ಬಾಲ್ಯದ ಅಟ, ಆ ಮೊಂಡಾಟ ಇನ್ನೂ ಮರೆತಿಲ್ಲ!: ಬಸವನಗೌಡ ಹೆಬ್ಬಳಗೆರೆ ಸರಣಿ
ನಮ್ಮ ಮನೆಯಲ್ಲೋ ರಾಗಿ ಮುದ್ದೆ ಊಟ ಇರುತ್ತಿತ್ತು. ಅದು ಕಪ್ಪಾಗಿ ಇರುತ್ತಿದ್ದರಿಂದ ಉಣ್ಣೋಕೆ ಅಳುತ್ತಿದ್ದೆ. ಅಜ್ಜಿ ಮನೆಯಲ್ಲಿ ಜೋಳದ ಮುದ್ದೆ ಬೆಳ್ಳಗೆ ಇರುತ್ತಿದ್ದರಿಂದ ಅದನ್ನು ಉಣ್ಣುತ್ತಿದ್ದೆ. ಒಮ್ಮೆ ಅಮ್ಮನ ಒತ್ತಾಯಕ್ಕೆ ಊಟ ಮಾಡಿ, ಕಕ್ಕಸ್ಸು ಕಪ್ಪಾದಾಗ ಬಹಳ ಬೇಸರವಾಗಿ ಮತ್ತೆ ಅಮ್ಮ ಉಣಿಸೋಕೆ ಬಂದಾಗ ಬಾಯೇ ತೆರೆಯದೇ ಊಟ ಮಾಡೋಕೆ ಹಠ ಮಾಡಿದ್ದೆ. ಅನ್ನಕ್ಕೆ ತತ್ವಾರ ಇದ್ದ ಕಾಲವದು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂರನೆಯ ಕಂತು