ಸಮಕಾಲೀನ ತಲ್ಲಣಗಳಿಗೆ ಹೆಗಲುಕೊಡುವ ಕವಿತೆಗಳು
ಮನುಷ್ಯ ಮಾಗಿದಷ್ಟೂ ಅವನ ಬರಹ ಪಕ್ವವಾಗುತ್ತದೆ ಎಂಬ ಮಾತು ಕೆಲವರಿಗೆ ಅಪವಾದವಾಗುತ್ತದೆ. ಸಮಾಜದ ತಲ್ಲಣಗಳಿಗೆ ಸ್ಪಂದಿಸುವ ಕವಿ ಮತ್ತು ಆತನ ಬರವಣಿಗೆಗಳು ಇಂಥ ದುರಿತ ಕಾಲಕ್ಕೆ ಖಂಡಿತ ಅವಶ್ಯಕತೆ ಇದೆ. ವಿಶಾಲ್ ಅವರ ಬರಹದ ನಡಿಗೆಯೂ ಸಮಸಮಾಜದ ನಿರ್ಮಿತಿಯ ಕಡೆಗೇ ಇದೆ. ಒಂದೊಂದು ಕವಿತೆಯಲ್ಲೂ ಅವರೇ ಕಂಡು, ಅನುಭವಿಸಿದ ನೋವುಗಳನ್ನು ಕಾವ್ಯದ ಮೂಲಕ ಹೊರಹಾಕಿದ್ದಾರೆ.
ಅಭಿಷೇಕ್ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ವಿಶಾಲ್ ಮ್ಯಾಸರ್ ಕವನ ಸಂಕಲನ ‘ಬಟ್ಟೆಗಂಟಿದ ಬೆಂಕಿ’ಯ ಕುರಿತ ಬರಹ ಇಲ್ಲಿದೆ
ಆಸ್ಟ್ರೇಲಿಯನ್ ಕ್ಯಾಂಪಿಂಗ್ ಕಥಾನಕಗಳು: ಭಾಗ ಒಂದು
ಈ ಬಾರಿ ನಾವು ಹೂಡಿದ ‘ಅಡಿಗೆಮನೆ’ ಇದ್ದದ್ದು ಮರಗಳ ಅಂಚಿನಲ್ಲಿ. ಈ ಅಂಚಿನ ಆಚೆ ಕಡೆ ನೂರು ಮೀಟರ್ ದೂರದಲ್ಲಿ ನೀರಿಲ್ಲದೆ ಬೇಸಿಗೆಯ ಬಿಸಿಲಿಗೆ ಸೊರಗಿದ್ದ ನದಿಯಿತ್ತು. ಕಳೆದ ಫೆಬ್ರವರಿ-ಮಾರ್ಚ್ ತಿಂಗಳುಗಳಲ್ಲಿ ಸಂಭವಿಸಿದ ಅಧಿಕ ಮಳೆ-ಜಲ ಪ್ರವಾಹದಲ್ಲಿ ಈ ನದಿ ಉಕ್ಕೇರಿ ಆ ನೂರೂ ಮೀಟರ್ ದೂರವನ್ನಾಕ್ರಮಿಸಿಕೊಂಡು ಈ ಮರಗಳ ಅಂಚಿನ ತನಕ ಬಂದಿತ್ತು ಎನ್ನುವುದು ಅಲ್ಲಿ ಚೆಲ್ಲಾಡಿದ್ದ ಮರಕೊಂಬೆಗಳು, ರೆಂಬೆಗಳಿಂದ ಸ್ಪಷ್ಟವಾಗಿತ್ತು. ನಾವೇನೋ ಖುಷಿಯಿಂದಲೇ ಅಲ್ಲಿ ಅಡಿಗೆಮನೆ ಮತ್ತು ನೆಲದ ಹಾಸುಗಳನ್ನು ಸ್ಥಾಪಿಸಿದ್ದೆವು. ಒಂದೆರೆಡು ದಿನಗಳಲ್ಲಿ ಬಿದ್ದ ಮಳೆಯಿಂದ ನಮ್ಮ ಖುಷಿ ಕಡಿಮೆಯಾಯ್ತು. ನೆಲದ ಹಾಸು ಮಳೆನೀರು, ಮಣ್ಣಿನ ರಾಡಿಯಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ನಿಮ್ಮ ಜಾತಿ ಯಾವುದು!
ಹೊಲದ ಹತ್ತಿರ ಅನ್ನುವ ಕಾರಣಕ್ಕೆ ನನಗೆ ಮನೆ ಇಷ್ಟವಾಯ್ತು. ಮನೆಯನ್ನು ಕೂಲಂಕುಷವಾಗಿ ನೋಡಿದ ಮೇಲೆ ಗೌಡರ ಜೊತೆಗೆ ಮಾತಾಡಲು ಅಲ್ಲೇ ಹತ್ತಿರವೇ ಇದ್ದ ಅವರ ಮನೆಗೆ ಹೋದೆ. ಹೆಸರು ಕೇಳಿದವರೆ ಯಾವ ಜಾತಿ ನಿಮ್ಮದು ಅಂದರು. ನನಗೆ ತುಂಬಾ ಇರುಸು ಮುರುಸು ಆಯ್ತು. ನಾನು ಯಾರಿಗೂ ಜಾತಿ ಕೇಳೋದಿಲ್ಲ, ನನಗೆ ಯಾರಾದರೂ ಕೇಳಿದರೂ ನನಗೆ ಆಗೋಲ್ಲ. ಆದರೆ ಹಳ್ಳಿಯಲ್ಲಿ ಜಾತಿ ವ್ಯವಸ್ಥೆ ಇನ್ನೂ ಗಟ್ಟಿಯಾಗಿಯೇ ಇದೆ. ನನ್ನ ಜಾತಿ ಯಾಕೆ ಬೇಕು ಅಂತ ಕೇಳಿದಾಗ “ಒಳ್ಳೆಯವರಿಗೆ ಕೊಡಬೇಕಲ್ರಿ ಮನಿ ಅದಕ್ಕ ಕೇಳತೀವಿ” ಅಂದರು.
ಗುರುಪ್ರಸಾದ್ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ
ರಷ್ಯಾದ ಭೌಗೋಳಿಕ ಕಥನ…
ಒಂದುವೇಳೆ ಬೆಂಗಳೂರು ಸಮುದ್ರಮಟ್ಟಕ್ಕಿಂತ ಒಂದು ಮುನ್ನೂರು ಮೀಟರ್ ಕೆಳಗಿದ್ದಿದ್ದರೆ? ಅರಬ್ಬೀ ಸಮುದ್ರದ ಮೂಲಕ ಬಂದ ಗಾಳಿ ಪಾಲ್ಘಾಟ್ ಗ್ಯಾಪಿನ ಕಾರಣ ಪಶ್ಚಿಮ ಘಟ್ಟಗಳಿಗೆ ಅಪ್ಪಳಿಸದೇ ಊಟಿ ತಲುಪಿ ಅಲ್ಲಿ ತಂಪುಗೊಂಡು ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿ ಈಗಿನ ಎತ್ತರಕ್ಕೆ ತಡೆಯಿರದ ಕಾರಣ ಮುಂದೆ ಹೋಗಿಬಿಡುತ್ತಿತ್ತು. ಈಗಿನ ಅತ್ಯುತ್ತಮ ಹವಾಮಾನ ಇರುತ್ತಲೇ ಇರಲಿಲ್ಲ. ಹೈದರಾಲಿ ಮತ್ತು ಟಿಪ್ಪು ಲಾಲ್‌ಬಾಗ್ ನಿರ್ಮಿಸುತ್ತಲೇ ಇರಲಿಲ್ಲ. ಮೈಸೂರು ಅರಸರಿಗೆ ಪ್ರಿಯವಾದ ಜಾಗವಾಗುತ್ತಲೇ ಇರಲಿಲ್ಲ. ಬ್ರಿಟಿಷರಿತೆ ತಮ್ಮ ಊರನ್ನು ನೆನಪಿಸುವ ಪ್ರದೇಶವೂ ಆಗುತ್ತಿರಲಿಲ್ಲ.
ಗಿರಿಧರ್ ಗುಂಜಗೋಡು ಬರೆಯುವ ಓದುವ ಸುಖ ಅಂಕಣ
ಕ್ರಿಕೆಟ್‌ನ ‘ಲಿಟಲ್ ಮಾಸ್ಟರ್ಸ್’ – 2
ಪಾಕಿಸ್ತಾನದ ಶೊಯೆಬ್ ಅಖ್ತರ್ ಮೊದಲ ಬಾರಿ ಬೋಲಿಂಗ್ ಮಾಡಿದಾಗ ಅವರ ವೇಗವನ್ನು ನೋಡಿ ಜಗತ್ತೇ ತತ್ತರಿಸಿ ಹೋಗಿತ್ತು. ಜೊತೆಗೆ ಶೋಯೆಬ್‌ರ ಹಾವಭಾವ, ತನ್ನನ್ನು ಬಿಟ್ಟರಿಲ್ಲ ಎಲ್ಲಾರನ್ನೂ ಮುಗಿಸಿ ಬಿಡ್ತಿನಿ ಅನ್ನುವ ಮನೋಭಾವ ಎಲ್ಲರಲ್ಲೂ ಸ್ವಲ್ಪ ದಿಗಿಲು ಹುಟ್ಟಿಸಿತ್ತು. ವಿಶ್ವ ಕಪ್‌ಗೆ ಮೊದಲಬಾರಿ ಅವರು ಆಡಿದಾಗ ಸಚಿನ್ ಇವರ ಬೋಲಿಂಗನ್ನು ಥಳಿಸಲು ಪಣ ತೊಟ್ಟರು. ಇವರ ಬೋಲಿಂಗನ್ನು ಹಿಗ್ಗಾ ಮುಗ್ಗಾ ಬಾರಿಸಿ ಇವರು ಹುಲಿಯಲ್ಲ, ಹುಲಿ ವೇಶ ಹಾಕಿದ ಸಾಧು ಪ್ರಾಣಿ ಕುರಿ ಅಷ್ಟೇ, ಇವರಿಂದ ಏನೂ ಭಯಪಡಬೇಕಾಗಿಲ್ಲ ಎಂದು ತೋರಿಸಿ ಕೊಟ್ಟರು ಸಚಿನ್!
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ
ಕರಿಯಣ್ಣ ಕೆಂಚಣ್ಣರೆಂಬ ಜಾನಪದ ದೈವಗಳು
ನಿಧಾನವಾಗಿ ಜನ ಆಗ ತಾನೆ ಸ್ನಾನ ಮಾಡಿ, ಒಪ್ಪ ಓರಣ ಮಾಡಿಕೊಂಡು ಬರಲಾರಂಭಿಸಿದ್ದರು. ಭಜನೆಯ ವೇಳೆಯಲ್ಲಿ ಗುಡಿಗೆ ಬರುವಾಗ ಸ್ನಾನ ಮಾಡಿ ಬರುವ ಪದ್ಧತಿಯೂ ಗಮನಾರ್ಹ. ದಿನವಿಡೀ ಹೊಲಗದ್ದೆಗಳಲ್ಲಿ ದುಡಿಯುವ ವರ್ಗ ದುಡಿಮೆ ಮುಗಿಸಿಕೊಂಡು ಮನೆಗೆ ಬಂದು ಸ್ನಾನ ಮಾಡಿ ದೇವಾಲಯಕ್ಕೆ ಬರಲು ಸಂಜೆ ೭.೩೦ ಕಡಿಮೆ ಆಗುವುದಿಲ್ಲ ಅಂತ. ಅದಕ್ಕೇ ಇಡೀ ದೇವಾಲಯ ಗಲಗಲ ಅನ್ನಲು ೮ ಗಂಟೆ ತನಕ ಬೇಕಾಯಿತು. ನನ್ನ ವಾಪಸ್ ಊರಿಗೆ ಹೋಗುವ ಆತುರಕ್ಕೆ ಅರ್ಥವಿಲ್ಲ ಅಂತ ತಿಳಿದು ಮುಗಿದಾಗ ಹೊರಡೋದು ಅಂತ ತೀರ್ಮಾನಿಸಿ ವಾಚ್ ನೋಡಿಕೊಳ್ಳುವುದನ್ನು ಬಿಟ್ಟು ತೆಪ್ಪಗೆ ಕುಳಿತುಕೊಂಡೆ.
ಗಿರಿಜಾ ರೈಕ್ವ ಬರೆಯುವ ‘ದೇವಸನ್ನಿಧಿ’ ಅಂಕಣದಲ್ಲಿ ಹೊಸ ಬರಹ
ಮಾನವೀಯತೆಗಾಗಿಯೇ ಜೀವ ತೇದವರ ನೆನೆಯುತ್ತಾ…
‘ವರ್ಣ’ ಅಪ್ಪಟ ದಲಿತ ಜಗತ್ತಿನ ಪ್ರಾತಿನಿಧಿಕ ಕವಿತೆ. ಕವಿ ಸುಮ್ಮನೆ ಎಲೆಮರೆಯ ಕಾಯಿಯಂತಿದ್ದರೂ ಬಿಡದೆ ಪ್ರಚೋದಿಸಿ ಅಖಾಡಕ್ಕೆ ಕರೆದು ಕೊನೆಗೆ ಮಣ್ಣುಮುಕ್ಕುವ ಉಢಾಳರಿಗೆ ಎಚ್ಚರಿಕೆಯಂತಿದೆ ಈ ಕವಿತೆ. “ಹಸಿರು, ಕೆಂಪು, ಕಪ್ಪು, ಬಣ್ಣಗಳೊಳಗೆ ಕರಗಿಹೋದ ದಲಿತರ ನೆತ್ತರು ಮತ್ತು ಬೆವರು ಉಳ್ಳವರನ್ನು ಉಸಿರುಗಟ್ಟಿ ಸಾಯಿಸಿದರೆ ಆಶ್ಚರ್ಯಪಡಬೇಕಿಲ್ಲ”. ‘ಹಸಿವು’ ಕವಿತೆ ಅವ್ವನ ಉದಾರತನವನ್ನೂ ಆಕೆಯ ಸಂಸ್ಕಾರವನ್ನೂ ದರ್ಶಿಸಿ ದಂಗುಬಡಿಸುತ್ತದೆ. ಹಸಿವು ಎಂದು ಬಂದವರಿಗೆ ತನ್ನ ಪಾಲಿನ ತಟ್ಟೆಯಲ್ಲಿದ್ದ ಹಿಟ್ಟನ್ನು ಕೊಟ್ಟುಬಿಡುತ್ತಾಳೆ. ಅಭಿಷೇಕ್ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣ
ಸಾಂಘಿಕವಾದ ಕ್ರಿಸ್ಮಸ್ ಸೀಸನ್ ಶುಭಾಶಯಗಳು
ಬಹುಶಃ ಪ್ರಪಂಚದಾದ್ಯಂತ ಕೋಟ್ಯಾಂತರ ಮಕ್ಕಳು ಎದುರು ನೋಡುವ, ಹಾಗೆ ಗಪ್ ಚಿಪ್ ಆಗಿ ಚಿಮಿಣಿಯಲ್ಲಿ ಸಾಂಟಾ ಬಂದು ಕೊಡುವ ಉಡುಗೊರೆಗಾಗಿ ಕಾಯುವ ಯಾವೊಂದು ಮಗುವಿಗೂ ನಿರಾಸೆಯಾಗದ ಸಂದರ್ಭ ಈ ಕ್ರಿಸ್ಮಸ್ ಸೀಸನ್. ಇದು ‘giving’ ಸೀಸನ್. ಅಂದರೆ ನಾವು ಮನಃಪೂರ್ವಕವಾಗಿ ಕೈಲಾದಷ್ಟು ದಾನ ಮಾಡುವ ಕಾಲ. ನಾವು ಕೊಡುವ ದಾನವು ಹಣದಿಂದ ಹಿಡಿದು ಬಟ್ಟೆ, ಉಡುಗೆತೊಡುಗೆ, ಮನೆವಸ್ತುಗಳು, ಪೀಠೋಪಕರಣಗಳು, ಪುಸ್ತಕಗಳು, ಆಹಾರ ಪದಾರ್ಥ, ಎಂಬಂತೆ ನಾನಾತರಹವಾಗಿ ನಾವು ದಾನವೀಯಬಹುದು.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”
ರೈತನ ಮಿತ್ರ ಎರೆಹುಳು ಆದರೆ ಅದರ ವೈರಿ…?
ಮಾನವನ ಪ್ರಕೃತಿಯ ಮೇಲಿನ ದಬ್ಬಾಳಿಕೆಗೆ ಇದೊಂದು ಸಣ್ಣ ಉದಾಹರಣೆ ಅಷ್ಟೆ. ಟ್ರಾಕ್ಟರ್‌ನಂತಹ ಯಂತ್ರ ಎಲ್ಲರಂತೆಯೇ ಜೀವಿಸುವ ಹಕ್ಕಿರುವ ಹಾವಿನ ಜೀವಕ್ಕೆ ಕುತ್ತು ತಂದಿತ್ತು. ಹಾವು ಕಣ್ಣಿಗೆ ಕಾಣುವ ಜೀವ. ಇನ್ನೂ ಸೂಕ್ಷ್ಮವಾಗಿರುವ ಕಣ್ಣಿಗೆ ಕಾಣದ ಎಷ್ಟೋ ಜೀವಗಳು ಮಣ್ಣಿನಲ್ಲಿ ಬೆರೆತು ವಾಸ ಮಾಡುತ್ತವೆ. ಅವುಗಳನ್ನೆಲ್ಲ ಬುಡಮೇಲು ಮಾಡಿ ಕತ್ತರಿಸಿ ಹಾಕಲು ನಮಗೆ ಹಕ್ಕಿದೆಯೆ? ಅಲ್ಲೊಂದು ನಮಗರಿವಿಲ್ಲದೆ ಉಸಿರಾಡುತ್ತಿರುವ ಜಗತ್ತು ಇದೆ. ಅವುಗಳಿಂದ ನಮ್ಮ ಗಿಡ ಮರಗಳಿಗೆ ಪೋಷಣೆಯೂ ನಿರಂತರವಾಗಿ ಸಿಗುತ್ತಿದೆ.
ಗುರುಪ್ರಸಾದ್ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ










