ದೌರ್ಬಲ್ಯಗಳಿಲ್ಲದ ಸ್ವಾಭಿಮಾನಿ ನನ್ನಪ್ಪನೇ ನನಗೆ ಮಾದರಿ
ಅಂದು ನನ್ನ ತಂದೆ ಸಂಭ್ರಮಿಸಿದ್ದು ಒಂದು ರೂಪಕವಾಗಿ ಮನದಲ್ಲಿ ಉಳಿದಿದೆ. ಅವರೆಲ್ಲ ಚೂಡಾ ತಿಂದ ಮೇಲೆ ಲಿಂಗಾಯತರಾದ ಶಿವಪ್ಪನವರಿಗೆ ಸಮೀಪದ ಲಿಂಗಾಯತರ ಮನೆಯಿಂದ ನೀರು ತಂದು ಕೊಟ್ಟ ನಂತರ ಅವರು ನೀರು ಕುಡಿದರು! ಆದರೆ ತಾಯಿ ಮಾಡಿಕೊಟ್ಟ ಚಹಾವನ್ನು ಎಲ್ಲರ ಜೊತೆ ಶಿವಪ್ಪ ಅವರೂ ಕುಡಿದರು. ಇದೆಲ್ಲ ನನಗೆ ವಿಚಿತ್ರ ಎನಿಸಿತು. ಅದೇ ನಳದ ನೀರು. ಲಿಂಗಾಯತರ ಮನೆಗೆ ಹೊಕ್ಕಾಗ ಅದು ಹೇಗೆ ಶುದ್ಧವಾಗುವುದು? ಆ ‘ಶುದ್ಧ’ ನೀರನ್ನು ನನ್ನ ತಂದೆ ತರುವಾಗ ಅಶುದ್ಧವಾಗುವುದಿಲ್ಲವೆ?
Read More