ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸುನೀತ ಕುಶಾಲನಗರ ಕತೆ
ನೀರು ಕುಡಿಯದಿದ್ದರೂ, ಆ ಅನಿರೀಕ್ಷಿತ ಘಟನೆಗೆ ಹೆದರಿ ನಾನು ಪ್ರಜ್ಞೆ ಕಳೆದುಕೊಂಡಿದ್ದೆ. ಯಾರಾದರೂ ನೋಡಿಬಿಡುತ್ತಾರೆಂದು ಹೆದರಿದ ಆತ ತನ್ನ ತೋಳಲ್ಲಿ ನನ್ನನ್ನು ಎತ್ತಿಕೊಂಡು ಮರದ ಮೇಲಿನ ಆತನ ಅಟ್ಟಳಿಗೆಯ ಒಳಗೆ ಮಲಗಿಸಿದ. ತನ್ನ ಟವೆಲ್ನಿಂದ ನನಗೆ ಗಾಳಿ ಬೀಸಿ, ಮುಖಕ್ಕೆ ನೀರೆರಚಿದಾಗ ನಿಧಾನಕ್ಕೆ ಕಣ್ಣು ಬಿಟ್ಟೆ. ನಾನಿರುವ ಜಾಗವನ್ನು ನೋಡಿ ಒಮ್ಮೆಲೆ ಬೆಚ್ಚಿದೆ. ಎದ್ದೇಳಲು ಪ್ರಯತ್ನಿಸುತ್ತಿದ್ದಂತೆಯೇ ಹತ್ತಿರ ಬಂದ ಆತ ಕೈಮುಗಿದು “ತಪ್ಪಾಯಿತು, ಇನ್ನೊಮ್ಮೆಯೂ ಹೀಗೆ ಮಾಡಲ್ಲ ಕ್ಷಮಿಸಿಬಿಡಿ” ಎಂದು ಮುಜುಗರದಿಂದ ಹೇಳಿ ಹೊರ ನಡೆದ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸುನೀತ ಕುಶಾಲನಗರ ಕತೆ
