Advertisement

Tag: ಸುಧಾ ಆಡುಕಳ

ಜೀವಕ್ಕಿಂತ ದೊಡ್ದು ಯಾವ್ದು?: ಸುಧಾ ಆಡುಕಳ ಅಂಕಣ

ಗುಲಾಬಿಯ ಸಾವಿನಿಂದಾಗಿ ಡಾಕ್ಟರಮ್ಮನಿಗೆ ಹೊಳೆಸಾಲಿನ ಸ್ಥಿತಿಗತಿಯ ಬಗ್ಗೆ ಒಂದಿಷ್ಟು ಅರ್ಥವಾಗಿತ್ತು. ಅವರಲ್ಲಿ ಅರಿವನ್ನು ಮೂಡಿಸುವುದು ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟೇ ಮಹತ್ವದ ಕಾರ್ಯವೆಂದು ತಿಳಿದ ಅವರು ಮಾಸ್ರ‍್ರು ಕರೆದಾಗ ದೂಸರಾ ಮಾತನಾಡದೇ ಬರಲೊಪ್ಪಿದ್ದರು. ಸೇರಿದ್ದ ಎಲ್ಲ ಅಮ್ಮಂದಿರಿಗೆ ಅರ್ಥವಾಗುವ ಭಾಷೆಯಲ್ಲಿ ಮುಟ್ಟು, ಕಿಟ್ಟುಗಳ ಒಳಗುಟ್ಟುಗಳನ್ನು ಬಿಡಿಸಿ ಹೇಳಿದರು. ಮುಟ್ಟೆಂದು ಮುಟ್ಟದೇ ಮೀನಮೇಷ ಎಣಿಸಿ ಆಸ್ಪತ್ರೆಗೆ ತರಲು ತಡವಾಗಿ ಅಸುನೀಗಿದ ಗುಲಾಬಿಯ ನೆನಪಿನಲ್ಲಿ ಒಂದಿಷ್ಟು ಹೊತ್ತು ಮೌನಪ್ರಾರ್ಥನೆ ಮಾಡಿಸಿ ಅಗಲಿದ ಜೀವದ ಘನತೆಯನ್ನು ಎತ್ತಿಹಿಡಿದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಮೂಳೆ ಮಾಂಸದ ತಡಿಕೆ: ಸುಧಾ ಆಡುಕಳ ಅಂಕಣ

ಇವಳ ಜತೆಯಲ್ಲಿ ನಡೆಯುವ ಗೆಳತಿಯರು ಮೈ ಕೈ ತಾಗಿಸಿಕೊಳ್ಳದೇ ದೂರದೂರವೇ ನಡೆಯುವಾಗ ನೀಲಿಗೆ ಅಳುವೇ ಬಂದಂತಾಗಿತ್ತು. “ನಾ ಹೇಳದಿದ್ರೆ ನಿಮಗೆಲ್ಲ ನಾ ಮುಟ್ಟು ಅಂತ ಗೊತ್ತಾಗ್ತಾನೇ ಇರಲಿಲ್ಲ. ದಿನಾ ಶಾಲೇಲಿ ಅದೆಷ್ಟು ಹುಡುಗಿರು ಮುಟ್ಟಾಗಿ ಬರ್ತಾರೋ ಗೊತ್ತಿದ್ಯಾ?” ಎಂದು ಅವರನ್ನು ತಿದ್ದಲು ನೋಡಿದಳು. ಅದಕ್ಕವರು ಜಗ್ಗದೇ, “ಗೊತ್ತಾಗದಿದ್ರೆ ದೋಷ ಇಲ್ಲಾಂತ ನಮ್ಮಜ್ಜಿ ಹೇಳಿದಾರೆ. ಗೊತ್ತಾಗಿಯೂ ಮೈಲಿಗೆಯಾದ್ರೆ ಅದು ನಮ್ಮ ತಪ್ಪು.” ಎಂದು ಬೇರೆಯದೇ ವಾದ ಹೂಡಿದರು. ಬಸ್ ಹತ್ತಿದಾಗಲೂ ತನ್ನ ಸೀಟಿನಲ್ಲಿ ಪರಚಯದವರ‍್ಯಾರೂ ಕುಳಿತುಕೊಳ್ಳದಿದ್ದಾಗ ನೀಲಿ ಈ ಹುಡುಗಿಯರೆಲ್ಲ ಇಡಿಯ ಶಾಲೆಗೆ ಈ ವಿಷಯವನ್ನು ಡಂಗೂರ ಸಾರದಿದ್ದರೆ ಸಾಕೆಂದುಕೊಂಡಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಕಾಡುವ ಪ್ರಶ್ನೆಗಳ ಕಾಡಿನಲ್ಲಿ ನೀಲಿ: ಸುಧಾ ಆಡುಕಳ ಅಂಕಣ

ಸೀತಜ್ಜಿ, ಗೌರಜ್ಜಿ, ಅಮ್ಮಣ್ಣೆಜ್ಜಿ ಇವರ ಕತೆಗಳೂ ಇದಕ್ಕಿಂತ ಬೇರೆಯೇನಿರಲಿಲ್ಲ. ಅವರೆಲ್ಲರೂ ತಮ್ಮ ಮದುವೆಯ ಕತೆಯನ್ನು ಯಾವುದೇ ವಿಷಾದಗಳಿಲ್ಲದೇ ಹೇಳಿಕೊಳ್ಳುತ್ತಿದ್ದರು. ಆದರೆ ಇವರ ನಂತರದ ತರುವಾಯದವರಾದ ಕೆಂಪಿ, ಗಣಪಿ, ನಾಗವೇಣಿಯರು ತಮ್ಮ ಮದುವೆಯ ಕತೆಯನ್ನು ಇಷ್ಟು ತಣ್ಣಗೆ ಹೇಳುತ್ತಿರಲಿಲ್ಲ. ಅವರ ಮಾತುಗಳಲ್ಲಿ ಕಹಿ, ಸಿಟ್ಟು, ಹತಾಶೆ ಎಲ್ಲವೂ ಮಡುಗಟ್ಟಿದ್ದವು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿನೆಂಟನೆಯ ಕಂತು ನಿಮ್ಮ ಓದಿಗೆ

Read More

ಹೊಳೆಸಾಲಿನ ಮೊದಲ ಗ್ಯಾದರಿಂಗ್: ಸುಧಾ ಆಡುಕಳ ಅಂಕಣ

ಮರುದಿನ ಬೆಳಗಾಗುವ ಹೊತ್ತಿಗೆ ಮೈಕ್ ಮತ್ತದೇ ಮೂಷಿಕವಾಹನ ಹಾಡನ್ನು ಇನ್ನೂ ಮಧುರವಾಗಿ ಹಾಡತೊಡಗಿತು. ಯುವಕರ ದಂಡು ಒಂದಾಗಿ ಫಂಡಿನ ಬಂಟರನ್ನೆಲ್ಲ ಹೆಡೆಮುರಿ ಕಟ್ಟಿ ಒಂದು ದಿನದ ಮಟ್ಟಿಗೆ ಸದಾನಂದ ಹೆಗಡೆಯವರ ಉಪ್ಪರಿಗೆಯಲ್ಲಿ ಕೂಡಿಹಾಕಿತು. ಮಾಸ್ರ‍್ರ ಅಣತಿಯಂತೆ ಹೊಳೆಸಾಲಿನ ಲೈನ್‌ಮನ್ ರಾಮಪ್ಪ ಯಾರೂ ಕರೆಂಟಿನ ಡಬ್ಬಕ್ಕೆ ಕೈ ಹಾಕದಂತೆ ಟ್ರಾನ್ಸಫರ್ ಪೆಟ್ಟಿಗೆಯ ಹತ್ತಿರವೇ ಕಾವಲು ನಿಂತ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಹೊಳೆಸಾಲಿಗೆ ಬಂದ ಕೆಂಪು ಬಸ್ಸು: ಸುಧಾ ಆಡುಕಳ ಅಂಕಣ

ಈ ವಾರ ಅಣ್ಣ ಬಂದಾಗ ನೀಲಿ ಅಣ್ಣನಲ್ಲಿ ತನ್ನ ದುಗುಡವನ್ನು ಹೇಳಿಕೊಂಡಳು. ಅಣ್ಣ ಅವಳಿಗೆ ಸಮಾಧಾನ ಹೇಳಿದ. “ನೋಡು, ನೀನು ಮುಂದೆ ಓದುವ ಸ್ಕೂಲು ಇಲ್ಲಿಂದ ಅಷ್ಟೇನೂ ದೂರವಿಲ್ಲ. ದಿನವೂ ನಡೆದು ಹೋಗುವುದೊಂದು ಕಷ್ಟ. ಬೆಳಿಗ್ಗೆ, ಸಂಜೆ ಒಂದು ಬಸ್ ಆಯಿತೆಂದರೆ ಮನೆಯಿಂದಲೇ ಮುಂದಿನ ಶಾಲೆಗೆ ಹೋಗಬಹುದು.”
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿನಾರನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ