Advertisement

Tag: Kannada

ಮೆಲ್ಲಗೆ ಗದರುವ ನನ್ನ ಅಪರ್ಣೇ…: ನಾಗರಾಜ ವಸ್ತಾರೆ ಬರಹ

ಸಮಾರಂಭದ ಬಳಿಕ ಇವಳ ಬದಿಯಲ್ಲಿ ನಾನು ಕಾರಿನತ್ತ ಸರಿಯುತ್ತಿರುವಾಗ ಮುಖ್ಯಮಂತ್ರಿಗಳ ಕಾರು ನಮ್ಮನ್ನು ಬಳಸಿತು. ಇವಳನ್ನು ನೋಡಿದ್ದೇ ಅವರು ಕಾರು ನಿಲ್ಲಿಸಲು ಹೇಳಿ, ಇಳಿದು ಅವತ್ತಿನ ನಿರೂಪಣೆಯನ್ನು ಹೊಗಳಿದರು. ಸುಮಾರು ಹತ್ತು ನಿಮಿಷ. ಸುಮ್ಮನೆ ಶ್ರೋತೃವಾದೆ. ಬೀಳ್ಕೊಡುವಾಗ- ಸರ್, ಇವರು ನನ್ನ ಹಸ್ಬೆಂಡ್ ಅಂತ ಪರಿಚಯಿಸಿದಳು.
ನೆನ್ನೆ ರಾತ್ರಿ ತೀರಿಕೊಂಡ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಕುರಿತು ಅವರ ಪತಿ, ಕತೆಗಾರ ನಾಗರಾಜ ವಸ್ತಾರೆ ಬರೆದಿದ್ದ ಬರಹವೊಂದು ನಿಮ್ಮ ಓದಿಗೆ

Read More

ಮರುಭೂಮಿಯ ತುರಗ ಲಹರಿ: ಅಚಲ ಸೇತು ಬರಹ

ನಾವಿರುವ ನೆವಾಡಾ ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಮಸ್ಟಾಂಗ್ ಕುದುರೆಗಳನ್ನು ಹೊಂದಿರುವ ರಾಜ್ಯವಾಗಿದೆ. ಐವತ್ತು ಸಾವಿರಕ್ಕೂ ಹೆಚ್ಚು ಕಾಡು ಕುದುರೆಗಳು ಅತ್ಯಂತ ವಿಸ್ತಾರವಾದ ‘ಹಿಂಡು ನಿರ್ವಹಣ ಪ್ರದೇಶ’ ಗಳಲ್ಲಿ ತಮ್ಮ ಪಾಡಿಗೆ ತಾವು ಇತರ ಕಾಡು ಪ್ರಾಣಿಗಳಂತೆ ಓಡಾಡಿಕೊಂಡಿವೆ. ಇವುಗಳನ್ನು ಹಿಡಿಯುವುದು ಹಾಗು ಕೊಲ್ಲುವುದು ಕಾನೂನುಬಾಹಿರ.
ಕುದುರೆಗಳ ಕುರಿತು ಅಚಲ ಸೇತು ಬರಹ ನಿಮ್ಮ ಓದಿಗೆ

Read More

ಕನ್ನಡತನ ಜ್ವಲಿಸುವ ವಿಶೇಷ ತಿಂಗಳು: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾದಲ್ಲಿ ಹುಟ್ಟಿ ಬೆಳೆಯುವ ಕನ್ನಡಿಗ ದಂಪತಿಗಳ ಮಕ್ಕಳು ಕನ್ನಡದಲ್ಲಿ ಮಾತನಾಡುವುದು ಕಡಿಮೆ. ಒಂದುವೇಳೆ ಅವರು ಕಷ್ಟಪಟ್ಟು ಪ್ರಯತ್ನಿಸಿದರೂ ಅವರುಗಳು ಪ್ರತಿದಿನವೂ ಮಾತನಾಡುವ ಆಸ್ಟ್ರೇಲಿಯನ್ ಇಂಗ್ಲಿಷ್ ಉಚ್ಚಾರದ ಪ್ರಭಾವದಲ್ಲಿ ತಮ್ಮ ಕನ್ನಡವನ್ನು ಹೊರಡಿಸಿದಾಗ ಮಿಶ್ರಿತ ಭಾವಗಳು ಏಳುತ್ತವೆ. ಕರ್ನಾಟಕದಲ್ಲಿಯೇ ಹುಟ್ಟಿ ಕೆಲವರ್ಷ ಅಪ್ಪಟ ಕನ್ನಡತನದಲ್ಲಿ ಅಲ್ಲಿಯೇ ಬೆಳೆದು ತಮ್ಮ ಬಾಲ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಬರುವ ಮಕ್ಕಳು ಕೆಲವೇ ವರ್ಷಗಳಲ್ಲಿ ಆಸ್ಟ್ರೇಲಿಯನ್ ಇಂಗ್ಲಿಷ್ – ಕನ್ನಡವನ್ನು ರೂಢಿಸಿಕೊಳ್ಳುತ್ತಾರೆ. ಅಪ್ಪ-ಅಮ್ಮ ಕನ್ನಡದಲ್ಲಿ ಮಾತನಾಡಿಸುವಾಗ ಈ ಮಕ್ಕಳು ಇಂಗ್ಲೀಷಿನಲ್ಲಿ ಉತ್ತರಿಸುವುದು ಸರ್ವೇಸಾಮಾನ್ಯ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಮಕ್ಕಳನ್ನು ಪೊರೆವ ಮಾತೃಭಾಷೆ ಕಲಿಸಿ: ಸದಾಶಿವ ಸೊರಟೂರು ಬರಹ

ಆರಂಭದಲ್ಲಿ ಮಗುವಿನ ಭಾಷೆಯಲ್ಲದೆ ಬೇರೆ ಭಾಷೆಯಲ್ಲಿ ಕಲಿಸುವ ವಿಚಾರಗಳು ಮಗುವಿಗೆ ಆಪ್ತವಾಗುವುದಿಲ್ಲ. ಬೇರೆ ಭಾಷೆಯಿಂದ ತಿಳುವಳಿಕೆ ಸಿಗಬಹುದು, ಒಳ್ಳೆಯ ನೌಕರಿ ಸಿಗಬಹುದು; ಬದುಕಿನ ರುಚಿ ಸಿಗುವುದಿಲ್ಲ. ನೆನಪಿರಲಿ ಮಗು ಕನ್ನಡ ಕಲಿತಿದೆ ಅಂದರೆ ಬರೀ ಭಾಷೆ ಕಲಿಯುತ್ತಿದೆ ಎಂದರ್ಥವಲ್ಲ; ಕನ್ನಡದ ಸಂಸ್ಕೃತಿಯನ್ನು ಕಲಿಯುತ್ತಿದೆ ಎಂದರ್ಥ.
ಕನ್ನಡ ರಾಜ್ಯೋತ್ಸವದ ನಿಮಿತ್ತ ಯಾವುದೇ ಕಲಿಕೆಗೂ ಮಾತೃಭಾಷೆ ಮಕ್ಕಳಿಗೆ ಎಷ್ಟು ಮುಖ್ಯ ಎಂಬುದರ ಕುರಿತು ಸದಾಶಿವ ಸೊರಟೂರು ಬರಹ ನಿಮ್ಮ ಓದಿಗೆ

Read More

ಗೋಡೆ ಮೇಲಿನ ಮಗಳ ಬರಹ ತರಲಾಗಲಿಲ್ಲ….

ಈಗಷ್ಟೇ ಬರೆಯಲು ಕಲಿಯುವ ಮಗುವಿನ ಗೋಡೆಯ ಮೇಲಿನ ಬರಹದಂತೆ ವಕ್ರ ವಕ್ರ… ಕವಿ ತಿರುಮಲೇಶರು ಹೇಳಿದಂತೆ ಎಲ್ಲ ಆರಂಭಗಳೂ ಅನುಮಾನದಲ್ಲೇ! ಬಾಡಿಗೆ ಮನೆಯಲ್ಲಿದ್ದ ಕವಿಯೊಬ್ಬ ಮನೆ ಬದಲಿಸುವಾಗ ಎಲ್ಲಾ ಸಾಮಾನುಗಳನ್ನು ಹೊಸ ಮನೆಗೆ ಒಯ್ದರೂ ಗೋಡೆಯ ಮೇಲೆ ಈಗ ಬೆಳೆದು ದೊಡ್ಡವಳಾದ ಮಗಳ ಗೋಡೆಯ ಗೀರುಗಳನ್ನು ತರಲಾಗಲಿಲ್ಲವೆಂಬ ತಹ ತಹಿಕೆಯ ಕವಿತೆ ಇದೆ. ಕೇವಲ ಗೆರೆಗಳು ಮಾತ್ರವಲ್ಲ, ಸೊಟ್ಟು ಮೂತಿಯ ಪ್ರಾಣಿ, ರೆಕ್ಕೆಯಿಲ್ಲದ ಹಕ್ಕಿ, ಬೆಟ್ಟ…
ಕೈಬರಹದ ಕುರಿತು ಡಾ. ಲಕ್ಷ್ಮಣ ವಿ. ಎ. ಬರಹ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ