ಕುಪ್ಪಗದ್ದೆಯ ರಾಮೇಶ್ವರ ದೇವಾಲಯ: ಟಿ.ಎಸ್ ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಈ ಗುಡಿಯ ಮುಖಮಂಟಪದ ಸೊಗಸೇ ಬೇರೆ. ಐದು ಅಂಕಣ, ಇಪ್ಪತ್ನಾಲ್ಕು ಕಂಬಗಳು. ಒಂದು ಕಂಬದ ವಿನ್ಯಾಸದಂತೆ ಮತ್ತೊಂದಿಲ್ಲ. ಮಂಟಪದ ಮೂರು ಕಡೆ ಪ್ರವೇಶದ್ವಾರಗಳು. ಪೂರ್ವದ ಬಾಗಿಲಿಂದ ಒಳಬರುತ್ತಿರುವಂತೆಯೇ ಗರ್ಭಗುಡಿಗೆ ಎದುರಾಗಿ ಕುಳಿತ ನಂದಿವಿಗ್ರಹ ಅತ್ಯಾಕರ್ಷಕ. ನಂದಿಗೆ ತೊಡಿಸಿದ ಆಭರಣಗಳಿರಲಿ, ಗಂಟೆಯ ಹಗ್ಗದ ಗಂಟೂ ತೀರಾ ನೈಜವಾಗಿ ಶೋಭಿಸುತ್ತದೆ”
ಅರಕೆರೆಯ ಕೇಶವ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಹಾಸನ ಜಿಲ್ಲೆಯ ಬಾಣಾವರದಿಂದ ಜಾವಗಲ್ಲಿಗೆ ಹೋಗುವ ದಾರಿಯಲ್ಲಿ ಅರಕೆರೆ ಗ್ರಾಮ ಸಿಗುತ್ತದೆ. ಪೂರ್ವದಲ್ಲಿ ಇದಕ್ಕೆ ಸರ್ವಜ್ಞಪುರವೆಂಬ ಹೆಸರಿದ್ದಿತು. ವಿಷ್ಣುಭಕ್ತನಾದ ದಾಮೋದರ ಸೆಟ್ಟಿಯು ಈ ಊರಿನಲ್ಲಿ ತ್ರಿಕೂಟಾಚಲ ದೇಗುಲವೊಂದನ್ನು ನಿರ್ಮಿಸಿದ. ಹೊಯ್ಸಳ ಅರಸ ಎರಡನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದ ಈ ದೇವಸ್ಥಾನದ ಮುಖ್ಯ ಗರ್ಭಗುಡಿಯಲ್ಲಿ ಕೇಶವನೂ, ಉಳಿದೆರಡು ಕಡೆಗಳಲ್ಲಿ ವೇಣುಗೋಪಾಲ…”
ಬನವಾಸಿಯ ಮಧುಕೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಮಧುಕೇಶ್ವರ ದೇವಾಲಯ ಮೂಲತಃ ವಿಷ್ಣುವಿನ ಇಪ್ಪತ್ನಾಲ್ಕು ರೂಪಗಳಲ್ಲಿ ಒಂದಾದ ಮಾಧವನ ಗುಡಿಯಂತೆ. ಕದಂಬರ ಕಾಲದಲ್ಲಿ ನಿರ್ಮಿತವಾಗಿರುವ ಈ ಗುಡಿಯು ಕಾಲಾಂತರದಲ್ಲಿ ಕಲ್ಯಾಣ ಚಾಲುಕ್ಯರಿಂದ ಸೋಂದೆಯ ಅರಸರವರೆಗಿನ ರಾಜಮನೆತನಗಳ ಆಳ್ವಿಕೆಯಲ್ಲಿ ಅನೇಕ ಸೇರ್ಪಡೆ, ಜೀರ್ಣೋದ್ಧಾರಗಳಿಗೆ ಒಳಪಟ್ಟು ಸುಸ್ಥಿತಿಯಲ್ಲಿ ಉಳಿದುಕೊಂಡು ಬಂದಿದೆ.”
ಅಗರ್ತಲಾದ ಬೀದಿಗಳಲ್ಲಿ ಸುತ್ತಾಡಿದ ನೆನಪುಗಳು: ರೂಪಶ್ರೀ ಕಲ್ಲಿಗನೂರ್ ಅಂಕಣ
“ತ್ರಿಪುರಾ ವಿಶ್ವವಿದ್ಯಾಲಯದಿಂದ ನೀರ್ ಮಹಲ್ ಮೂವತ್ತು ಕಿಲೋಮೀಟರುಗಳಷ್ಟು ದೂರವಿತ್ತು. ಹಾದಿಯುದ್ದಕ್ಕೂ ಅಲ್ಲಲ್ಲಿ ಹಸುರು ಗದ್ದೆಗಳು, ಕೈಕಾಲು ಮುರಿದುಕೊಂಡು ಬೀದಿಗೆ ಬಿದ್ದ ಬಂಗಾಳಿ ದೇವತೆಯರು, ಮೆಟಲ್ ಶೀಟಿನ ಅಂಗಡಿಗಳು, ಮನೆಗಳು, ಕಾಡು ಕಡಿದು ಎದೆಯುಬ್ಬಿಸಿಕೊಂಡು ಎದ್ದು ನಿಂತಿದ್ದ ರಬ್ಬರ್ ತೋಟಗಳು ಸಿಕ್ಕವು. ಪ್ರವಾಸಿಗರ ಕೊರತೆಯಿಂದ ಹಾಗೂ ಬಡತನದ ಹೊಡೆತದಿಂದ ಅಗರ್ತಲಾ…”
ಆವನಿಯ ದೇವಾಲಯ ಸಂಕೀರ್ಣ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಈ ದೇಗುಲ ಸಂಕೀರ್ಣದಲ್ಲಿ ರಾಮೇಶ್ವರ ದೇವಾಲಯವಲ್ಲದೆ, ಲಕ್ಷ್ಮಣೇಶ್ವರ, ಭರತೇಶ್ವರ, ಶತ್ರುಘ್ನೇಶ್ವರ, ರಾಮಾಂಜನೇಯ ಹಾಗೂ ಪಾರ್ವತಿಯ ದೇಗುಲಗಳಿವೆ. ಮುಂದಿನ ಶತಮಾನಗಳಲ್ಲಿ ಈ ಪ್ರಾಂತ್ಯವನ್ನು ಆಳಿದ ವಿಜಯನಗರದ ಅರಸರೇ ಮೊದಲಾದವರ ಆಡಳಿತಾವಧಿಯಲ್ಲಿ ಈ ದೇವಾಲಯಗಳ ಜೀರ್ಣೋದ್ಧಾರ, ಹೆಚ್ಚುವರಿ ನಿರ್ಮಾಣಗಳು ನಡೆದಿವೆ. ಇದರಿಂದಾಗಿ ವಿವಿಧ ದೇಗುಲಗಳ…”
ಹೊನ್ನಾವರದ ಚನ್ನಕೇಶವ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಇಲ್ಲಿ ಕೇಶವನ ಗುಡಿಯನ್ನು ಕಟ್ಟಿಸಿ ದತ್ತಿ ಒದಗಿಸಿದವನು ಒಂದನೇ ನರಸಿಂಹನ ಮಹಾಪ್ರಧಾನನಾಗಿದ್ದ ಲಕ್ಷ್ಮಯ್ಯ ಹೆಗ್ಗಡೆ. ದೇವಾಲಯದ ಹೊರಭಾಗದಲ್ಲಿ ಇರಿಸಿರುವ ಶಾಸನದಲ್ಲಿ ದೇವಾಲಯ ನಿರ್ಮಾಣ ಮತ್ತು ಅದರ ನಿರ್ವಹಣೆಗೆಂದು ಭೂಮಿಯನ್ನು ದಾನನೀಡಿದ ವಿವರಣೆಯಿದೆ. ಒಕ್ಕಣೆಗೆ ಸಾಕ್ಷೀಭೂತನಾಗಿ ಶಾಸನದ ಮೇಲುಭಾಗದಲ್ಲಿ ಕಾಮಧೇನು, ಸೂರ್ಯ,ಚಂದ್ರ, ಪರಿವಾರದೊಡನೆ ಸ್ವಯಂ ಕೇಶವನೇ ನಿಂತಿದ್ದಾನೆ…”
ಹಿರೇನಲ್ಲೂರಿನ ಮಲ್ಲಿಕಾರ್ಜುನ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಇಲ್ಲಿನ ಮಲ್ಲಿಕಾರ್ಜುನ ಗುಡಿಯ ಮೂರೂ ಶಿಖರಗಳು ಕಳಶಸಮೇತವಾಗಿ ಸುಸ್ಥಿತಿಯಲ್ಲಿದ್ದು ಹೊಯ್ಸಳ ವಾಸ್ತುಶಿಲ್ಪದ ಉತ್ತಮ ಮಾದರಿಗಳಾಗಿ ಉಳಿದುಕೊಂಡಿವೆ. ಎಡಭಾಗದ ಶಿಖರದ ಸುಖನಾಸಿಯ ಮುಂದೆ ಹೊಯ್ಸಳ ಲಾಂಛನವಿದೆ. ನಾಲ್ಕು ಸ್ತರಗಳ ವಿನ್ಯಾಸವಿರುವ ಶಿಖರಗಳು, ಶಿಖರಗಳ ಮೇಲಿನ ಕಿರುಕೋಷ್ಠಗಳಲ್ಲಿ ವೇಣುಗೋಪಾಲ, ನರಸಿಂಹ, ಲಕ್ಷ್ಮೀನಾರಾಯಣ, ಗಣಪತಿ, ಶಿವ, ಭೈರವ, ಹನುಮ,…”
ಬನವಾಸಿಯ ಮಧುಕೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಮಧುಕೇಶ್ವರ ದೇವಾಲಯ ಮೂಲತಃ ವಿಷ್ಣುವಿನ ಇಪ್ಪತ್ನಾಲ್ಕು ರೂಪಗಳಲ್ಲಿ ಒಂದಾದ ಮಾಧವನ ಗುಡಿಯಂತೆ. ಕದಂಬರ ಕಾಲದಲ್ಲಿ ನಿರ್ಮಿತವಾಗಿರುವ ಈ ಗುಡಿಯು ಕಾಲಾಂತರದಲ್ಲಿ ಕಲ್ಯಾಣ ಚಾಲುಕ್ಯರಿಂದ ಸೋಂದೆಯ ಅರಸರವರೆಗಿನ ರಾಜಮನೆತನಗಳ ಆಳ್ವಿಕೆಯಲ್ಲಿ ಅನೇಕ ಸೇರ್ಪಡೆ, ಜೀರ್ಣೋದ್ಧಾರಗಳಿಗೆ ಒಳಪಟ್ಟು ಸುಸ್ಥಿತಿಯಲ್ಲಿ ಉಳಿದುಕೊಂಡು ಬಂದಿದೆ. ಗರ್ಭಗುಡಿಯಲ್ಲಿರುವ ಮಧುಕೇಶ್ವರ….”
ಅರಸೀಕೆರೆಯ ಶಿವ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಇತರ ಅನೇಕ ಹೊಯ್ಸಳ ದೇಗುಲಗಳಲ್ಲಿ ಕಾಣುವ ಹಲವು ಸ್ತರಗಳ ಮಾದರಿಯಂತಲ್ಲದೆ, ಒಂದರ ಮೇಲೊಂದು ಗೋಪುರವಿರುವಂತೆಯೂ ಮೇಲಿನ ಕಿರುವೇದಿಕೆ(ಸ್ತೂಪಿ)ಯ ಮೇಲೆ ಕಳಶವಿರುವಂತೆಯೂ ವಿನ್ಯಾಸಮಾಡಲಾಗಿದೆ. ಐದು ಹಂತಗಳ ಕಿರುಗೋಪುರಗಳಿದ್ದು, ಎಲ್ಲ ದಿಕ್ಕುಗಳಿಗೆ ಅಭಿಮುಖವಾಗಿ, ಕೆಳಹಂತದ ಒಂದೊಂದು ಕಿರುಗೋಪುರದ ಮುಂಭಾಗದಲ್ಲಿ ದೇವತಾಮೂರ್ತಿಯನ್ನು ಕಾಣಬಹುದು. ಉಳಿದಂತೆ ಹೊಯ್ಸಳ ಕಲೆಯ ವೈಶಿಷ್ಟ್ಯವಾದ ಸಿಂಹಮುಖ…”









