ಖಂಡಕಾವ್ಯಕ್ಕೊಂದು ಪ್ರವೇಶ: ಯು.ಆರ್.ಅನಂತಮೂರ್ತಿ ಮುನ್ನುಡಿ
ಆತ್ಮ ಸಫಲತೆಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಹೆಣ್ಣು ಪ್ರಣಯಿನಿಯಾಗಿಯೂ, ಹೆಂಡತಿಯಾಗಿಯೂ, ಮಗಳಾಗಿಯೂ, ತಾಯಿಯಾಗಿಯೂ, ‘ಬಜಾರಿ’ಯಾಗಿಯೂ ಅವನಿಗೆ ಒದಗುತ್ತಾಳೆ. ಇದನ್ನು ನಟಿಸಿ ತೋರಲು ತೇಜಶ್ರೀ ಕವನದಲ್ಲಿ ಒಂದು ಅಪರೂಪದ ಕಾವ್ಯ ಪ್ರಯೋಗವಿದೆ. ಇಲ್ಲಿ ಬರುವ ಅವನು ಪುರಾಣದ ಕೃಷ್ಣನೂ ಹೌದು, ನಿಜದ ಅವನೂ ಹೌದು. ಹಾಗೆಯೇ ರಾಧೆ ಪುರಾಣದ ರಾಧೆಯೂ ಹೌದು, ನಿಜದ ಅವಳೂ ಹೌದು. ಈ ಎರಡು ಸತ್ಯಗಳೂ ಒಟ್ಟಾಗಿ ನಮಗೆ ಭಾಸವಾಗುವುದರಿಂದ ಸಾಮಾಜಿಕ ಸಾಂಸಾರಿಕ ನೀತಿ ಅನೀತಿಗಳನ್ನು ಈ ಕವನ ಮೀರುತ್ತದೆ.
ಜ.ನಾ. ತೇಜಶ್ರೀ ಖಂಡಕಾವ್ಯ “ಅವನರಿವಲ್ಲಿ” ಕೃತಿಗೆ ಯು.ಆರ್. ಅನಂತಮೂರ್ತಿ ಮುನ್ನುಡಿ
