ಶಾಂತಿನಾಥರೊಂದಿಗೆ ಸ್ಕಾಚ್…
ಶಾಂತಿನಾಥರ ಸಾಹಿತ್ಯ ಆಗಿನ ಕಾಲಕ್ಕೂ ಹೊಸ ಮತ್ತು ಯಾರೂ ಪ್ರಯತ್ನಿಸಿರದ ಆಯಾಮಗಳನ್ನು ತೆರೆದಿಡುತ್ತಿತ್ತು ಎನ್ನುವುದು ನಿಜ. ಹೀಗೆ ಮಡಿವಂತಿಕೆಯೇ ಇಲ್ಲದೇ ಬರೆಯುತ್ತಿದ್ದ ಶಾಂತಿನಾಥರು ಯಾವುದೇ ವಿವಾದಕ್ಕೆ ಒಳಗಾಗಲಿಲ್ಲ. ತಮ್ಮಷ್ಟಕ್ಕೆ ತಾವು ನಿರ್ಭಿಢೆಯಿಂದ ಬರೆದರು. ತಮ್ಮ ವಿಸ್ತಾರವಾದ ಸಾಹಿತ್ಯ- ಮಾನಸಶಾಸ್ತ್ರ – ಸಮಾಜಶಾಸ್ತ್ರ – ರಾಜಕೀಯದ ಓದು ಮತ್ತು ಒಳನೋಟಗಳ ಹಿನ್ನೆಲೆ ಅವರ ಕಥೆಯ ಕಟ್ಟುವಿಕೆಯಲ್ಲಿದೆ.
“ಶಾಂತಿನಾಥ ದೇಸಾಯಿ ಸಾಹಿತ್ಯ-ವ್ಯಕ್ತಿತ್ವ” ಕೃತಿಯಲ್ಲಿ ಎಂ.ಎಸ್.ಶ್ರೀರಾಮ್ ಬರೆದ ಲೇಖನ ನಿಮ್ಮ ಓದಿಗೆ