ದೊಡ್’ ಅಮ್ಮ, ಚಿಕ್’ ಅಮ್ಮ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ
“ಸಾಮಾನ್ಯವಾಗಿ ‘ಚಿಕನ್ ಪಾಕ್ಸ್’ ಒಮ್ಮೆ ಬಂದ್ರೆ ಮತ್ತೊಮ್ಮೆ ಬರಲ್ಲ ಕಾವ್ಯ. ಇದು ವೈರಲ್ ಜ್ವರ ಅಲ್ವಾ? ಮುಂಚೆ ನನಗೂ, ಅಕ್ಕನಿಗೂ, ಬಾವನಿಗೂ ನಮ್ಮ ನಮ್ಮ ಬಾಲ್ಯದಲ್ಲಿ ಈ ಚಿಕ್ಕ ‘ಅಮ್ಮ’ ಬಂದಿತ್ತು. ನಮ್ಮ ದೇಹಕ್ಕೆ, ನಮ್ಮ ರೋಗ ನಿರೋಧಕ ವ್ಯವಸ್ಥೆಗೆ ಈ ‘ವೈರಸ್’ನ ನೆನಪು ಖಂಡಿತವಾಗಿ ಇರತ್ತೆ. ಈ ವೈರಸ್ ಪುನಃ ಬಂದ್ರೆ, ಯಾವ ರೀತಿ ಅದನ್ನ ಹೊಡೆದು ಉರುಳಿಸಬೇಕು ಎಂಬ ಯುದ್ಧನೀತಿ ಗೊತ್ತಿರೋ ‘ಬಿ ಮತ್ತು ಟಿ ಮೆಮೊರಿ ಸೆಲ್ಸ್’ ಈಗಾಗ್ಲೇ ನಮ್ಮ ದೇಹದಲ್ಲಿ ಇರತ್ವೆ.”
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ಯಲ್ಲಿ ಆರನೆಯ ಕತೆ
