ಕೇಶವ ಮಳಗಿ ಬರೆದ ‘ಗುಂಡಿಗೆಯ ಬಿಸಿರಕ್ತʼ ಪುಸ್ತಕದ ಪ್ರವೇಶಿಕೆ…
“ದೇಶಭ್ರಷ್ಟತೆಯನ್ನು ಆಯ್ದುಕೊಂಡ ಲೇಖಕರು ದಕ್ಷಿಣ ಆಫ್ರಿಕದ ಕುರಿತು ವಿಫುಲವಾಗಿ ಬರೆಯತೊಡಗಿದರು. ಅದಕ್ಕಾಗಿ ವಿವಿಧ ಪ್ರಕಾರಗಳನ್ನುಆಯ್ದುಕೊಂಡರು. ಅವುಗಳಲ್ಲಿ ಆತ್ಮಚರಿತ್ರೆ ಅತ್ಯಂತ ಪ್ರಿಯವಾದ ಪ್ರಕಾರವಾಯಿತು. ಅನುಭವ ಕಥನವು ಆತ್ಮಚರಿತ್ರೆಯ ರೂಪದಲ್ಲಿ, ಹೊಸ ಪದವಿನ್ಯಾಸದಲ್ಲಿ ಗೋಚರಿಸತೊಡಗಿತು. ಪರದೇಸಿಗರಾದ ದಕ್ಷಿಣ ಆಫ್ರಿಕನ್ ಬುದ್ಧಿಜೀವಿಗಳಿಗೆ ಆತ್ಮಕಥೆ ಹೊಸ ಅಸ್ತಿತ್ವವನ್ನು ನೀಡಿದ ಪ್ರಕಾರವಾಯಿತು. ಇತ್ತ, ತಾಯ್ನೆಲದಲ್ಲಿ ಭಾವಗೀತೆ ಅರಳತೊಡಗಿತ್ತು. ಕಾವ್ಯಾಭಿವ್ಯಕ್ತಿಗೆ ಹೊಸಬರು ಸೇರಿಕೊಂಡಂತೆಲ್ಲ ಅಭಿವ್ಯಕ್ತಿ ರೂಕ್ಷವಾಗತೊಡಗಿತು.”
ಕೇಶವ ಮಳಗಿ ಬರೆದ ‘ಗುಂಡಿಗೆಯ ಬಿಸಿರಕ್ತ: ಆಫ್ರಿಕನ್ ಸಂಕಥನ’ ಪುಸ್ತಕದ ಪ್ರವೇಶಿಕೆ ನಿಮ್ಮ ಓದಿಗೆ