ಆಡುವವನ ಕೈ ಚಳಕದಲಿ ಎಲ್ಲ ಅಡಗಿದೆ…: ವಿಶ್ವನಾಥ ಎನ್ ನೇರಳಕಟ್ಟೆ ಬರಹ

ಆರ್ಟ್ಸ್ ಗೇಮ್‌ಗಳು ಗೇಮಿಂಗ್ ಪ್ರಕಾರಗಳಲ್ಲಿ ವಿಶಿಷ್ಟವಾದವು. ಆಟದ ವಿಶಿಷ್ಟತೆ ಇಲ್ಲಿ ಮುಖ್ಯವಾಗುವುದಿಲ್ಲ. ಕಲೆಯೇ ಪ್ರಮುಖ. ನೋಡುವುದಕ್ಕೆ ಆಕರ್ಷಕವಾಗಿರುವ, ಬಹಳ ಕ್ರಿಯೇಟಿವ್ ಆಗಿರುವ ಗೇಮ್‌ಗಳಿವು. ವಿಡಿಯೋ ಗೇಮ್ಸ್ ಮೂಲಕ ನಮ್ಮ ಆಸಕ್ತಿಯ ಕೆಲವು ವಿಷಯಗಳನ್ನು ಕಲಿತುಕೊಳ್ಳುವುದಕ್ಕೆ ಸಾಧ್ಯವಿದೆ. ಇವುಗಳು ಶೈಕ್ಷಣಿಕ ಗೇಮ್‌ಗಳು. ಭಾಷೆ, ಗಣಿತ, ಟೈಪಿಂಗ್ ಕುರಿತಾದ ಸರಳ ಗೇಮ್‌ಗಳು ಇದಕ್ಕೆ ಉದಾಹರಣೆಗಳು. ವ್ಯಾಯಾಮದಂತಹ ಚಟುವಟಿಕೆ ಮಾಡಲು ಅವಕಾಶ ಮಾಡಿಕೊಡುವ ಗೇಮ್‌ಗಳನ್ನು ಎಕ್ಸರ್ ಗೇಮ್ ಎನ್ನಲಾಗುತ್ತದೆ.
ವಿಶ್ವನಾಥ ಎನ್ ನೇರಳಕಟ್ಟೆ ಬರಹ

Read More