ಪುರೂಲಿಯಾವರೆಗೂ ಹಬ್ಬಿದ ಮೈಸೂರು ಚಾಮುಂಡಿಯ ಮಹಿಮೆ: ಸುಜಾತಾ ತಿರುಗಾಟ ಕಥನ
“ಕೆಳಗೆ ಹರಡಿದ ಮಹಿಷನ ಮೈಸೂರು ಪ್ರದೇಶ ದೀಪ ಕಡಲಲ್ಲಿ ಈಜುತಿತ್ತು. ಚಾಮುಂಡಿ ಪೂಜೆಯಿಂದ ಶುರುವಾಗುವ ಈ ವಿಜಯೋತ್ಸಾಹ ನವರಾತ್ರಿ ಕಳೆದು, ತಾಯಿ ತೇರಾಡಿ, ತಾಯಿ ತೆಪ್ಪೋತ್ಸವದ ಕೊಳದಲ್ಲಿ ಹುಲಿ ಮೇಲೆ ಕುಳಿತು ತೇಲಿ, ಭಕ್ತರ ಮನದುಂಬಿಸಿ ತನ್ನಡ್ಡೆಯಲ್ಲಿ ದೇವಳವ ಹೊಕ್ಕು ಮುಂದಿನ ವರುಷದವರೆಗೂ ಗೊತ್ತು ಕೂತಾಗ ಉತ್ಸವ ಮುಗಿಯುತ್ತದೆ.”
ರಾಮಾಯಣ ನೇಯ್ಗೆಯಲ್ಲಿ ಏಸೊಂದು ಜೀವಗಳು:ಸುಜಾತಾ ತಿರುಗಾಟ ಕಥನ
“ಇದು ಕುವೆಂಪು ಎಂಬ ಅಕ್ಕಸಾಲಿಗನ ಕೈಯ್ಯಲ್ಲಿ ವಾಲ್ಮೀಕಿಯ ಚಿನ್ನ ಕರಗಿ ವರ್ತಮಾನದ ಅಪರಂಜಿಯಾಗಿ ಮಿಂಚಿದ ಕಣ್ಣೋಟ. ಕ್ರೌಂಚಪಕ್ಷಿಗಳ ಒಡನಾಟವನ್ನು ಮುರಿಯದೆ ಬದುಕಿಸುವ ಕುವೆಂಪು ಪರಿಕಲ್ಪನೆಯೇ ಜೀವಪರ. ಇದು ರಾಮನ ಓಟವಾದರೂ ಅಪ್ಪಟ ಮಾನವನ ನಿಜನಾಯಕನ ರಾವಣನೊಳಗಿನ ಮನಃಪರಿವರ್ತನೆಯ ಪಾಠ.”
ಹೆರಿಟೇಜ್ ಮಾಂತ್ರಿಕ ವಿಜಯನಾಥರು:ಸುಜಾತಾ ತಿರುಗಾಟ ಕಥನ
ಎಲ್ಲೆಲ್ಲಿಂದಲೋ ಬಂದು ತಳವೂರಿರುವ ಭಂಟರ ಹಂಗರಕಟ್ಟೆ ಬಾಣಸಾಲೆ ಮನೆಗಳು. ಬೈಂದೂರು ನೆಲ್ಲ್ಯಾಡಿ ಮನೆ. ಕುಂಜೂರು ಚೌಕಿ ಮನೆ, ಹರ್ಕೂರು ಒಳಗಿನ ಮನೆ. ಶೃಂಗೇರಿ ಮನೆ, ಮಂಗಳೂರು ಕ್ರಿಶ್ಚಿಯನ್ ಹೌಸ್, ಜಂಗಮ ಮಠ, ಭಟ್ಕಳದ ಮುಸ್ಲಿಮ್ ಮನೆ, ವಿದ್ಯಾ ಮಂದಿರ, ಹೀಗೆ ವೈವಿಧ್ಯ ಮನೆಗಳು ಬೀಡುಬಿಟ್ಟಿವೆ.
ಹಸಿರು ಹಾಡಿನ ನಡುವೆ ಕಸದ ರಾಶಿ:ಸುಜಾತಾ ತಿರುಗಾಟ ಕಥನ
”ಕಾಡು ಬಿಟ್ಟು ಬಂದ ಹಕ್ಕಿಗಳು ರಸ್ತೆಯಲ್ಲಿ ಬಿದ್ದ ಕಾಳನ್ನು ಕಾಣುವ ಬಗೆ, ಊರು ಬಿಟ್ಟು ಬಂದವರು ಪಟ್ಟಣದ ಥಳುಕಿಗೆ ನಲುಗಿ ಹೋಗುವ ಕಥೆ, ಮಾಡಿದ ಸಾಲ ತೀರಿಸಲು ಬಂದು ಒಗ್ಗದ ಕೆಲಸಗಳನ್ನು ಮಾಡುತ್ತಲೇ ಅರ್ಧವಯಸ್ಸಿಗೆ ಹಣ್ಣಾಗಿ, ಇತ್ತ ಮಕ್ಕಳು, ಅತ್ತ ಊರಲ್ಲಿ ಗಟ್ಟಿಮುಟ್ಟಾಗಿ ಉಳಿದ ತಾಯ್ತಂದೆಯರ ನಡುವೆ ನಲುಗುವ ಕಾರ್ಮಿಕ ಬಂಧುಗಳು…”
ಬಿಡುಗಡೆಯೆಂಬ ರೆಕ್ಕೆಯೊಂದಿಗೆ ಮಾತು:ಸುಜಾತಾ ತಿರುಗಾಟ ಕಥನ
”ಇವರು ಮೂಡಿಸಿದ ರೆಕ್ಕೆಗಳನ್ನು ನಂಬಿ ಜೈಲಿನಿಂದ ಬಿಡುಗಡೆಯಾಗಿ ಹೊರಬಂದವರು ಸಮಾಜದ ನಡುವೆ ಹೆಜ್ಜೆಯಿಟ್ಟು ತುಪತುಪನೆ ಬಿದ್ದು ಎದ್ದು ಈಗ ಗಟ್ಟಿಯಾಗಿ ತಮ್ಮ ಕಾಲ ಮೇಲೆ ನಿಂತು ತಮ್ಮ ಕಥೆಯನ್ನು ಸಂಕೋಚದಿಂದಲೇ ಹೇಳುತ್ತ ಸಮಾಜದ ಎಲ್ಲರೊಂದಿಗೆ ಮುಖಾಮುಖಿಯಾಗುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ.”
ದಿಲ್ಲಿಯಲ್ಲಿ ಒಂದು ಹಳ್ಳಿ ಬಂದು ಕೂತ ಬಗೆ:ಸುಜಾತಾ ತಿರುಗಾಟ ಕಥನ
ರೈತನ ಗುಡಿಸಿಲಿನ ಸರಳತೆ ಹಾಗೂ ನಿರುಮ್ಮಳತೆಯನ್ನು ಹೊತ್ತು ತಂದು ನಗರದ ರಾಜಬೀದಿಯನ್ನು ಹಾದು ಆ ಗಜಿಬಿಜಿಯ ಗಲ್ಲಿಯಲ್ಲಿ ನಿಂದು ದುಡಿದುಣ್ಣುವ ಜನರ ಮಹತ್ವವನ್ನು ಸಾರುತ್ತ ನಿಂತಿದ್ದವು.
ಅರಸೊತ್ತಿಗೆಯ ಸೌಂದರ್ಯವೂ ಹಿಂಸೆಯೂ:ಸುಜಾತಾ ತಿರುಗಾಟ ಕಥನ
“ವಿನ್ಯಾಸಗಾರರ ಕೈಲಿ ಅರಳಿದ ಬೆಳಕಿನ ಹೂವಂತೆ, ಚೆಂಡಂತೆ, ಉರಿವ ಸಾಲುಗಳಂತೆ, ಅಕ್ಷರದ ಸಾಲುಗಳಂತೆ, ಪದಕಟ್ಟಿನಂತೆ ಕರಾರುವಕ್ಕಾಗಿ ರೂಪು ಪಡೆಯುವ ಅವುಗಳ ಚಲನೆ ಅತ್ಯಂತ ಪುರಾತನ ಕಾಲವೊಂದನ್ನು ನೆನಪಿಸುವುದರೊಂದಿಗೆ ವರ್ತಮಾನದ ಇಂದಿನ ಇಸವಿಯನ್ನು ಕೂಡಾ ತೋರುತ್ತವೆ.”
ಅರಮನೆಯ ಊರಲ್ಲಿ ಜನಸಾಮಾನ್ಯರ ದಸರಾ:ಸುಜಾತಾ ತಿರುಗಾಟ ಕಥನ
“ರಾತ್ರಿ ನೋಡಿದ ಮೆರವಣಿಗೆಯ ಚಂದ ಇನ್ನೂ ಮನದಲ್ಲಿ ಹಾಗೇ ಉಳಿದು ಹೋಗಿದೆ. ಆ ಪಂಜುಗಳ ವಿನ್ಯಾಸದ ಚಂದ,ರಸ್ತೆಯ ಗೂಡು ದೀಪಗಳ ಸಾಲು,ಪೆಟ್ರೋಮ್ಯಾಕ್ಸ್ ದೀಪದ ನೆರಳು ಬೆಳಕಲ್ಲಿ…. ರಸ್ತೆ ದೀಪಾಲಂಕಾರಗಳಲ್ಲಿ ಮೆರವಣಿಗೆಯ ಗಾಂಭೀರ್ಯದ ನಿಧಾನ ನಡಿಗೆ,ಪ್ರಾಣಿಗಳ ಶಿಸ್ತು…”
ಏನೇನೋ ಕಂಡಮೇಲೂ ನಮ್ಮೂರೇ ನಮಗೆ ಮೇಲು:ಭಾರತಿ ಪ್ರವಾಸ ಲಹರಿ
”ಇಂದಿಗೂ ನೂರೆಂಟು ಹಳಹಳಿ -ಅವತ್ತು ಫೋನ್ ಮಾಡದೇ ಗಾಡಿ ಹಿಂದಿರುಗಿಸಲು ಹೇಳಬೇಕಿತ್ತು… ನಾನು ಅದೊಂದು ದಿಂಬನ್ನು ಎತ್ತಿ ನೋಡದೇ ಯಾಕೆ ತಡೆದೆ… ಪ್ರೀತಮ್ ಕೂಡಾ ಅವರೊಡನೆ ಶಾಮೀಲಾಗಿದ್ದನಾ… ಜೊತೆಯಲ್ಲಿದ್ದವರು ಅಷ್ಟು ನಿರ್ವಿಕಾರವಾಗಿ ಹೊರಟೇ ಬಿಟ್ಟರಲ್ಲ…”









