ಶಾಲ್ಮಲಿಯ ಸಹಸ್ರಲಿಂಗ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ನೀರಿನಿಂದ ಮೇಲೆದ್ದ ದೊಡ್ಡ ಬಂಡೆಯೊಂದು ಶಿಲ್ಪಿಯೋರ್ವನಿಗೆ ಬಸವಣ್ಣನಂತೆ ತೋರಿ ಒಂದೆಡೆ ಮುಖಭಾಗವನ್ನೂ ಬಂಡೆಯ ಅಂಚಿಗೆ ಬೆನ್ನುಭಾಗವನ್ನೂ ಕೆತ್ತಿದ್ದಾನೆ. ನಡುವಣ ಬಂಡೆ ಯಥಾರೂಪದಲ್ಲೇ ಇದೆ. ಸಾಮಾನ್ಯವಾಗಿ ಶಿವಾಲಯಗಳ ಬಾಗಿಲಲ್ಲಿ ಕಂಡುಬರುವ ಪುರುಷಾಮೃಗಕ್ಕೂ ಇಲ್ಲಿ ಸ್ಥಾನ ಕಲ್ಪಿಸಲಾಗಿದೆ. ಮನುಷ್ಯನ ಮುಖ, ಪ್ರಾಣಿಯ ದೇಹವಿದ್ದು ಘಂಟಾನಾದ ಮಾಡುವ ಕಾಯಕದಲ್ಲಿ ಈ ಪುರುಷಾಮೃಗ…”
ದೊಡ್ಡಗದ್ದವಳ್ಳಿಯ ಲಕ್ಷ್ಮೀದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಕಾಳಿಕಾದೇವಿ ಅಷ್ಟಭುಜಗಳಲ್ಲಿ ಬಗೆಬಗೆಯ ಆಯುಧಗಳನ್ನು ಧರಿಸಿ ತಾನು ಸಂಹರಿಸಿದ ದೈತ್ಯನ ಮೇಲೆ ಕುಳಿತಿದ್ದಾಳೆ. ಶಿಲ್ಪದ ಪ್ರಭಾವಳಿಯಲ್ಲಿ ಬೇತಾಳಗಣಗಳು ಆಯುಧಗಳನ್ನು ಹಿಡಿದು ನರ್ತಿಸುತ್ತಿರುವಂತೆ ರೂಪಿಸಿರುವುದು ಸ್ವಾರಸ್ಯಕರವಾಗಿದೆ. ಗರ್ಭಗುಡಿಯ ಬಾಗಿಲವಾಡದ ಮೇಲೆ ಕಾಳಿಯ ಮುಖವನ್ನು ಚಿತ್ರಿಸಿದೆ. ಉಳಿದ ಗರ್ಭಗುಡಿಗಳಲ್ಲಿ ಭೈರವನ ಮೂರ್ತಿಯನ್ನೂ ಶಿವಲಿಂಗವನ್ನೂ ಇರಿಸಲಾಗಿದೆ. ಶಿವಲಿಂಗದ ಎದುರಿಗೆ ನವರಂಗದಲ್ಲಿ….”
ಬಾಣಾವರದ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಬಾಣಾವರವು ನಿರಂತರ ಯುದ್ಧ ಹಾಗೂ ಸೈನಿಕ ಚಟುವಟಿಕೆಗಳ ಕೇಂದ್ರವಾಗಿದ್ದುದರಿಂದಲೋ ಏನೋ ಇಲ್ಲಿ ಹೊಯ್ಸಳ ಶಿಲ್ಪಕಲೆಯ ವೈವಿಧ್ಯವನ್ನು ಬಿಂಬಿಸುವ ದೊಡ್ಡ ದೇಗುಲಗಳ ನಿರ್ಮಾಣವಾಗಿಲ್ಲ. ಆದರೆ ಇತಿಹಾಸವನ್ನು ನೆನಪಿಸುವ ಅನೇಕ ದೇವಾಲಯಗಳು ಇಲ್ಲಿ ಕಂಡುಬರುತ್ತವೆ. ಬಾಣಾವರದ ಬಾಗಿಲಲ್ಲಿರುವೋನೆ ಬಾಲೆಯ ಮಗನೆ ಬೆನವಣ್ಣಾ ಎಂದು ಜನಪದರ ಸ್ತುತಿಗೆ ಪಾತ್ರನಾದ ಗಣಪತಿಯ ಗುಡಿ ಈಗ ಊರಿನ ನಡುಭಾಗದಲ್ಲಿರುವ ಬಾಣೇಶ್ವರನ ಗುಡಿಯ ಪಕ್ಕದಲ್ಲಿದೆ.”
ಬೆಳ್ಳೂರಿನ ಆದಿಮಾಧವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಪ್ರಧಾನ ಗರ್ಭಗುಡಿಯ ಹೊರಗೆ ನವರಂಗದ ಎರಡು ಬದಿಗಳಲ್ಲಿ ಗಣೇಶ ಹಾಗೂ ಮಹಿಷಾಸುರ ಮರ್ದಿನಿಯರ ಸೊಗಸಾದ ವಿಗ್ರಹಗಳಿವೆ.. ಪಾಶಾಂಕುಶಧಾರಿಯಾಗಿ ಸರ್ವಾಲಂಕೃತನಾದ ಗಣೇಶನ ವಿಗ್ರಹ ಮುದ್ದಾಗಿದೆ. ಕುಸಿದ ಮಹಿಷನ ದೇಹದಿಂದ ಹೊರಬಂದ ರಕ್ಕಸನನ್ನು ಮೆಟ್ಟಿ ಗೋಣ್ಮುರಿಯುತ್ತಿರುವ ದುರ್ಗೆಯ ಶಿಲ್ಪವೂ ಈ ಮಾದರಿಯ ಇತರ ಹೊಯ್ಸಳ ಶಿಲ್ಪಗಳಂತೆ ಅಧ್ಯಯನ ದೃಷ್ಟಿಯಿಂದಲೂ ಗಮನಾರ್ಹವಾಗಿದೆ.”
ನಾಗಲಾಪುರದ ದೇಗುಲಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಪೂರ್ವಕಾಲದಲ್ಲಿ ಅಗ್ರಹಾರವಾಗಿದ್ದ ನಾಗಲಾಪುರ ಗ್ರಾಮದ ನಡುವೆ ಇರುವ ಕೇಶವ ದೇಗುಲವಾಗಲಿ ಹೊರವಲಯದಲ್ಲಿರುವ ಕೇದಾರೇಶ್ವರ ದೇಗುಲವಾಗಲಿ ಪೂರ್ಣಪ್ರಮಾಣದ ಶಿಲ್ಪಕಲಾಸಂಪನ್ನವಾದ ಗುಡಿಗಳೇನೂ ಅಲ್ಲ. ಕುಸಿತದ ಅಪಾಯದಲ್ಲಿದ್ದು ಪುರಾತತ್ವ ಇಲಾಖೆಯ ಸಮರ್ಥ ಮಾರ್ಗದರ್ಶನದಲ್ಲಿ ಪುನರ್ಜೋಡಣೆಗೊಂಡು ಸುಸ್ವರೂಪ ತಾಳಿರುವ ಈ ಎರಡೂ ಗುಡಿಗಳಿಗೆ…”
ಬೆಳವಾಡಿಯ ವೀರನಾರಾಯಣ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ದೇಗುಲದ ಮಹಾದ್ವಾರವೇ ದೊಡ್ಡದೊಂದು ಕಟ್ಟಡದಂತಿದೆ. ಒಳಬರುತ್ತಿರುವಂತೆಯೇ ಧ್ವಜಸ್ತಂಭವೂ ಗುಡಿಯನ್ನೇರಲು ಸೋಪಾನಗಳೂ ಇದಿರಾಗುತ್ತವೆ. ಮೆಟ್ಟಿಲುಗಳ ಅಕ್ಕಪಕ್ಕ ಸೊಗಸಾದ ಗಜಶಿಲ್ಪಗಳು. ಮಂಟಪದ ಸೂರಿನ ಇಳಿಜಾರು, ಮೇಲಂಚಿನ ಕೈಪಿಡಿಯ ಗೋಡೆಯ ಮೇಲಿನ ಚಿತ್ತಾರ, ಎಲ್ಲವೂ ಆಕರ್ಷಕ.”
ಸಿಂದಘಟ್ಟದ ಲಕ್ಷ್ಮೀನಾರಾಯಣ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಸಿಂದಘಟ್ಟದ ಶಾಸನವೊಂದರಲ್ಲಿ ಬರುವ ವಿವರದಂತೆ, ಸಿಂದಘಟ್ಟದ ಮಹಾಜನರು ಗಂಡಸಿಯ ಮಾದಂಣ ಹಾಗೂ ಬೊಮ್ಮಣ್ಣ ಎಂಬುವರಿಂದ 46 ವರಾಹ ಗದ್ಯಾಣಗಳನ್ನು ಪಡೆದು ಲಕ್ಷ್ಮೀನಾರಾಯಣ ದೇವರ ಪೂಜಾಕಾರ್ಯವನ್ನು ನಡೆಸುವ ಹಕ್ಕನ್ನು ಒಪ್ಪಿಸಿಕೊಟ್ಟರಂತೆ. ನಿತ್ಯಪೂಜಾದಿಗಳನ್ನು ನಡೆಸುವ ಹೊಣೆ ಅವರಿಬ್ಬರಿಗೆ ಸೇರಿದ್ದು, ದೇವಸ್ಥಾನದ ಜೀರ್ಣೋದ್ಧಾರ ಮಾಡಿಸುವ ಜವಾಬ್ದಾರಿ ಮಾತ್ರ…”
ಧಾರೇಶ್ವರದ ಧಾರಾನಾಥ ದೇಗುಲ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಕ್ರಿ.ಶ. ಹತ್ತನೆಯ ಶತಮಾನದ ಪ್ರಾರಂಭದಲ್ಲೇ ಈ ದೇವಾಲಯಕ್ಕೆ ರಾಣಿಯೊಬ್ಬಳು ದತ್ತಿನೀಡಿರುವ ಶಾಸನವಿದೆಯೆಂದಮೇಲೆ ಈ ದೇಗುಲದ ಪ್ರಾಚೀನತೆಯನ್ನು ನೀವು ಊಹಿಸಿಕೊಳ್ಳಬಹುದು. ಶಾಸನದ ವಿಷಯ ಆಮೇಲೆ ಹೇಳೋಣ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ದೇವಾಲಯದ ಸುತ್ತ ಕಟ್ಟಿರುವ ಹೊಸ ನಿರ್ಮಿತಿಗಳ ಹಿಂಬದಿಯಲ್ಲಿ ಗೋಚರಿಸುತ್ತದೆ – ಚಾಲುಕ್ಯಕಾಲದ ಸರಳಶೈಲಿಯ ಶಿಖರ. ಶುಕನಾಸಿಯತ್ತ ಮುಖಮಾಡಿರುವ ಶಿಖರದ ಭಾಗವನ್ನು ಹೊರತುಪಡಿಸಿ…”
ಕೆಳದಿಯ ರಾಮೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ರಾಮೇಶ್ವರ ಗುಡಿಯ ಹೊರಭಾಗದ ಗೋಡೆಯ ಮೇಲೆ ಸ್ಥಾಪಿತರಾದ ದ್ವಾರಪಾಲಕರನ್ನು ಗಮನಿಸಿ. ಒಂದೆಡೆ ದಕ್ಷಬ್ರಹ್ಮನಿದ್ದಾನೆ. ಶಿವನ ವಿಷಯದಲ್ಲಿ ಅಪರಾಧಿಯಾದ ದಕ್ಷ ದ್ವಾರಪಾಲಕನಾಗಿರುವುದೇನೋ ಸರಿಯೇ. ಇಲ್ಲಿ ಇನ್ನೊಬ್ಬ ದ್ವಾರಪಾಲಕನಾಗಿ ನಿಂತವನು ಸಾಕ್ಷಾತ್ ನರಸಿಂಹ! ವಿಷ್ಣುವಿನ ರೂಪಗಳಲ್ಲೇ ಉಗ್ರನೆನಿಸಿದ… “









