Advertisement

Tag: Vasanthkumar Kalyani

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ಇದು ಪಂಚಾಯಿತಿ ಚುನಾವಣೆಯಂತಲ್ಲ ಹಾಗಾಗಿ ಜನರು ಬುದ್ಧಿವಂತರಾಗಿದ್ದರು(?) ಹೆಚ್ಚು ಕೇಳುತ್ತಿದ್ದರು. ಆದರೂ ಒಂದೆರಡು ಕೈ ಬದಲಾಗಿ ಹಣ ಸಿಗುವಾಗ ಬಹಳ ಹೆಚ್ಚಿಗೇನೂ ಸಿಗುತ್ತಿರಲಿಲ್ಲ. ಈ ವಿಷಯದಲ್ಲಿ ಉತ್ತಮ್ ಈಗ ಸಾಕಷ್ಟು ಪಳಗಿದ್ದ. ಹೆಚ್ಚಿನ ಜನರನ್ನು ಸೇರಿಸುತ್ತಿದ್ದ. ಅದಕ್ಕಿಂತ ಹೆಚ್ಚು ತೋರಿಸುತ್ತಿದ್ದ. ಬೇರೆ ಮೂಲಗಳಿಂದ ಹಣ ಪೀಕುತ್ತಿದ್ದ. ಬೇರೆ ಮನೆಯಲ್ಲಿದ್ದರೂ ರಾಮ್, ಲಕ್ಷ್ಮಣ್ ಭಾವನ ಜೊತೆಗೆ ಕೈಜೋಡಿಸಿ ಚುನಾವಣೆಗೆ ದುಡಿಯುತ್ತಿದ್ದರು..
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಚದುರಂಗ”

Read More

ಕೊಕ್….ಕೊಕ್ಕ್… ಕುಕ್ಕುಟಾಯಣ: ವಸಂತಕುಮಾರ್ ಕಲ್ಯಾಣಿ ಪ್ರಬಂಧ

ಸುಮಾರು ನಾಲ್ಕು ಮೂವತ್ತಕ್ಕೆ ಯಾವುದೋ ಕನಸಿನ ಲೋಕದಲ್ಲಿದ್ದವನಿಗೆ, ಎಂಪಿ ಶಂಕರ್ ವಜ್ರಮುನಿ, ತೂಗುದೀಪ ಶ್ರೀನಿವಾಸ್, ಪ್ರಭಾಕರ್, ಶಕ್ತಿಪ್ರಸಾದ್ ಮುಂತಾದವರೆಲ್ಲ ಒಟ್ಟಿಗೆ ಗಹಗಹಿಸಿ ನಕ್ಕ ಹಾಗೆ ದನಿ ಕೇಳಿ ಎಚ್ಚರವಾಯಿತು. ಕೆಲಕ್ಷಣದ ನಂತರ ಅದು ಚೇಚಿ ಮನೆಯ ಕೋಳಿಯ ಕೂಗು ಎಂಬ ಕಟು ವಾಸ್ತವ ಅರಿವಿಗೆ ಬಂತು. ಸರಿ ‘ಸುಸು’ ಮಾಡಿ ನೀರು ಕುಡಿದು ಮಲಗಿದರಾಯಿತು ಎಂದು, ಎಲ್ಲ ಮುಗಿಸಿ ಮಲಗಿದರೆ, ಅದರ ಆರ್ಭಟ ಇನ್ನಷ್ಟು ಹೆಚ್ಚಾಯಿತು.
ವಸಂತಕುಮಾರ್ ಕಲ್ಯಾಣಿ ಪ್ರಬಂಧ ನಿಮ್ಮ ಓದಿಗೆ

Read More

ಯಾವುದೀ “ಮುಳ್ಳು, ನಾಲಿಗೆ…?”: ವಸಂತಕುಮಾರ್‌ ಕಲ್ಯಾಣಿ ಬರಹ

ಹಾಗಾಗಿ ಕೆಲವು ಗಂಡು ಮಕ್ಕಳು ಹೆಣ್ಣು ಮಕ್ಕಳು ಕೂತ ಭಾಗದಲ್ಲಿನ ಕೊನೆಯ ಬೆಂಚ್‌ಗಳಲ್ಲಿ ಕೂರಬೇಕಿತ್ತು. ಅವರ ಪೆನ್ನಿನಲ್ಲಿ ಇಂಕ್ ಖಾಲಿಯಾದಾಗ, ಒಬ್ಬಳು ಇನ್ನೊಬ್ಬಳಿಂದ ಸಾಲ ಪಡೆಯುತ್ತಿದ್ದಳು. ಅದು ಹೇಗೆಂದರೆ, ಪೆನ್ನಿನ ಮೇಲ್ ಭಾಗದ ತಿರುಪು ತಿರುಗಿಸಿಕೊಂಡು, ಕೆಳಮುಖವಾಗಿ ಇಟ್ಟುಕೊಂಡು ಪುನಃ ತಿರುಪು ಟೈಟ್ ಮಾಡುವಾಗ ಒಂದೊಂದೇ ತೊಟ್ಟು ಇಂಕ್ ಕೆಳಗೆ ಬೀಳುತ್ತಿತ್ತು, ಅದನ್ನು ಇಂಕ್ ಬೇಕಾದವರು ತಮ್ಮ ಪೆನ್ನನ್ನು ಸಿದ್ಧವಾಗಿಟ್ಟುಕೊಂಡು ನಾಜೂಕಾಗಿ ಒಳಗೆ ಬೀಳುವಹಾಗೆ ಮಾಡಿಕೊಂಡು, ಎಷ್ಟು ತೊಟ್ಟು ಬಿತ್ತು ಗಮನಿಸಿ, ಪುನಃ ಸಾಲ ವಾಪಸ್ ಮಾಡಬೇಕು.
ವಸಂತಕುಮಾರ್‌ ಕಲ್ಯಾಣಿ ಬರಹ

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಚಕ್ರವ್ಯೂಹದೊಳಗಿನ ಮಾಯಾಲೋಕ…: ಗೊರೂರು ಶಿವೇಶ್‌ ಬರಹ

ಕಾದಂಬರಿಯ ಕೊನೆಯಲ್ಲಿ ಆ ಕಡತ ಮುಸುಕುಧಾರಿಗಳ ಕೈಗೆಸಿಕ್ಕು ಅದರ ಮಹತ್ವ ತಿಳಿಯದ ಅವರು ನದಿನೀರಿಗೆ ಎಸೆದು ಅದು ಬಿಡಿಬಿಡಿಯಾಗಿ ಬಿದ್ದು ನೀರುಪಾಲಾಗುತ್ತದೆ. ಇದ್ದ ಒಂದು ಪ್ರತಿಯೂ ಮಾಯವಾದರೂ…

Read More

ಬರಹ ಭಂಡಾರ