ಮರೆಯಲಾಗದ ರಾಜನೀತಿಜ್ಞ ಬಿ. ಸುಬ್ಬಯ್ಯ ಶೆಟ್ಟಿ: ರಂಜಾನ್ ದರ್ಗಾ ಸರಣಿ
ಬಾಕ್ರಬೈಲು ಸುಬ್ಬಯ್ಯ ಶೆಟ್ಟಿ ಅವರು 1972-1977 ಮತ್ತು 1978-1983 ಈ ಎರಡು ಅವಧಿಯಲ್ಲಿ ಸುರತ್ಕಲ್ ಶಾಸಕರಾಗಿದ್ದರು. ದೇವರಾಜ ಅರಸು ಅವರ ಮಂತ್ರಿಮಂಡಲದಲ್ಲಿ ಭೂಸುಧಾರಣಾ ಸಚಿವರಾದ ನಂತರ ವಾರ್ತಾ, ಇಂಧನ ಮತ್ತು ಶಿಕ್ಷಣ ಸಚಿವರಾಗಿ ಸೇವೆಸಲ್ಲಿಸಿದರು. ಶಿಕ್ಷಣದಲ್ಲಿಯೂ ಸುಧಾರಣೆ ತಂದರು. ರಾಜ್ಯದಲ್ಲಿ ಇಷ್ಟೊಂದು ಎಂಜಿನಿಯರಿಂಗ್ ಕಾಲೇಜುಗಳಾಗಲಿಕ್ಕೂ ಅವರೇ ಕಾರಣರು. ಕರ್ನಾಟಕದ ಎಲ್ಲ ಹೈಸ್ಕೂಲ್‌ಗಳಲ್ಲಿ ಮಹಿಳಾ ಕರಾಟೆ ಪಟುಗಳ ಮೂಲಕ ಹೆಣ್ಣುಮಕ್ಕಳಿಗೆ ಕರಾಟೆ ಕಲಿಸುವ ಕನಸನ್ನು ಹೊಂದಿದ್ದ ಅವರು ಆ ಕುರಿತು ಯೋಜನೆ ರೂಪಿಸಿದ್ದರು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
