ಮಳೆರಾಯ ಬಂದ ಮಲ್ಲೆಹೂವು ತಂದ: ಚಂದ್ರಮತಿ ಸೋಂದಾ ಸರಣಿ
ಚೌತಿಹಬ್ಬ ಮುಗಿಯಿತು ಎಂದರೆ ಮಳೆಗೆ ತುಸು ಬಿಡುಗಟ್ಟು. ಎಲ್ಲಕಡೆ ಬಣ್ಣಬಣ್ಣದ ಚಿಟ್ಟೆಗಳ ಮೇಳ. ನಮ್ಮೊಳಗೆ ಅವುಗಳನ್ನು ಹಿಡಿಯುವ ಸ್ಪರ್ಧೆ. ಇನ್ನೇನು ಕೈಗೆ ಸಿಕ್ಕೇಬಿಟ್ಟಿತು ಎನ್ನುವಷ್ಟರಲ್ಲಿ ಮಾಯ. ಆಗ ಮರಳಿ ಯತ್ನವ ಮಾಡು. ಅವು ಅಷ್ಟು ಸುಲಭವಾಗಿ ನಮ್ಮ ಕೈಗೆ ಸಿಗುತ್ತಿರಲಿಲ್ಲ. ಇನ್ನೊಂದು ಬಗೆಯ ಚಿಟ್ಟೆಗಳು ಹಾರಾಡುತ್ತಿದ್ದವು. ಅವು ನಮಗೆ ಆಕರ್ಷಕವಾಗಿ ಕಾಣಿಸುತ್ತಿರಲಿಲ್ಲ. ನಾವು ಅವನ್ನು ಕರೆಯುತ್ತಿದ್ದದು ವಿಮಾನ ಎಂದು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಐದನೆಯ ಕಂತಿನಲ್ಲಿ ಆಗಿನ ಮಳೆ ದಿನಗಳ ಕುರಿತ ಬರಹ