ಸೀರೆಯ ಸೆರಗಿನಲ್ಲಿ ಅನ್ನ-ಸಾರು….!
ಹೊಸಪೇಟೆಯ ಬಡತನ ನನ್ನನ್ನು ದಿಗಿಲು ಬಡಿಸಿತು. ಬೆಳಗಿನ ನಾಷ್ಟಾ ಮತ್ತು ಮಧ್ಯಾಹ್ನದ ಊಟದ ವೇಳೆ, ತಂತಿಬೇಲಿಯ ಆಚೆ ಬಡವರು ಅನ್ನಕ್ಕಾಗಿ ಕಾಯುತ್ತಿದ್ದರು. ನಮಗೆ ಇಲ್ಲಿ ಬೇಕಾದಷ್ಟು ಆಹಾರ ನೀಡುತ್ತಿದ್ದರು. ನನ್ನ ಕೆಲವರು ಗೆಳೆಯರಿಗೆ ಆ ನಿರ್ಗತಿಕರ ಬಗ್ಗೆ ತಿಳಿಸಿ ಒಂದು ಯೋಜನೆ ರೂಪಿಸಿದೆ. ನಾವೆಲ್ಲ ಹೆಚ್ಚಿಗೆ ಅನ್ನ ಹಾಕಿಸಿಕೊಳ್ಳುವುದು. ಸ್ವಲ್ಪ ತಿಂದ ಹಾಗೆ ಮಾಡಿ ಅವರ ಬಳಿ ಹೋಗುವುದು. ಆ ಬಡ ಹೆಣ್ಣುಮಕ್ಕಳು ಸೆರಗೊಡ್ಡುವುದು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 62ನೇ ಕಂತು ನಿಮ್ಮ ಓದಿಗೆ.