ಸೌರಭಾ ಕಾರಿಂಜೆ ಬರೆದ ಈ ಭಾನುವಾರದ ಕಥೆ
ಬೆಳಿಗ್ಗೆ ತುಂಬಿಸಿಕೊಂಡ ದೋಸೆ ಡಬ್ಬಿ ಹಾಗೇ ಇದೆ ಎಂಬುದು ನೆನಪಾಯಿತು ಅವಳಿಗೆ. ಕೊಟ್ಟು ಬಿಡಲೇ ಅನಿಸಿತು ಒಮ್ಮೆ. ಮನೆಗೆ ಹೋಗಿ ತಿನ್ನಬಹುದು ತಾನು. ಆದರೆ ಇವನಿಗೆ ಬೇಕಾದದ್ದು ದುಡ್ಡು, ಊಟ ಅಲ್ಲ, ಆ ದುಡ್ಡನ್ನು ಕಬಳಿಸಲು ನಮೂನೆ ನಮೂನೆಯ ಪ್ರಯತ್ನ ಅನ್ನಿಸಿ ಮನಸ್ಸೆಲ್ಲಾ ಕಹಿಯಾಯಿತು. ಜೊತೆಗೆ ಬಾಯಿಯೂ ಕಹಿಯಾಯಿತು. ಬಾಯಿಯಲ್ಲಿ ತುಂಬಿಕೊಂಡಿದ್ದ ಎಂಜಲನ್ನು ನುಂಗಲು ಅಸಹ್ಯವಾಗಿ ಉಗುಳುವ ಒತ್ತಡ ಉಂಟಾಯಿತು. ಯಾವತ್ತೂ ರಸ್ತೆಯಲ್ಲಿ ಉಗುಳಿದವಳಲ್ಲ. ಮುಜುಗರ ಒತ್ತಿ ಬಂತು.
ಸೌರಭಾ ಕಾರಿಂಜೆ ಬರೆದ ಕಥೆ “ಹಣಾಹಣಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ