ಗಣಿಗಾರಿಕೆ ಎಂಬ ಭೂಗತ ಜಗತ್ತಿನ ಅನಾವರಣ
ಮಿಂಚು ಹುಳುವಿನಂತೆ ಹೊಳೆಯುತ್ತಿದ್ದ ಆಫ್ರಿಕಾದ ‘ಡರ್ಬನ್’ ಕಡಲ ತೀರ ಸ್ವಲ್ಪ ಸ್ವಲ್ಪವೇ ಗೋಚರಿಸತೊಡಗಿತ್ತು. ಮತ್ತೂ ಮತ್ತೂ ಹತ್ತಿರವಾದಂತೆ ಕಡಲು ಮುಗಿಯಲೇ ಇಲ್ಲ. ಹಡಗಿನೊಳಗಿದ್ದ ಯಾರೂ ತೀರ ಕಂಡ ಬಳಿಕ ನಿದ್ರೆ ಮಾಡಿರಲಿಲ್ಲ. ಅಂತೂ ಬೆಳಗಿನ ಜಾವ ಸುಮಾರು ನಾಲಕ್ಕು ಗಂಟೆಯ ವೇಳೆಗೆ ಹಡಗು ಬಂದರು ತಲುಪಿತು. ಬರೋಬ್ಬರಿ ೭೨ ದಿನಗಳ ತರುವಾಯ ಹೊಸ ಮನುಷ್ಯರು, ಭೂಮಿ ಅವರ ಕಣ್ಣಿಗೆ ಬಿದ್ದಿತ್ತು.
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರು ಕಾದಂಬರಿಯ ಒಂಭತ್ತನೇ ಕಂತು.