“ಆ ಕಾಲದ ರಾಜಲಕ್ಷ್ಮಿ…” ಸರಣಿ ಆರಂಭ
ರಾಜಲಕ್ಷ್ಮಿ ಎನ್. ರಾವ್ ಅವರನ್ನು ಅವರ ಕತೆಗಳ ಮೂಲಕ ಪರಿಚಯ ಮಾಡಿಕೊಂಡು ಸುಮಾರು ಮೂವತ್ತು ವರುಷಗಳ ಮೇಲಾಯಿತು. ನನ್ನ ಅಧ್ಯಯನ ಮತ್ತು ವೆಂಕಟಲಕ್ಷ್ಮಿಯವರ ಸಂದರ್ಶನದ ಒಟ್ಟು ಮೊತ್ತವಾಗಿ ನಾನು ಕಂಡುಕೊಂಡ ಕತೆಗಾರ್ತಿ ರಾಜಲಕ್ಷ್ಮಿಯವರು ಬೆರಗು ಹುಟ್ಟಿಸಿದರು. ಸುಮಾರು ಹತ್ತು ಹನ್ನೆರೆಡು ವರ್ಷಗಳ ಹಿಂದೆ ಸನ್ಯಾಸಿನಿಯಾದ ಅವರನ್ನು ನಾನು ಅವರ ಆಶ್ರಮದಲ್ಲಿ ಭೇಟಿಯಾದಾಗ ಆ ಬೆರಗು ಬೆಳಕಾಗಿ ನನ್ನ ಮುಂದೆ ನಿಂತಿತ್ತು. ಆ ಬೆಳಕು ಈಗ ವಿಸ್ಮಯವಾಗಿದೆ.
ಗಿರಿಜಾ ಶಾಸ್ತ್ರಿ ಬರೆಯುವ ಸರಣಿ “ಆ ಕಾಲದ ರಾಜಲಕ್ಷ್ಮಿ” ಪ್ರತಿ ಶುಕ್ರವಾರದಂದು ನಿಮ್ಮ ಕೆಂಡಸಂಪಿಗೆಯಲ್ಲಿ