Advertisement

Tag: ಡಾ.ವಿನತೆ ಶರ್ಮಾ

ಕನ್ನಡದ ಹೆಣ್ಮನಗಳ ಕನ್ನಡಾಭಿಮಾನ: ರೂಪಶ್ರೀ ಕಲ್ಲಿಗನೂರ್ ಬರಹ

ಕನ್ನಡ ನಾಡಿನ ಮಕ್ಕಳು ಇಡೀ ಜಗತ್ತಿನ ತುಂಬಾ ಓಡಾಡಿದರೂ, ಮನೆಗೆ ಬಂದು ಅಮ್ಮನೊಟ್ಟಿಗೆ ಕನ್ನಡ ಮಾತನಾಡಿದಾಗಲೇ ಅವರಿಗೂ ಸಮಾಧಾನ. ಯಾಕೆಂದರೆ ಅವರೆಲ್ಲ ಮೊದಲು ಕಲಿತ ಪದವೇ “ಅಮ್ಮ” ಅಲ್ಲವೇ! ಜಗತ್ತಿನ, ಬೆಳವಣಿಗೆಯೆಂಬ ಸಂಕೀರ್ಣತೆಯ ಸಂದಿಗ್ಧತೆಯಲ್ಲಿ ಕನ್ನಡ ಭಾಷೆ ಚೂರು ನಲುಗುತ್ತಿದೆ ಎನ್ನಿಸುತ್ತಿದೆಯಾದರೂ ದೊಡ್ಡಮಟ್ಟದಲ್ಲಿಯಲ್ಲವಾದರೂ, ತಮಗೆ ಸಿಕ್ಕ ಅವಕಾಶಗಳಲ್ಲಿ ಕನ್ನಡದ ಬೆಳವಣಿಗೆಗೆ, ಉಳಿವಿಗೆ ಶ್ರಮಿಸುವ ಹಲವು ಶ್ರೀಸಾಮಾನ್ಯರಿದ್ದಾರೆ. ಕರ್ನಾಟಕದಲ್ಲಿ ಅಲ್ಲದೇ ಬೇರೆಡೆಗಳಲ್ಲಿ ನೆಲೆಸಿರುವ, ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಹಲವು ಕನ್ನಡದ ಹೆಣ್ಮಗಳ ಮಾತುಗಳು…

Read More

ಜೇನ್ನೊಣದ ಬಿಲಿಯನ್ ಡಾಲರ್ ಕೊಡುಗೆ: ಡಾ. ವಿನತೆ ಶರ್ಮಾ ಅಂಕಣ

ನಮ್ಮ ಹವ್ಯಾಸಿ ಕೈತೋಟ ಸದಸ್ಯರಲ್ಲಿ ಒಂದು ನಿಯಮವಿದೆ – ತಾವು ಬೆಳೆಯುವ ತರಕಾರಿ ಹಣ್ಣುಗಳಿಗೆ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸುವಂತಿಲ್ಲ. ಹಾಗೇನಾದರೂ ಬಳಸಿದರೆ ಅಂತಹ ಆಹಾರವನ್ನು ಸದಸ್ಯರಲ್ಲಿ ಹಂಚಿಕೊಳ್ಳಬಾರದು. ಈ ನಿಯಮದಿಂದ ಸದಸ್ಯರಲ್ಲಿ ಪ್ರಕೃತಿಯ ಬಗ್ಗೆ ಕಾಳಜಿ ಹೆಚ್ಚುತ್ತದೆ. ತಮ್ಮ ತರಕಾರಿ ಹಣ್ಣು ಗಿಡಗಳನ್ನು ಕ್ರಿಮಿಕೀಟಗಳು ಭಾದಿಸುತ್ತಿವೆ ಎಂದಾದರೆ ಅವನ್ನು ತೊಲಗಿಸಲು ಸದಸ್ಯರು ತಮಗೆ ಗೊತ್ತಿರುವ ನೈಸರ್ಗಿಕ ವಿಧಾನಗಳನ್ನು ಸೂಚಿಸುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ನಮ್ಮ ಆಹಾರ ನಮ್ಮ ಸಮುದಾಯದ ಹಸಿರುಕಣ್ಣು!: ವಿನತೆ ಶರ್ಮ ಅಂಕಣ

ಎಲ್ಲರ ಜಗಳದಲ್ಲಿ ಬಡವಾಗಿರುವುದು ನಾವೇ ನಾವು, ಸಾಮಾನ್ಯರು. ಏಕೆಂದರೆ ನಾವು ಪ್ರಕೃತಿಯ ಭಾಗವಲ್ಲವೇ! ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ ಬೆಳೆಯುವ ಮಣ್ಣಿಗೆ ಅನಾರೋಗ್ಯವುಂಟಾದರೆ ನಮ್ಮ ಆರೋಗ್ಯವೂ ಕೆಡುತ್ತದೆ ಎಂದು ಕಳೆದ ‘ಆಸ್ಟ್ರೇಲಿಯಾ ಪತ್ರ’ದಲ್ಲಿ ಬರೆದಿದ್ದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಕೇಂದ್ರೀಯ ಬಜೆಟ್‌ನ ಉಪಕಥೆಗಳು: ಡಾ. ವಿನತೆ ಶರ್ಮ ಅಂಕಣ

ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬಳು ಹೇಳಿದಂತೆ ಯೂನಿವರ್ಸಿಟಿಯ ಸಹಪಾಠಿಯೊಬ್ಬರು ತಮ್ಮ ಕಾರಿನಲ್ಲಿ ಬದುಕುತ್ತಿದ್ದರಂತೆ. ರಾತ್ರಿ ಸಮಯ ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿಕೊಂಡಿರುವುದು, ಒಳಗೆ ಮುದುರಿಕೊಂಡು ಮಲಗುವುದು. ಬೆಳಿಗ್ಗೆ ಎದ್ದು ಯೂನಿವರ್ಸಿಟಿಗೆ ಬಂದು ಅಲ್ಲಿದ್ದ ಟಾಯ್ಲೆಟ್, ಶವರ್ ಸೌಲಭ್ಯಗಳನ್ನು ಬಳಸಿಕೊಂಡು, ಕೆಫೆಯಲ್ಲಿ ವಿದ್ಯಾರ್ಥಿಗಳಿಗೆ ಸಿಕ್ಕುವ ರಿಯಾಯ್ತಿ ದರದಲ್ಲಿ ಕಾಫಿ, ಸ್ಯಾಂಡ್ವಿಚ್ ಮತ್ತು ಉಚಿತ ಹಣ್ಣು ಪಡೆಯುವುದು. ದಿನಪೂರ್ತಿ ಯೂನಿವರ್ಸಿಟಿ ಕಟ್ಟಡದೊಳಗೇ ಇದ್ದುಕೊಂಡು ಒಂದಷ್ಟು ವ್ಯಾಸಂಗ, ನಿದ್ದೆ ಮಾಡುವುದು. ರಾತ್ರಿ ಪುನಃ ಕಾರಿಗೆ ವಾಪಸ್.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಆಸ್ಟ್ರೇಲಿಯಾದ ‘ಬಿಗ್ ಥಿಂಗ್ಸ್’ ಆಕರ್ಷಣೆಗಳು

ಏನಿದು ‘ಬಿಗ್ ಥಿಂಗ್ಸ್’ ಎಂದು ಮೊದಲ ಬಾರಿ ಕೇಳಿದಾಗ ನನ್ನ ಆಸ್ಟ್ರೇಲಿಯನ್ ಸ್ನೇಹಿತೆಯ ಗಂಡ ಬಲು ಸೊಗಸಾಗಿ ವಿವರಿಸಿದ್ದರು. ಒಂದೂರಿನ ಜನರು ಸೇರಿ ತಮಗೆ ಆಪ್ತವೆನಿಸಿದ ಹಣ್ಣು, ಆಹಾರ, ಪ್ರಾಣಿ, ಪಕ್ಷಿ, ಮರ ಇತ್ಯಾದಿಗಳಲ್ಲಿ ಒಂದನ್ನು ಆರಿಸಿಕೊಂಡು ಅದನ್ನು ದೊಡ್ಡ ಗಾತ್ರದ ಶಿಲ್ಪ ಕೃತಿಯಾಗೋ, ಲೋಹ ಕಲಾ ಕೃತಿಯಾಗಿಯೋ ನಿರ್ಮಿಸಿ ಹೆಮ್ಮೆಯಿಂದ ಆ ಪ್ರತಿಮೆಯನ್ನು ತಮ್ಮೂರಲ್ಲಿ ಸ್ಥಾಪಿಸುವುದು. ಕ್ರಮೇಣ ಅದಕ್ಕೆ ಪ್ರಚಾರ ಕೊಟ್ಟು ಅದನ್ನು ದೇಶದ ‘ಬಿಗ್ ಥಿಂಗ್ಸ್’ ಪಟ್ಟಿಗೆ ಸೇರುವಂತೆ ಮಾಡುವುದು. ಇದರಿಂದ ಆ ಊರಿಗೆ ಅದೇನೋ ವಿಶೇಷ ಗುರುತು ಸಿಕ್ಕಿದಂತಾಗುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ