Advertisement

Tag: LG Meera

ಬದುಕು ಎಂಬ ಶಿಕ್ಷಕ, ಮನುಷ್ಯ ಎಂಬ ವಿದ್ಯಾರ್ಥಿ: ಎಲ್.ಜಿ.ಮೀರಾ ಅಂಕಣ

ಬದುಕಿನ ಅನಿಶ್ಚಿತತೆ, ಮನುಷ್ಯನ ಬದುಕಿನಲ್ಲಿ ವಿಧಿಯು ಆಡುವ ಆಟ, ಎಷ್ಟೇ ಪ್ರಯತ್ನ ಮಾಡಿದರೂ ತನ್ನ ವಿಧಿಯಲ್ಲಿ ಬರೆದ ದುರಂತದಿಂತ ತಪ್ಪಿಸಿಕೊಳ್ಳಲಾಗದ ಮನುಷ್ಯನ ಅಸಹಾಯಕತೆ – ಇವುಗಳನ್ನು ಈ ಮಹಾನ್ ನಾಟಕ ಮನೋಜ್ಞವಾಗಿ ಹೇಳುತ್ತದೆ. ಒಂದು ಸಂದರ್ಭದಲ್ಲಿ `ಅಯ್ಯೋ, ದುರ್ವಿಧಿಯೇ? ನಾಳೆ ಎಂಬುದು ಏನೆಂದು ಗೊತ್ತಿರದ ಮನುಷ್ಯನ ಪಾಡೆ!! ಓಹ್ …. ಅಯ್ಯೋ .., ಸಾಯುವವರೆಗೂ ಯಾರನ್ನೂ ಸುಖಿ ಅನ್ನಬೇಡ’’ ಎಂಬ ಮಾತನ್ನು ನಾಟಕಕಾರ ಸಫೋಕ್ಲಿಸ್ ಒಂದು ಎಚ್ಚರಿಕೆಯೆಂಬಂತೆ, ಒಂದು ಪಾತ್ರದ ಬಾಯಿಂದ ಹೇಳಿಸಿದ್ದಾನೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ನಾರಿ ಮತ್ತು ವಾಹನ ಸವಾರಿ – ಸಬಲೀಕರಣದ ಪರಿಣಾಮಕಾರಿ ದಾರಿ!: ಡಾ.ಎಲ್.ಜಿ.ಮೀರಾ ಅಂಕಣ

ನಮ್ಮ ಜೀವನವೆಂಬ ವಾಹನದ ಚಾಲಕಪೀಠದಲ್ಲಿ ಯಾರಿದ್ದಾರೆ? ನಾವೋ ಅಥವಾ ಬೇರೆ ಯಾರಾದರೂ ಅಧಿಕಾರಸ್ಥರೋ? ಗಂಡಾಳಿಕೆಯ ಸಮಾಜಗಳಲ್ಲಿ ಹೆಣ್ಣು ತನ್ನ ಜೀವನದ ಚಾಲಕ ಪೀಠದಲ್ಲಿ ಕುಳಿತಿದ್ದು ತೀರಾ ಅಪರೂಪ. ಅವಳು ಏನು ತಿನ್ನಬೇಕು, ಕುಡಿಯಬೇಕು, ಯಾವ ಬಟ್ಟೆ ತೊಡಬೇಕು ಮುಂತಾದ ಸಾಧಾರಣ, ದೈನಿಕ ಸಂಗತಿಗಳಿಂದ ಹಿಡಿದು ಓದು, ಕೆಲಸ, ಮದುವೆ, ಆಸ್ತಿಗಳಿಕೆಗಳಂತಹ ಮುಖ್ಯ ವಿಷಯಗಳ ತನಕ ಮನೆಯ ಗಂಡಸರೋ ಅಥವಾ ಅವರ ಪ್ರತಿನಿಧಿಗಳಾದವರೋ ನಿರ್ಧರಿಸುವ ಕಾಲ ಅನೇಕ ಶತಮಾನಗಳ ತನಕ ಇತ್ತಲ್ಲ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಮಕ್ಕಳನ್ನು ಬೆಳೆಸುವ `ಕಲೆ’- ಎಂದಾದರೂ ಸಿದ್ಧಿಸೀತೇ?: ಎಲ್.ಜಿ.ಮೀರಾ ಅಂಕಣ

ಬೆಳಿಗ್ಗೆ ಏಳುವ ಸಮಯದಿಂದ ಹಿಡಿದು ರಾತ್ರಿ ಮಲಗುವ ಸಮಯದ ತನಕ ಪ್ರತಿಯೊಂದೂ ಅಂದರೆ ಇಂಚಿಂಚು ಜೀವನವೂ ನಿರ್ಬಂಧಮಯವಾದ ಜೀವನಶೈಲಿ ಇರುವ ಸನ್ನಿವೇಶ ಇದು. ಮಕ್ಕಳನ್ನು ಅದರಲ್ಲೂ ವಿಜ್ಞಾನ ಶಿಕ್ಷಣ ಆರಿಸಿಕೊಂಡವರಿಗೆ ಜಂಗಮವಾಣಿಯನ್ನು ಮುಟ್ಟಲೂ ಬಿಡದ, ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳಿಗೆ ತೊಡಗಿಸದ ಮನೆಗಳಿವೆ, ವಿದ್ಯಾರ್ಥಿನಿಲಯಗಳಿವೆ! ಈ ವ್ಯವಸ್ಥೆಗೆ ಕೆಲವು ಮಕ್ಕಳು ಹೇಗೋ ಹೊಂದಿಕೊಂಡರೆ ಇನ್ನು ಕೆಲವರು ಆ `ಸೆರೆಮನೆ’ಯಿಂದ ಓಡಿ ಹೋಗಿಬಿಡುವುದು, ಅಥವಾ ದಿಕ್ಕು ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುವುದು ಇಂತಹ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿನೇಳನೆಯ ಬರಹ

Read More

ಹೆಣ್ಣಿನ ಉಡುಪು ಎಂಬ ಯುದ್ಧಭೂಮಿ: ಡಾ.ಎಲ್.ಜಿ.ಮೀರಾ

ನಾವು ಹೆಂಗಸರು ಹಲವು ಬಗೆಯಲ್ಲಿ ಸೃಷ್ಟಿಯಾಗಿರುತ್ತೇವೆ, ಅಲ್ಲದೆ ವಯಸ್ಸು, ಕಾಲ, ಸಂದರ್ಭ ಬದಲಾದಂತೆ ನಮ್ಮ ಆಯ್ಕೆಗಳು ಬದಲಾಗುತ್ತಿರುತ್ತವೆ. ನಮ್ಮಲ್ಲಿ ಅಲಂಕಾರದ ಗಾಢ ಅಭಿರುಚಿ ಇರುವವರು ಇದ್ದಂತೆ ಅದರ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲದವರೂ ಇರುತ್ತೇವೆ. ನಮಗೆ ಬೇಸರ ತರಿಸುವ ವಿಷಯ ಏನೆಂದರೆ ನಮ್ಮ ಒಳಗಿನ ಗುಣ, ಜೀವನದೃಷ್ಟಿ, ಚಿಂತನೆ ಇವುಗಳಿಗೆ ಪ್ರಾಮುಖ್ಯ ಕೊಡದೆ ಕೇವಲ ಸೀರೆ, ಒಡವೆ, ಮುಖಬಣ್ಣಗಳಿಂದ ನಮ್ಮನ್ನು ಅಳೆದುಬಿಡುವ ಸಮಾಜದ ಧೋರಣೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ