ಬಾರ್ಡೋಲಿಯ ಸರ್ದಾರರ ಬ್ಯಾರಿಸ್ಟರ್ ದಿನಗಳು
ಹೈಸ್ಕೂಲಿನಲ್ಲಿ ಕೋಲಿನಿಂದ ಯಾವಾಗಲೂ ಮಕ್ಕಳನ್ನು ವಿಪರೀತ ಹೊಡೆಯುತ್ತಿದ್ದ, ವಿದ್ಯಾರ್ಥಿಗಳಿಗೆ ದೊಡ್ಡ ದಂಡ ವಿಧಿಸುತ್ತಿದ್ದ ಶಿಕ್ಷಕರೊಬ್ಬರ ವರ್ತನೆಯನ್ನು ಪ್ರತಿಭಟಿಸಿ ಗಲಾಟೆ ಮಾಡಿದ್ದರು. ಸಹವಿದ್ಯಾರ್ಥಿಗಳನ್ನು ಸಂಘಟಿಸಿ ತರಗತಿ ಬಹಿಷ್ಕರಿಸಿದ್ದರು. ಪಟೇಲರು ಸಂಘಟಿಸಿದ ಶಾಲಾದಿನಗಳ ಮೊದಲ ಮುಷ್ಕರ ಮೂರನೆಯ ದಿನಕ್ಕೆ ಕಾಲಿಟ್ಟಾಗ, ಹುಡುಗನ ನಾಯಕತ್ವ ಮತ್ತು ಸಂಘಟನೆಯನ್ನು ಗುರುತಿಸಿದ ಪ್ರಾಂಶುಪಾಲರು ಮಧ್ಯ ಪ್ರವೇಶಿಸಿ, ವಿದ್ಯಾರ್ಥಿಗಳನ್ನು ಮುಂದೆಂದೂ ಆ ಅಧ್ಯಾಪಕರು ಕಟುವಾಗಿ ಶಿಕ್ಷಿಸದಿರುವ ಆಶ್ವಾಸನೆ ನೀಡಿದರು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಯೋಗೀಂದ್ರ ಮರವಂತೆ ಬರಹ