ಪ್ರೀತಿಯ ಕುರಿತು
ಬರೆಯಲು ರೂಪಕ
ಹುಡುಕುವುದು
ಪ್ರೀತಿ ಮಾಡುವಷ್ಟೇ ಕಷ್ಟ
ಹೂವ ಚುಂಬಿಸಹೋಗಿ
ಮುಳ್ಳು ಚುಚ್ಚಿಸಿಕೊಂಡಂತೆ
ಜೇನ ಸವಿಯಲು ಹೋಗಿ
ಹುಳ ಕಚ್ಚಿಸಿಕೊಂಡಂತೆ
ಪ್ರೀತಿ ಸಮುದ್ರವೆಂದರೆ
ಅದರಲ್ಲೇ ಟೈಟಾನಿಕ್ ಮುಳುಗಿದ್ದು ನೆನಪಾಗುತ್ತದೆ
ಪ್ರೀತಿ ಚಂದಿರನೆಂದರೆ
ಅಮವಾಸ್ಯೆಯ ಕರಿನೆರಳು ನೆನಪಾಗುತ್ತದೆ
ಪ್ರೀತಿ ಬೆಂಕಿಯೆಂದರೆ
ಅಮ್ಮನ ಅಡುಗೆ ನೆನಪಾಗುತ್ತದೆ
ಪ್ರೀತಿ ಬಂಧನವೆಂದರೆ
ಗೆಳತಿಯ ಕಾಳಜಿ ನೆನಪಾಗುತ್ತದೆ
ಬಂಧಿಸಲಾಗದು ಪ್ರೀತಿಯ
ರೂಪಕಗಳ ಬಂಧೀಖಾನೆಯಲ್ಲಿ,
ಹಾರುತ್ತದೆ ಪ್ರೀತಿಯ ಹಕ್ಕಿ
ಬಿಗುಮಾನದಲ್ಲಿ,
ಕಟ್ಟುತ್ತದೆ ಗೂಡು
ನೊಂದ ಹೃದಯದಲ್ಲಿ
ನೆನಪಿಡಿ
ಪ್ರೀತಿಯ ಹಕ್ಕಿಗೆ ಬೇಕಿರುವುದು
ಪಂಜರವಲ್ಲ, ಗೂಡು ಕಟ್ಟಲು ಜಾಗ
ಅದೃಷ್ಟವಿದ್ದಲ್ಲಿ ಅನುರಾಗ
ಮೂಡುವುದು ಆಗ
ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ