Advertisement

Tag: Vinathe Sharma

ಶಮನವಾಗಬೇಕಿದೆ ಶತಮಾನಗಳ ನೋವು: ವಿನತೆ ಶರ್ಮ ಅಂಕಣ

ಕಳೆದ ಶನಿವಾರ ಅಕ್ಟೋಬರ್ ೧೪ ರ ಸಂಜೆ ಸೋಲೆಂಬುದು ಬಹುಬೇಗ ಬಂತು. ಅದೇನೋ ಅವಸರವಿದೆ ಎನ್ನುವ ರೀತಿ ಧಾವಿಸಿ ಬಂದಂತೆ, ಇಗೋ ತಗೊಳ್ಳಿ ಎಂಬಂತೆ ಇಡೀ ದೇಶವನ್ನೇ ಆವರಿಸಿ ಮಂಕು ಹಿಡಿಸಿಬಿಟ್ಟಿತು. ಇದೇನಿದು ಮತ ಎಣಿಕೆ ಈಗಷ್ಟೇ ಆರಂಭವಾಯ್ತಲ್ಲ ಎನ್ನುವ ಮಾತು ಗಾಳಿಯಲ್ಲಿ ಇನ್ನೂ ತೇಲಾಡುತ್ತಿರುವಾಗಲೇ ‘ನೋ ವೋಟ್’ ಹೆಚ್ಚಾಗಿ, ನಾನು ಟಿವಿ ಮುಂದೆ ಹಾಗೆಯೇ ಸ್ಥಬ್ಧಳಾಗಿದ್ದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಕೇಂದ್ರೀಯ ಬಜೆಟ್‌ನ ಉಪಕಥೆಗಳು: ಡಾ. ವಿನತೆ ಶರ್ಮ ಅಂಕಣ

ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬಳು ಹೇಳಿದಂತೆ ಯೂನಿವರ್ಸಿಟಿಯ ಸಹಪಾಠಿಯೊಬ್ಬರು ತಮ್ಮ ಕಾರಿನಲ್ಲಿ ಬದುಕುತ್ತಿದ್ದರಂತೆ. ರಾತ್ರಿ ಸಮಯ ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿಕೊಂಡಿರುವುದು, ಒಳಗೆ ಮುದುರಿಕೊಂಡು ಮಲಗುವುದು. ಬೆಳಿಗ್ಗೆ ಎದ್ದು ಯೂನಿವರ್ಸಿಟಿಗೆ ಬಂದು ಅಲ್ಲಿದ್ದ ಟಾಯ್ಲೆಟ್, ಶವರ್ ಸೌಲಭ್ಯಗಳನ್ನು ಬಳಸಿಕೊಂಡು, ಕೆಫೆಯಲ್ಲಿ ವಿದ್ಯಾರ್ಥಿಗಳಿಗೆ ಸಿಕ್ಕುವ ರಿಯಾಯ್ತಿ ದರದಲ್ಲಿ ಕಾಫಿ, ಸ್ಯಾಂಡ್ವಿಚ್ ಮತ್ತು ಉಚಿತ ಹಣ್ಣು ಪಡೆಯುವುದು. ದಿನಪೂರ್ತಿ ಯೂನಿವರ್ಸಿಟಿ ಕಟ್ಟಡದೊಳಗೇ ಇದ್ದುಕೊಂಡು ಒಂದಷ್ಟು ವ್ಯಾಸಂಗ, ನಿದ್ದೆ ಮಾಡುವುದು. ರಾತ್ರಿ ಪುನಃ ಕಾರಿಗೆ ವಾಪಸ್.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಆಸ್ಟ್ರೇಲಿಯನ್ ಕ್ಯಾಂಪಿಂಗ್ ಕಥಾನಕಗಳು – ಭಾಗ ಎರಡು

ಹಾಗೆಂದು ನಮ್ಮೆಲ್ಲಾ ಅನುಭವಗಳು ಆನಂದತುಲಿತಮಯ, ಅದ್ಭುತರಮ್ಯ, ಲೋಕಾತೀತವಾದವೇನಲ್ಲ. ಹೆಚ್ಚಿನ ಬಾರಿ ಖುಷಿಖುಷಿಯಿಂದ ಕೂಡಿದ್ದರೂ, ಒಮ್ಮೊಮ್ಮೆ ಗೊಳೋ ಎಂದು ಅತ್ತಿರುವುದೂ ನಿಜ. ಇಂತಹ ಕ್ಯಾಂಪಿಂಗ್ ಸಾಹಸಗಳಲ್ಲಿ ಕೆಲವು ಬಾರಿ ಅಪರಿಚಿತ ದೇಶಗಳಲ್ಲಿ, ಸ್ಥಳಗಳಲ್ಲಿ ಪರಿಸ್ಥಿತಿ ಕೈಕೊಟ್ಟು ಕ್ಯಾಂಪಿಂಗ್ ಪಟು ಜೀಬೀ ಪೇಚಿಗೆ ಸಿಲುಕಿ, ನಾನು ನಮ್ಮ ಮಕ್ಕಳ ಮೈದಡವುತ್ತಾ ಕಂಗಾಲಾಗಿ ಕಣ್ಣೀರಿಟ್ಟಿದ್ದೂ ನಿಜ. ಆದರೂವೆ… ಧೈರ್ಯಗೆಡದೆ ಜರ್ಮನ್ ಪೊಲೀಸರಿಗೆ ಇಂಗ್ಲೀಷಿನಲ್ಲಿ ಉತ್ತರಿಸಿದ್ದಿದೆ.
ಡಾ. ವಿನತೆ ಶರ್ಮ ಬರೆಯವ “ಆಸ್ಟ್ರೇಲಿಯಾ ಪತ್ರ”

Read More

ಚುರುಮುರಿ, ಕೋಸಂಬರಿಯಾದ ‘ಆಸ್ಟ್ರೇಲಿಯಾ ಪತ್ರ’

ದೇಶವಿಡೀ ಇನ್ನೇನು ಬರಲಿರುವ ಕ್ರಿಸ್ಮಸ್ ಹಬ್ಬದ ಮೋಡಿಗೆ ಸಿಲುಕಿ ಸಜ್ಜಾಗುತ್ತಿದೆ. ಬಣ್ಣಬಣ್ಣಗಳ ಅಲಂಕಾರಗಳು, ಕ್ರಿಸ್ಮಸ್ ಮಾರ್ಕೆಟ್, ಜನಸಂದಣಿ, ನಗರ ಕೇಂದ್ರದಲ್ಲಿರುವ ಬೃಹತ್ ಅಲಂಕೃತ ಕ್ರಿಸ್ಮಸ್ ಮರ ಎಲ್ಲವೂ ಜನರನ್ನು ಕುಣಿದಾಡಿಸುತ್ತಿವೆ. ಕ್ರಿಸ್ಮಸ್ ದಿನದ ವಿಶೇಷ ಆಹಾರವಾದ ಟರ್ಕಿ ಕೋಳಿ ಮತ್ತು ಸಾಮನ್ ಮೀನು ಮಿಂಚಿನ ವೇಗದಲ್ಲಿ ಮಾರಾಟವಾಗುತ್ತಿವೆ.
ಡಾ. ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ಒಣಎಲೆ ಗೊಬ್ಬರದ ಕಿರು ಕಥೆಗಳು

ಸುಮಾರು ಹತ್ತು ಎಕರೆ ಪ್ರದೇಶದಲ್ಲಿರುವ ನಗರಪಾಲಿಕೆ ಮರುಬಳಕೆ ಘಟಕದ ಒಂದು ಭಾಗದಲ್ಲಿ ಒಣ ಎಲೆಗೊಬ್ಬರ ವಿತರಣೆ ವ್ಯವಸ್ಥೆಯಿದೆ. ವಾರಾಂತ್ಯದಲ್ಲಿ ಮಧ್ಯಾಹ್ನ ಹನ್ನೆರಡರ ನಂತರ ಹೋದಾಗ ಕಂಡಿದ್ದು ಒಂದೆಡೆ ಒಂದಷ್ಟು ಜನರು ತಾವು ತಂದ ತ್ಯಾಜ್ಯ ಮತ್ತು ಹಸಿರು ಗಿಡಮರಗಳ ಭಾಗಗಳನ್ನು ಸುರಿಯುತ್ತಿದ್ದರು. ಬೆಳಗಿನ ಸಮಯದಲ್ಲಿ ಅಲ್ಲಿ ಹೋಗಲು ಸಾರ್ವಜನಿಕರಿಗೆ ಅನುಮತಿಯಿಲ್ಲ. ಆಗ ನಗರಪಾಲಿಕೆಯ ಯಂತ್ರಗಳು ಈ ಗಿಡಮರ ಭಾಗಗಳನ್ನು ಕತ್ತರಿಸಿ, ಅರೆದು ಅವನ್ನು ಒಯ್ದು ಒಂದು ಮೂಲೆಯಲ್ಲಿ ರಾಶಿ ಮಾಡುತ್ತಿರುತ್ತವೆ. ಡಾ. ವಿನತೆ ಶರ್ಮ  ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ