ಎರಡು ತಪ್ಪೊಪ್ಪಿಗೆ: ಕೆ. ಸತ್ಯನಾರಾಯಣ ಪ್ರವಾಸ ಸರಣಿ
“ನೋಡು, ಡ್ಯಾಡಿ, ಬದಲಾವಣೆ ಅಂದರೆ, ಪ್ರಧಾನ ಮಂತ್ರಿಗಳ, ಸರ್ಕಾರಗಳ, ರಾಜಕೀಯ ಪಕ್ಷಗಳ ಬದಲಾವಣೆ ಅಲ್ಲ. ನಮ್ಮ, ನಮ್ಮ ಮನೆ, ಮನಸ್ಸುಗಳಲ್ಲಿ ಆಗುತ್ತಿರುವ ಬದಲಾವಣೆಗಳು. ಅದಕ್ಕೆ ನಮ್ಮ ಪ್ರತಿರೋಧ, ಹೊಂದಾಣಿಕೆ ಇವುಗಳನ್ನು ಅರ್ಥ ಮಾಡಿಕೊಳ್ಳುವುದು ಕೂಡ ಮುಖ್ಯ. ಮಕ್ಕಳ ಲಾಲನೆ, ಪಾಲನೆ ಹೆಂಗಸರ ಕರ್ತವ್ಯ ಮಾತ್ರ ಎಂಬ ಧೋರಣೆಯೇ ಬದಲಾಗಬೇಕು, ಬದಲಾಗುತ್ತಿದೆ.”
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿ