ಅರ್ಧ ಕತೆಯೇ ಪ್ರಕಟಗೊಂಡಿತ್ತು: ಎಚ್. ಗೋಪಾಲಕೃಷ್ಣ ಸರಣಿ
ಆ ಗುಂಪಿನ ತಮಿಳರನ್ನು ನೋಡಿ ಕೆಲವು ಸಲ ಹೊಟ್ಟೆ ಉರಿಯೋದು. ಆ ಭಾಷೆಯಲ್ಲಿ ಬರುವ ಎಲ್ಲಾ ಪತ್ರಿಕೆಗಳನ್ನು ತರಿಸೋರು ಮತ್ತು ಹತ್ತು ಹದಿನೈದು ಜನ ಗ್ರೂಪ್ ಮಾಡಿಕೊಂಡು ಅದರ ಖರ್ಚು ಶೇರ್ ಮಾಡುತ್ತಿದ್ದರು. ಇನ್ನೂ ವಿಶೇಷ ಅಂದರೆ ಡಿ ಎಂ ಕೆ ಅವರು ತರಿಸುತ್ತಿದ್ದ ಪತ್ರಿಕೆ ಡಿ ಎಂ ಕೆ ವಿರೋಧಿಗಳು ತರಿಸುತ್ತಾ ಇರಲಿಲ್ಲ. ಅವರು ಇವರು ಪರಸ್ಪರ ಮಾತು ಕತೆ ಸಹ ಇಲ್ಲ! ಕೆಲವು ಸಲ ಇದೇ ವಿಷಯವಾಗಿ ತಮಿಳಿನಲ್ಲಿ ಜೋರು ಜೋರು ಮಾತುಕತೆ ಜಗಳ ಆಗುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೧ನೇ ಬರಹ ನಿಮ್ಮ ಓದಿಗೆ
ಮನದಂಗಳದಲ್ಲಿ ಬೆಳಗುವ ಮಲೆನಾಡಿನ ದೀಪಾವಳಿ: ಭವ್ಯ ಟಿ.ಎಸ್. ಸರಣಿ
ಬೇರೆಲ್ಲ ಹಬ್ಬಗಳು ಒಂದು ಎರಡು ದಿನಗಳಲ್ಲಿ ಮುಗಿದುಹೋದರೆ, ದೀಪಾವಳಿ ಮಾತ್ರ ನಾಲ್ಕು ಐದು ದಿನ ಮನೆಗಳಲ್ಲಿ ಸಂಭ್ರಮ ತುಂಬಿಸುತ್ತದೆ. ಕಾರ್ತಿಕ ಮಾಸ ಪೂರ್ತಿ ದೇವಾಲಯಗಳಲ್ಲಿ ಮನೆಗಳಲ್ಲಿ ನಿರಂತರ ದೀಪೋತ್ಸವ ಜರಗುತ್ತದೆ. ದೀಪಾವಳಿ ಹಬ್ಬಕ್ಕೆ ಪೂರ್ವ ಸಿದ್ಧತೆ ಸಾಕಷ್ಟು ಬೇಕು. ಭೂರೆ ತುಂಬಿಸುವುದು ಎಂಬ ಪದ್ಧತಿಯಿಂದ ಶುರುವಾಗುವ ಈ ಹಬ್ಬ ಎಣ್ಣೆ ಸ್ನಾನ, ಗೋಪೂಜೆ ಲಕ್ಷ್ಮೀ ಪೂಜೆ, ನರಕ ಚತುರ್ದಶಿ, ಬಲಿಪಾಡ್ಯಮಿ, ಕರಿ ಎಂಬ ದಿನಗಳನ್ನು ಮುಗಿಸಿ ಹೊಸ ತೊಡಕುವಿನೊಂದಿಗೆ ಬೀಳ್ಕೊಡುತ್ತದೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ ನಿಮ್ಮ ಓದಿಗೆ
ಸವಿಯ ಬನ್ನಿ ಮಲೆನಾಡ ಊಟವ…: ರೂಪಾ ರವೀಂದ್ರ ಜೋಶಿ ಸರಣಿ
ನಮ್ಮನೆಯ ಬೇಸಿಗೆಯ ಹಿತ್ತಲಲ್ಲಿ ಆಯಿ, ಹೂ ಕೋಸು, ಗಡ್ಡೆ ಕೋಸು ಮೂಲಂಗಿ, ಬೀಟ್ರೂಟ್ಗಳನ್ನು ಕೂಡಾ ಸಮೃದ್ಧವಾಗಿ ಬೆಳೆಸುತ್ತಿದ್ದಳು. ಮುಂದಿನ ಮೂರು ತಿಂಗಳು ನಾವೆಲ್ಲ ಯಥೇಚ್ಛವಾಗಿ ತರಕಾರಿಯನ್ನು ಉಪಯೋಗಿಸಬಹುದಾಗಿತ್ತು. ಎಲ್ಲಕ್ಕಿಂತ ವಿಶೇಷವಾಗಿ ಮೊಗೇ ಕಾಯಿ ಬೆಳೆಸುವುದು ಬೇಸಿಗೆಯ ಹಿತ್ತಲಿನ ವಿಶೇಷ. ಈ ಮೊಗೆ ಕಾಯಿ (ಬಣ್ಣದ ಸೌತೆ ಕಾಯಿ) ಯೆಂಬುದು ಮಲೆನಾಡಿಗರ ಆಪದ್ಬಾಂಧವನಿದ್ದಂತೆ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಒಂಭತ್ತನೆಯ ಕಂತು
ಬಸ್ ಒಡೆಯನೆಂದು ನಂಬಿ, ನಾನು ಯಾಮಾರಿದ್ದು!!!: ಬಸವನಗೌಡ ಹೆಬ್ಬಳಗೆರೆ ಸರಣಿ
ನಾನು ಅಂದು ಪ್ರವಾಸಕ್ಕೆ ಹೊರಟಿದ್ದೆ. ನನಗಾಗಿ ಹುಡುಗರು ಕಾಯುತ್ತಿದ್ದರು. ಪದೇ ಪದೇ ಕಾಲ್ ಬೇರೆ ಮಾಡುತ್ತಿದ್ದರು. ಹೋಗುವ ಧಾವಂತ ಬೇರೆ. ಆಸಾಮಿ ಬಿಡಲೇ ಇಲ್ಲ. ಅವನ ಮಾತನ್ನು ನಿಜವೆಂದು ನಾನು ಅವನಿಗೆ ಮತ್ತೆ 500 ರುಪಾಯಿಗಳನ್ನು ಕೊಟ್ಟೆ. ಕೊಟ್ಟಾಕ್ಷಣ “ನಾಳೇನೇ ನಿಮ್ಮ ಖಾತೆಗೆ ಹಾಕ್ತೇನೆ” ಎಂದ. ನಾನು ನನ್ನ ಮೊಬೈಲ್ ಸಂಖ್ಯೆಯನ್ನೂ ಕೊಟ್ಟೆ. ಕೊಟ್ಟ ತಕ್ಷಣ ನಾನು ಕಾಯುತ್ತಿದ್ದ ಬಸ್ ಬಂತು. ಅವನು ಲಗುಬಗೆಯಿಂದಲೇ ನನ್ನನ್ನು “ಹೋಗಿ ಹೋಗಿ” ಎಂದು ಬಸ್ ಹತ್ತಿಸಿದ. ಮಾರನೇ ದಿನ ಅವನು ಕಾಲ್ ಮಾಡುತ್ತಾನೆಂದು ಕಾದೆ. ಮಾಡಲಿಲ್ಲ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತೇಳನೆಯ ಕಂತು ನಿಮ್ಮ ಓದಿಗೆ
ಅನುರೂಪ ವಸ್ತುಗಳ ಸಂಚಯನ ಎಲೆ ಅಡಿಕೆ ಚೀಲ: ಸುಮಾವೀಣಾ ಸರಣಿ
ನಮ್ಮ ಮೊಬೈಲ್ಗೆ ಈಗ ಫಿಂಗರ್ ಪ್ರಿಂಟ್ಸ್ ಲಾಕ್ ಇದೆಯಲ್ಲಾ ಹಾಗೆ ಅಜ್ಜಿ ತನ್ನ ಚೀಲಕ್ಕೆ ಹಾಕುತ್ತಿದ್ದ ನ್ನಾಟಿ ನ್ನಾಟ್ ಅನ್ನು ಯಾರಿಗು ಬಿಚ್ಚಲಾಗುತ್ತಿರಲಿಲ್ಲ. ಮುರಿದ ಆಭರಣದ ಚೂರುಗಳು ಬೆಳ್ಳಿಯ ಚೂರುಗಳನ್ನು ಚಿಕ್ಕ ಪ್ಲಾಸ್ಟಿಕ್ನಲ್ಲಿ ಹಾಕಿ ಚೀಲದ ಒಳ ಪದರದ ಒಳ ಪದರದಲ್ಲಿ ಇಡುವುದು, ಅವರ ಇವರ ತೋಟಕ್ಕೆ ಹೋದಾಗ ಅಪರೂಪದ ತರಕಾರಿ ಬೀಜ ಸಿಕ್ಕರೆ ಅದನ್ನು ಅದರಲ್ಲೆ ಇಡುವುದು, ಅಲ್ಲೇ ಬಿಡಿಸಿ ಅಲ್ಲೇ ಮುಡಿದುಕೊಳ್ಳಲು ಹೂ ಕಟ್ಟುವ ದಾರವೂ ಅಲ್ಲೇ ಇರುತ್ತಿತ್ತು. ದೇವಸ್ಥಾನಕ್ಕೆ ಹೋದರೆ ಕುಂಕುಮ ಪ್ರಸಾದ, ಗಂಧ ಅದರಲ್ಲೇ ಇಡುವುದು. ತಲೆಸುತ್ತುವಿಕೆಗೆ, ಅಜೀರ್ಣಕ್ಕೆ, ಬಾಯಿ ವಾಸನೆ ಬರದಂತೆ ತಡೆಯಲು, ಹಲ್ಲು ನೋವಿಗೆ, ಶೀತಕ್ಕೆ ನಶ್ಯ ಎಲ್ಲಾ ಅದರಲ್ಲೇ ಇರುತ್ತಿತ್ತು.ಸುಮಾವೀಣಾ ಬರೆಯುವ “ಮಾತು ಖ್ಯಾತೆ” ಸರಣಿ ಸರಣಿ
ಫ್ಲಾಪ್ ಆದ ಬಲೂನಿನ ಐಡಿಯಾ: ಬಸವನಗೌಡ ಹೆಬ್ಬಳಗೆರೆ ಸರಣಿ
ನನ್ನ ಐಡಿಯಾವನ್ನು ನನ್ನ ಗೆಳೆಯರು ಒಪ್ಪಿದರು. ಐಡಿಯಾವನ್ನು ಕಾರ್ಯಗತಗೊಳಿಸಲು ಅಣಿಯಾದೆವು. ಆದರೆ ನಾವೆಷ್ಟೇ ಪ್ರಯತ್ನಿಸಿದರೂ ಬಟ್ಟೆಯನ್ನು ಬಲೂನಿನೊಳಗೆ ತೂರಿಸಲು ಆಗಲಿಲ್ಲ! ಏನೇನೋ ಪ್ರಯತ್ನ ಪಟ್ಟು ಬಟ್ಟೆಯನ್ನು ಬಲೂನಿನೊಳಗೆ ಸೇರಿಸಿದೆವು. ಆದರೆ ಬಲೂನ್ ಒಡೆದ ಕೂಡಲೆ ಬಟ್ಟೆ ಮಡಿಚಿದ ಸ್ಥಿತಿಯಲ್ಲಿರುತ್ತಿತ್ತು! ಅಂದುಕೊಂಡಂತೆ ಅಕ್ಷರ ಕಾಣುತ್ತಲೇ ಇರಲಿಲ್ಲ! ಇದನ್ನು ಸರಿ ಮಾಡಲು ಬಹಳ ಪ್ರಯತ್ನಿಸುತ್ತಾ ಸಮಯ ಕಳೆದು ಹೋದದ್ದು ತಿಳಿಯಲೇ ಇಲ್ಲ. ಅದಾಗಲೇ ಬೆಳಗಿನ ಜಾವ ಮೂರಾಗಿತ್ತು!! ನಿದ್ದೆ ಮಂಪರು ಬೇರೆ, ನನ್ನ ಯೋಜನೆ ಕೈಗೊಡದಿದ್ದುದು ಬೇರೆ. ಯಾಕಾದ್ರೂ ಕಾರ್ಯದರ್ಶಿ ಆದೆನಪ್ಪಾ ಅನಿಸ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತಾರನೆಯ ಕಂತು ನಿಮ್ಮ ಓದಿಗೆ
ಟ್ರಿನಿಡಾಡ್ ಎಂಡ್ ಟೊಬೇಗೊ ಕವಿ ಡಾನಿಯೇಲ್ ಬೂಡೂ-ಫೋರ್ಚುನೆ: ಎಸ್. ಜಯಶ್ರೀನಿವಾಸ ರಾವ್ ಸರಣಿ
“ಬೂಡೂ-ಫೋರ್ಚುನೆ ಅವರ ಸಾಲುಗಳು ಸರಳತೆ ಮತ್ತು ಕ್ರೂರತೆಗೆ ಸಮಾನವಾಗಿ ಆದ್ಯತೆ ನೀಡುತ್ತದೆ, ಮೀನುಗಾರರ ಅರ್ಧ ಮುಳುಗಿದ ಲೋಕಗಳನ್ನು, ಸಮಾಧಿ ಮಾಡಿದ ಮೂಳೆಗಳಲ್ಲಿ ಕಲಕುವ ಭರವಸೆಗಳನ್ನು, ಹೆಣ್ಣುಮಕ್ಕಳನ್ನು ಪ್ರೀತಿಸುವ ತಾಯಂದಿರ ಮತ್ತು ಎಲ್ಲಾ ರೀತಿಯ ತಿಳಿಯಲಾಗದ, ನಿಗೂಢ ಆತ್ಮಗಳನ್ನು ಹಿಡಿದಿಟ್ಟುಕೊಳ್ಳುತ್ತವೆ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಟ್ರಿನಿಡಾಡ್ ಎಂಡ್ ಟೊಬೇಗೊ (Trinidad and Tobago) ದೇಶದ ಯುವ ಕವಿ ಡಾನಿಯೇಲ್ ಬೂಡೂ-ಫೋರ್ಚುನೆ-ರವರ (Danielle Boodoo-Fortuné, 1986) ಕಾವ್ಯದ ಕುರಿತ ಬರಹ
ಆಪತ್ಬಾಂಧವನಿಂದ ಕರಗಿದ ಕಾರ್ಮೋಡ: ಎಚ್. ಗೋಪಾಲಕೃಷ್ಣ ಸರಣಿ
ಹೆಂಡತಿ ನೂರು ಕ್ಯಾಂಡಲ್ ಕೆಂಪು ಬಲ್ಬಿನ ಹಾಗೆ ಕಂಡಳು. ಅವಳನ್ನು ಒಳಗೆ ಕರೆದು ಸಮಾಧಾನ ಪಡಿಸಿ ಓನರಿಣಿಯನ್ನು ಮನೆಗೆ ಸಾಗಹಾಕುವ ಪ್ಲಾನ್ ತಲೆಯಲ್ಲಿ ಮೊಳಕೆ ಹೊಡೆಯುತ್ತಿತ್ತು. ಎಂಟ್ರಿ ಹೇಗಾಯಿತು ಅಂದರೆ ರಾತ್ರಿ ಒಂಬತ್ತರ ಕತ್ತಲು, ಹತ್ತಿರದ ಕೆರೆಯಿಂದ ಕಪ್ಪೆಗಳ ವಟಗುಟ್ಟುವಿಕೆ, ಜೀರುಂಡೆ ಧ್ವನಿ ಮತ್ತು ಮನೆಯಿಂದ ಮೂರುನಾಲ್ಕು ಕಿಮೀ ದೂರದ ರೈಲು ಹಳಿ ಮೇಲೆ ರೈಲು ಹೋಗುತ್ತಿರುವ, ಎಂಜಿನು ವಿಶಲ್ ಹಾಕುವ ಶಬ್ದ. ನರಿ ಕೂಗು ಕೇಳುತ್ತೆ ಅಂತ ನನಗಿಂತ ಮೊದಲು ಬಂದವರು ಹೇಳುತ್ತಿದ್ದರು….
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಭೂಮಿ ಬಯಕೆ ತೀರಿಸುವ ಭೂಮಿ ಹುಣ್ಣಿಮೆ ಹಬ್ಬ: ಭವ್ಯ ಟಿ.ಎಸ್. ಸರಣಿ
ಆಶ್ವಯುಜ ಮಾಸದಲ್ಲಿ ಬರುವ ಭೂಮಿ ಹುಣ್ಣಿಮೆಯ ಕುರಿತು ಹೇಳುತ್ತಿದ್ದೇನೆ. ಮಲೆನಾಡಿಗರ ಭಾಷೆಯಲ್ಲಿ ಇದು ಭೂಮಣಿ ಹಬ್ಬ. ಭೂಮಿಹುಣ್ಣಿಮೆ ಎಂದ ಕೂಡಲೇ ನನ್ನ ಮನ ನಿಲ್ಲದೆ ತೀರ್ಥಹಳ್ಳಿಯ ಸಮೀಪದ ನನ್ನ ಅಜ್ಜಿ ಮನೆಯೆಡೆಗೆ ಓಡುತ್ತದೆ. ನಮ್ಮ ಅಜ್ಜಿ ಈ ಹಬ್ಬವನ್ನು ತುಂಬಾ ಶ್ರದ್ಧೆಯಿಂದ ಆಚರಿಸುತ್ತಿದ್ದರು. ಹಬ್ಬದ ಮುನ್ನಾ ದಿನ ಗದ್ದೆಯ ಅಂಚಿನ ಒಂದು ಭಾಗವನ್ನು ಶುಚಿಗೊಳಿಸಿ, ಸಗಣಿ ಸಾರಿಸಿ, ಬಾಳೆಕಂಬ, ತೋರಣಗಳಿಂದ ಅಲಂಕರಿಸಿ ಬರುತ್ತಾರೆ. ಅಂದು ಮನೆಯ ಮಕ್ಕಳು ಒಂದು ಬುಟ್ಟಿ ಹಿಡಿದು ಸುತ್ತಮುತ್ತ ತಿರುಗಿ ಬಗೆಬಗೆಯ ಸೊಪ್ಪುಗಳನ್ನು ಆಯ್ದು ತರಬೇಕು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ ನಿಮ್ಮ ಓದಿಗೆ









