Advertisement

Tag: Story

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಚನ್ನಪ್ಪ ಅಂಗಡಿ ಬರೆದ ಕತೆ

ಚಿಕ್ಕವನಿದ್ದಾಗ ತನ್ನನ್ನು ಎಲ್ಲರೂ ಅದೆಷ್ಟು ಕಾಳಜಿಯಿಂದ ಮಾತನಾಡಿಸುತ್ತಿದ್ದರೆಂದರೆ, ಗೆಳೆಯರೆಲ್ಲ ಹೊಟ್ಟೆಕಿಚ್ಚು ಪಡುವಷ್ಟು. ಶಾಲೆಗೆ ಹೋಗಿ ಬರುವಾಗ ‘ಮಾಳಿಗಿ ಶಂಕರಪ್ಪನಂತ ಗಟ್ಟಿ ಕುಳ ತನ್ನ ಕರೆದು ಮಾತಾಡದಂದ್ರ ಹುಡುಗಾಟ್ಕೀನ?’ ಅಂದುಕೊಳ್ಳುತ್ತಿದ್ದ. ಬೇರೆಯವರು ನಕ್ಕೊಂಡೇ ಕೇಳುತ್ತಿದ್ದರು “ಏನ್ಲೇ ಶಿದ್ಲಿಂಗ, ನಿಮ್ಮ ಶಂಕರಪ್ಪ ಏನಂದ?” ತಮ್ಮತಮ್ಮಲ್ಲೇ ಕಣ್ಣು ಮಿಟುಕಿಸುತ್ತಿದ್ದರು. “ನೀ ಹಾಕ್ಕೊಂಡ ಅಂಗಿ ಸರಿಯಾಗೇತೇನ್ಲೆ? ಚೊಣ್ಣ ಬರೋಬರಿ ಆಗೇತಿಲ್ಲ? ನಿಮ್ಮವ್ವ ಮನ್ಯಾಗ ಇದ್ಲೇನು?”
‘ನಾನು ಮೆಚ್ಚಿನ ನನ್ನ ಕತೆ’ಯ ಸರಣಿಯಲ್ಲಿ ಚನ್ನಪ್ಪ ಅಂಗಡಿ ಬರೆದ ಕತೆ ‘ಪಿರಾಮಿಡ್ಡಿನಿಂದೆದ್ದು ಬಂದವನು’

Read More

ಅಬ್ದುಲ್ ರಶೀದ್ ವಿರಚಿತ ‘ರಕ್ತಚಂದನ’ ಎಂಬ ನೀಳ್ಗತೆಯು

ಚಾರುದತ್ತರ ಮರಣದ ಸುದ್ದಿ ನನಗೆ ಗೊತ್ತಾಗಿದ್ದು ಅವರು ತೀರಿಹೋಗಿ ಮಾರನೇ ದಿನ ಮಧ್ಯಾಹ್ನ. ಕೊರೋನಾದ ಮೊದಲ ಅಲೆ ಅದಾಗ ತಾನೇ ಉಲ್ಬಣಿಸುತ್ತಿದ್ದ ಕಾರಣ ಫೇಸ್ ಬುಕ್ಕು ಲೈವಿನಲ್ಲೇ ಅವರಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದರು. ಲೇಖಕಿ ವಿಲಾಸಿನಿ ಹಾಸಿಗೆಯಲ್ಲಿ ಮಲಗಿದ್ದಲ್ಲೇ ಗೋಡೆಗೆ ಒರಗಿ ಕುಳಿತು ಕಣ್ಣು ಮುಖ ಊದಿಸಿಕೊಂಡು ಲೈವಿನಲ್ಲಿ ಮುಳುಮುಳು ಅಳುತ್ತಾ ನಡುನಡುವೆ ಸ್ಪಷ್ಟವಾಗಿ ಮಾತಾಡುತ್ತಿದ್ದಳು. …”

Read More

ಬಿಡುಗಡೆ: ಉಮೇಶ ದೇಸಾಯಿ ಬರೆದ ವಾರದ ಕಥೆ

“ರಾತ್ರಿ ಮಗಳು ಫೋನ್ ಮಾಡಿದ್ದಳು. ಬಿಕ್ಕುತ್ತಲೇ ಮಾತನಾಡಿದಳು. ಮೇಲಿಂದ ಮೇಲೆ ಸಾರಿ ಕೇಳುತ್ತಿದ್ದಳು. ಅವಳಿಗೆ ವಿಶ್ವಾಸ ತುಂಬಿ ನಾಕು ಸಮಾಧಾನದ ಮಾತು ಹೇಳಿದಾಗ ರಾಧಾಳಲ್ಲೂ ನಿರಾಳತೆಯ ಭಾವ. ಆದರೆ ಬೆಳಿಗ್ಗೆ ಬಂದ ಫೋನು ಅವಳನ್ನು ವ್ಯಗ್ರಳನ್ನಾಗಿಸಿತು. ಅನಿಲ ಕಪೂರ ಫೋನ್ ಮಾಡಿದ್ದ. ಎಲ್ಲದಕ್ಕೂ ರಾಧಾಳೇ ಹೊಣೆ, ಅವಳ ಮಹತ್ವಾಕಾಂಕ್ಷೆಗೆ ಮಗಳು ಬೋರ್ಡಿಂಗ್ ಸೇರುವಂತಾಯಿತು.”

Read More

ಓಬೀರಾಯನ ಕಾಲದ ಕತೆಗಳು: ಪಂಜೆ ಮಂಗೇಶರಾವ್ ಬರೆದ ಕತೆ “ನನ್ನ ಚಿಕ್ಕತಂದೆಯವರ ಉಯಿಲ್”

“ಹೆಣದ ಎಂಜಲನ್ನು ಬಯಸುವವನು ಪಾಪಿ ಎಂದು ಪಾಠಕ ಮಹಾಶಯರಲ್ಲಿ ಅನೇಕರು ಮೇಲೆ ಹೇಳಿದ ನನ್ನ ಅವಸ್ಥೆಯನ್ನು ನೋಡಿ ಬಾಯೊಳಗೆನೇ ನಗಾಡಬಹುದು. ಅಂತಹರಿಗೆ ನಾನು ಒಂದು ಮಾತನ್ನು ಹೇಳಬೇಕೆಂದಿರುವೆನು. ಮನುಷ್ಯನ ಮರಣಕ್ಕೋಸ್ಕರವೇ ಮನಮರುಗುವವರು ಈ ಕಾಲದಲ್ಲಿ ಕಡಿಮೆ. ಸತ್ತವನು ನಮಗೇನೂ ಬಿಟ್ಟಿಲ್ಲ, ಕೊಟ್ಟಿಲ್ಲ, ಮುಂದೆ ನಮಗೇನು ಗತಿ?”

Read More

’ಯಕ್!’:ಬಿ.ವಿ.ಭಾರತಿ ಅನುವಾದಿಸಿದ ಸಾದತ್ ಹಸನ್ ಮಾಂಟೋ ಕಥೆ

“ಅವನು ಹಾಸಿಗೆಗೆ ಹಿಂತಿರುಗುವುದರಲ್ಲೇ ನಾನು ಹಾರಿಹೋಗಿ ದೀಪವಾರಿಸಿದೆ. ಆ ಕೂಡಲೇ ಮತ್ತೆ ಗಾಭರಿಗೊಂಡ ಅವನು! ಅಬ್ಬ, ಎಂಥ ತಮಾಷೆ ಎನ್ನುತ್ತೀ ಇಡೀ ರಾತ್ರಿ! ಒಮ್ಮೆ ಕತ್ತಲು, ಮತ್ತೊಮ್ಮೆ ಬೆಳಕು, ಮತ್ತೊಮ್ಮೆ ಬೆಳಕು, ಇದ್ದಕ್ಕಿದ್ದಂತೆ ಕತ್ತಲು…..! ಬೆಳಗಿನ ಜಾವದಲ್ಲಿ ಮೊದಲ ಟ್ರಾಮಿನ ಸದ್ದು ಕಿವಿಗೆ ಬಿದ್ದಿದ್ದೇ ತಡ, ಬೇಗ ಬೇಗ ಬಟ್ಟೆ ಹಾಕಿದವನೇ ಎದ್ದು ಬಿದ್ದು ಓಡಿಹೋದ.”

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಕುಂಬಳೆಯೆಂಬ ನಿಲ್ದಾಣದಲ್ಲಿ ತಿರುಮಲೇಶರು: ಸುಮಾವೀಣಾ ಬರಹ

‘ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ಡದೇನಲ್ಲ’ ಎನ್ನುವ ಮೂಲಕ ಕಾಲ ನಿರಂತತೆಯಿಂದ ಕೂಡಿರುತ್ತದೆ. ಆದರೆ ಕಾಲದ ತೆಕ್ಕೆಯಲ್ಲಿ ಜೀವಿಸುವ ಜೀವಿ ನಿರಂತರವಾಗಿ ಇರಲು ಸಾಧ್ಯವಿಲ್ಲ. ಆತ ಅಲ್ಪ…

Read More

ಬರಹ ಭಂಡಾರ