಮೋಡದ ಸಾಲುಗಳ ಮೇಲಿಂದ ನಿಂತು ಮೋಡದ ಸಾಗರವನ್ನು ವೀಕ್ಷಿಸುವುದು.
ಲೆಚೆನ್ಸ್‌ಟೈನ್‌ ದೇಶದ ಪ್ರವಾಸದ ಕುರಿತು ಬರೆದಿದ್ದಾರೆ ಗುರುದತ್ ಅಮೃತಾಪುರ

Read More