ಮೆಜೆಸ್ಟಿಕ್‌ ಎಂಬ ಚಿತ್ರಮಂದಿರಗಳ ನಗರ: ಎಚ್. ಗೋಪಾಲಕೃಷ್ಣ ಸರಣಿ

ಜಯಶ್ರೀ ಚಿತ್ರಮಂದಿರ ಚಾಮರಾಜಪೇಟೆ ಒಂದನೇ ರಸ್ತೆಯ ಕೊನೆಯಲ್ಲಿ ಇತ್ತು. ಅದು ಕಳ್ಳೇಕಾಯಿ ಟಾಕೀಸ್ ಎಂದೇ ಪ್ರಖ್ಯಾತವಾಗಿತ್ತು. ಸುಮಾರಾಗಿ ಹಳೆಯ ಚಿತ್ರಗಳೇ ಅಲ್ಲಿ ಪ್ರದರ್ಶನವಾಗುತ್ತಿತ್ತು. ಆ ಟಾಕೀಸ್‌ಗೆ ಬರುತ್ತಿದ್ದವರು ಬಹುತೇಕ ಕಾರ್ಮಿಕ ವರ್ಗದವರು. ದೂರದೂರದ ಪ್ರದೇಶದವರು. ಅವರು ಹಾಗೆ ಬರುವಾಗ ಟೈಮ್ ಪಾಸ್‌ಗಾಗಿ ಕಳ್ಳೇಕಾಯಿ ತಂದು ತಿನ್ನುತ್ತಿದ್ದರಂತೆ. ಒಂದೊಂದು ಪ್ರದರ್ಶನವಾದಾಗಲೂ ರಾಶಿ ರಾಶಿ ಸಿಪ್ಪೆ ಬಿದ್ದಿರುತ್ತಿತ್ತಂತೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ

Read More