Advertisement

Tag: ಹಕ್ಕಿಗಳು

ಹಕ್ಕಿಗಳ ವಿವಿಧ ಅಂಗಗಳ ವಿಕಾಸ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಇತರ ಪ್ರಾಣಿಗಳಿಗಿರುವಂತೆ ಪಕ್ಷಿಗಳಿಗೆ ಹಲ್ಲುಗಳಿಲ್ಲ. ಮೇಲ್ದವಡೆ-ಕೆಳದವಡೆ ಸೇರಿ ಕೊಕ್ಕಾಗಿದೆ. ಈ ಕೊಕ್ಕು ಬೇಟೆಯನ್ನು ಹಿಡಿಯಲು ಅಥವಾ ಆಹಾರವನ್ನು ಸೇವಿಸಲು ಮತ್ತು ಆತ್ಮರಕ್ಷಣೆಗಾಗಿ ಬಳಸಲ್ಪಡುತ್ತವೆ. ಉದಾಹರಣೆಗೆ, ಹಲವಾರು ಜಾತಿಯ ಹಕ್ಕಿಗಳಿಗೆ ಕೀಟ, ಹುಳಗಳನ್ನು ತಿನ್ನುವ ಸ್ವಭಾವ. ಆದರೆ ಅವುಗಳನ್ನು ಹಿಡಿಯುವ ವಿಧಾನ ಬೇರೆ ಬೇರೆ. ನೊಣಹಿಡುಕ, ಜೇನುಮಗರೆಗಳು ಹಾರುತ್ತಿರುವ ಕೀಟಗಳನ್ನು ಅಟ್ಟಿಸಿಕೊಂಡು ಹೋಗಿ ಹಿಡಿದರೆ, ಮೈನಾ, ಚಂದ್ರಮುಕುಟಗಳು ನೆಲದ ಮೇಲಿಂದ ಹೆಕ್ಕಿ ತಿನ್ನುತ್ತವೆ ಹಾಗೂ ಮರಕುಟ್ಟಿಗಗಳು ಮರದ ತೊಗಟೆಯನ್ನು ಕುಕ್ಕಿ ಅದರೊಳಗಿಂದ ಕೀಟಗಳನ್ನು ಆರಿಸಿಕೊಳ್ಳುತ್ತವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಹಕ್ಕಿಗಳ ವಿವಿಧ ಅಂಗಗಳ ವಿಕಾಸದ ಕುರಿತ ಬರಹ

Read More

ಡಾ. ಎಸ್.ವಿ. ನರಸಿಂಹನ್‌ ಹೊಸ ಸರಣಿ “ಹಕ್ಕಿಪಕ್ಷಿ ಚಿತ್ರ ಸಂಪುಟ” ಇಂದಿನಿಂದ

ಸ್ವಭಾವತಃ ಚಲನಾಶಕ್ತಿಯಿಲ್ಲದ ಮರ-ಗಿಡ ಸಸ್ಯಗಳು ತಮ್ಮ ಸಂತಾನೋತ್ಪತ್ತಿಗಾಗಿ ಅವಶ್ಯವಿರುವ ಬೀಜಪ್ರಸರಣ ಕಾರ್ಯಕ್ಕಾಗಿ ಇತರ ಜೀವಿಗಳನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ವಿವಿಧ ಬಣ್ಣಗಳಿಂದ ಕೂಡಿದ, ರುಚಿಕರವಾದ, ಮತ್ತು ಇವೆಲ್ಲಕಿಂತ ಮಿಗಿಲಾಗಿ ಎಲ್ಲ ಪೌಷ್ಟಿಕ ಅಂಶಗಳಿಂದಲೂ ಕೂಡಿದ ಸುಮಧುರ ಹಣ್ಣುಗಳ ಮೂಲಕ ಆಕರ್ಷಿಸುತ್ತವೆ. ಈ ಕಾರ್ಯದಲ್ಲಿ ಕೂಡ ಉಳಿದ ಜೀವಿಗಳಿಗಿಂತ ಹಕ್ಕಿಗಳ ಪಾತ್ರ ಗಮನೀಯ. ತಿಂದ ಹಣ್ಣಿನ ಬೀಜವನ್ನು ದೂರದೂರದೆಡೆಗಳಲ್ಲಿ ಉಗಿಯುವುದು ಒಂದು ರೀತಿಯಾದರೆ, ತಿಂದ ಹಣ್ಣಿನ ಬೀಜ ಹಕ್ಕಿಯ ಉದರ ಸೇರಿ, ಹಿಕ್ಕೆಯ ಮೂಲಕವೂ ಹರಡಬಲ್ಲದು.
ಡಾ. ಎಸ್.ವಿ. ನರಸಿಂಹನ್‌ ಹೊಸ ಸರಣಿ “ಹಕ್ಕಿಪಕ್ಷಿ ಚಿತ್ರ ಸಂಪುಟ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

Read More

ಎನ್ನಯ ಹಕ್ಕಿಗಳ ಲೋಕ:ಮುನವ್ವರ್ ಪರಿಸರ ಕಥನ

“ಕೆಂಪು ಹಳದಿ ಮಿಶ್ರಿತ ಬಣ್ಣ ಬಣ್ಣದ ಹಾವೊಂದು ಗೂಡಿರುವ ಬಳಿಯ ಕೊಂಬೆಯಲ್ಲಿ ನೇತಾಡುತ್ತಿತ್ತು.ಹಾವು ಸಪೂರವಾಗಿದ್ದರೂ ಅದರ ಉದ್ದ ಮತ್ತು ಮೈಮೇಲಿನ ಬಣ್ಣ ನನ್ನನ್ನು ಬೆವರಿಸಿತು.ಹಾವು ಮೆಲ್ಲಗೆ ಅತ್ತಿತ್ತ ನೋಡುತ್ತಾ ಗೂಡಿನ ಬಳಿ ಹರಿಯಿತು.”

Read More

ತರೀಕೆರೆ ಕಾಲಂ: ಹಕ್ಕಿದನಿಗೆ ಯಾವ ಅರ್ಥವಿದೆ?

ಈ ಸ್ವರಕ್ಕೆ ಕುಂದಾಪುರ ಸೀಮೆಯ ಜಾನಪದಲ್ಲಿ ಒಂದು ಸ್ವಾರಸ್ಯಕರ ಕತೆಯಿದೆ. ಒಂದೂರಲ್ಲಿ ಅಣ್ಣತಂಗಿ ಇದ್ದರಂತೆ. ಚಿಕ್ಕವಯಸ್ಸಿನಲ್ಲೇ ತಾಯಿ ಕಳೆದುಕೊಂಡ ಇವರು ಸೋದರಮಾವನ ಮನೆಯಲ್ಲಿ ಆಶ್ರಯ ಪಡೆದರು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ