ಮಹಾಕೂಟದ ದೇಗುಲಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಮಹಾಕೂಟೇಶ್ವರ ದೇವಾಲಯವು ಕಾಶಿತೀರ್ಥ ಹಾಗೂ ಶಿವಪುಷ್ಕರಣಿಗಳೆಂಬ ಕೊಳಗಳ ಬದಿಯಲ್ಲಿದೆ. ಇಲ್ಲಿನ ಪುಷ್ಕರಣಿಯ ಮಂಟಪದಲ್ಲಿ ಪಂಚಮುಖ ಶಿವಲಿಂಗವಿರುವುದೊಂದು ವಿಶೇಷ. ಮಹಾಕೂಟೇಶ್ವರ ದೇವಾಲಯವು ದ್ರಾವಿಡಶೈಲಿಯ ಶಿಖರವನ್ನು ಹೊಂದಿರುವ ದೇವಾಲಯಗಳ ಪೈಕಿ ಕರ್ನಾಟಕದಲ್ಲೇ ಮೊದಲಿನದೆಂಬ ಕೀರ್ತಿಗೆ ಪಾತ್ರವಾಗಿದೆ. ಗರ್ಭಗೃಹ, ಪ್ರದಕ್ಷಿಣಾಪಥ, ನವರಂಗ ಹಾಗೂ ಮುಖಮಂಟಪಗಳನ್ನು ಹೊಂದಿರುವ ದೇಗುಲದ ಮುಂಭಾಗದಲ್ಲಿ ನಂದಿಯ ಮಂಟಪವೂ ಇದೆ.”
ಮೂಡಬಿದರೆಯ ಸಾವಿರಕಂಬದ ಬಸದಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಮುಂದೆ ಕಾಣುವ ಬಸದಿಯ ಕಟ್ಟಡವು ಕಗ್ಗಲ್ಲಿನ ನಿರ್ಮಿತಿ. ಕಟ್ಟಡದ ಮೇಲುಭಾಗ ಮರದಿಂದ ಮಾಡಲ್ಪಟ್ಟಿದ್ದು ಹೆಂಚು ಹೊದಿಸಿದೆ. ಕರಾವಳಿಪ್ರದೇಶದ ಬಿಸಿಲು, ಗಾಳಿ, ಮಳೆಗಳನ್ನು ತಡೆಯಲು ಸಮರ್ಥವಾಗುವಂತಹ ವಾಸ್ತುಶೈಲಿಯುಳ್ಳ ನಿರ್ಮಾಣ. ಹಲವು ಮಂಟಪಗಳನ್ನುಳ್ಳ ಬಸದಿಯ ಕಟ್ಟಡದತ್ತ ಸೋಪಾನವೇರಿ ಹೋದರೆ ಮೊದಲಿಗೆ ನಕ್ಷತ್ರಾಕಾರದ ಮಂಟಪವನ್ನು ಕಾಣುವಿರಿ…”
ಹೆಡತಲೆಯ ಲಕ್ಷ್ಮೀಕಾಂತ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಈ ಮಂಟಪ ಹದಿನಾರು ಮೂಲೆಗಳುಳ್ಳ ವಿನ್ಯಾಸವನ್ನು ಹೊಂದಿತ್ತು. ಎಲ್ಲ ಮೂಲೆಗಳಲ್ಲೂ ಕುಳಿತುಕೊಳ್ಳಲು ಕಕ್ಷಾಸನ ಎಂದರೆ ಒರಗುಪೀಠಗಳಿರುವಂತೆ ವ್ಯವಸ್ಥೆ ಮಾಡಲಾಗಿತ್ತು. ಈ ಪೀಠಗಳಲ್ಲಿ ಒಂದೊಂದು ಮೂಲೆಯಲ್ಲಿ ಒಬ್ಬೊಬ್ಬ ರಾಜಕುಮಾರಿ ತನ್ನ ಗಂಡನೊಡನೆ ಕುಳಿತುಕೊಳ್ಳುತ್ತಿದ್ದಳು. ನಕ್ಷತ್ರಾಕಾರದ ಈ ಮಂಟಪಕ್ಕೆ ಮೂರು ದಿಕ್ಕುಗಳಿಂದ ಪ್ರವೇಶದ್ವಾರಗಳು.”
ಚಂದ್ರಗಿರಿಯ ಬಸದಿಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಭದ್ರಬಾಹು ಗುಹೆಯಿಂದ ಅನತಿ ದೂರದಲ್ಲಿರುವ ಬಸದಿಗಳ ಆವರಣವನ್ನು ಪ್ರವೇಶಿಸುತ್ತಿದ್ದಂತೆಯೇ ಮಾನಸ್ತಂಭವೊಂದು ಇದಿರಾಗುತ್ತದೆ. ಇದನ್ನು ಕೂಗೆ ಬ್ರಹ್ಮದೇವನ ಸ್ತಂಭ ಎಂತಲೂ ಕರೆಯುವರು. ಈ ಸ್ತಂಭವು ಗಂಗರ ಕಾಲಕ್ಕೆ ಸೇರಿದ್ದು (ಕ್ರಿ.ಶ. 976), ಗಂಗ ಅರಸ ಮಾನಸಿಂಹನ ಗೌರವಾರ್ಥ ನಿರ್ಮಿಸಲಾಗಿದೆ. ಮಾನಸಿಂಹನ ಪರಾಕ್ರಮವನ್ನು ವರ್ಣಿಸುವ ಶಾಸನವೂ ಈ ಸ್ತಂಭದ ಮೇಲೆ ಬರೆಯಲ್ಪಟ್ಟಿದೆ.”
ಹಳೇ ಆಲೂರಿನ ಅರ್ಕೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಹಳೇ ಆಲೂರಿನ ಅರ್ಕೇಶ್ವರ ದೇವಾಲಯವು ಐತಿಹಾಸಿಕ ವಿಜಯವೊಂದರ ಸಂಕೇತವಾಗಿ ನಿರ್ಮಾಣಗೊಂಡ ಸ್ಮಾರಕಕಟ್ಟಡ. ಗಂಗದೊರೆಗಳ ವಾಸ್ತುಶಿಲ್ಪದ ಪ್ರಮುಖ ಮಾದರಿಗಳಲ್ಲೊಂದು. ದಕ್ಷಿಣಭಾರತದ ಪ್ರಮುಖ ಮಾಂಡಲಿಕ ರಾಜವಂಶಗಳಲ್ಲೊಂದಾದ ಗಂಗಮನೆತನದ ರಾಜರು ರಾಷ್ಟ್ರಕೂಟರಿಗೂ ಚಾಲುಕ್ಯರಿಗೂ…”
ನಾರಾಯಣ ಯಾಜಿಯವರ ಕಥಾಸಂಕಲನಕ್ಕೆ ಎಸ್.ಆರ್. ವಿಜಯಶಂಕರ ಬರೆದ ಮುನ್ನುಡಿ
“ಸಾಹಿತ್ಯದಲ್ಲಿ ಎರಡು ಬಗೆ. ಒಂದು ಓದಿಸಿಕೊಂಡು ಹೋಗಿ ಓದುವ ಸಂತೋಷ, ಉಲ್ಲಾಸ ನೀಡಿ ಯೋಚಿಸಬೇಕಾಗಿಲ್ಲ ಎಂಬ ಬರಹಗಳು. ಇನ್ನೊಂದು ಬಗೆ, ಚಿಂತನೆಗೆ ಹಚ್ಚುವ, ತಾತ್ವಿಕ ಶೋಧಕ್ಕೆ ಇಳಿವ ಕತೆಗಳು. ನಾರಾಯಣ ಯಾಜಿಯವರಿಗೆ ಓದಿಸಿಕೊಂಡು ಹೋಗುವ ಶೈಲಿ ಇದೆ. ತಾತ್ವಿಕ ಶೋಧನೆಯಲ್ಲಿ ಆಸಕ್ತಿ ಇದೆ. ಆದರೆ ತಾತ್ವಿಕತೆ ಇನ್ನೂ ಸ್ಪಷ್ಟವಾಗಬೇಕಾಗಿದೆ.”
ನಾಗಮಂಗಲದ ಸೌಮ್ಯಕೇಶವ: ಟಿ. ಎಸ್ ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಯೋಗಾನರಸಿಂಹ ದೇವಾಲಯ ಸುಮಾರು ಹದಿಮೂರನೆಯ ಶತಮಾನದಷ್ಟು ಪ್ರಾಚೀನವಾದುದು. ವಿಶಾಲವಾದ ಮುಖಮಂಟಪ, ನವರಂಗ, ಗರ್ಭಗೃಹಗಳಿರುವ ದೊಡ್ಡ ಕಟ್ಟಡ. ಗರ್ಭಗುಡಿಯಲ್ಲಿ ಚತುರ್ಭುಜಧಾರಿ ನರಸಿಂಹ . ಮೇಲಿನೆರಡು ಕೈಗಳಲ್ಲಿ ಚಕ್ರಶಂಖಗಳನ್ನು ಧರಿಸಿದ್ದು ಮುಂದಿನ ಎರಡು ಕೈಗಳನ್ನು ಮಂಡಿಯ ಮೇಲಿರಿಸಿಕೊಂಡು ಯೋಗಸ್ಥಿತಿಯಲ್ಲಿ ಕುಳಿತ ಭಂಗಿ.”
ಹಲಸೂರಿನ ಸೋಮೇಶ್ವರ ದೇವಾಲಯ: ಟಿ.ಎಸ್ ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಚೋಳ ಅರಸರ ನಿರ್ಮಿತಿಗಳಲ್ಲೊಂದೆಂದು ಹೇಳಲಾಗಿರುವ ಈ ದೇವಾಲಯವು ವಿಜಯನಗರ ಶೈಲಿಯನ್ನು ಪ್ರಧಾನವಾಗಿ ತೋರ್ಪಡಿಸುತ್ತಿದ್ದು, ಬಹುಶಃ ಪುರಾತನ ದೇವಾಲಯವೊಂದು ವಿಜಯನಗರದ ಅರಸರ ಕಾಲದಲ್ಲಿ ಜೀರ್ಣೋದ್ಧಾರಗೊಂಡಿರಬಹುದೆಂದು ಊಹಿಸಲು ಅವಕಾಶವಿದೆ. ಯಲಹಂಕ ನಾಡಪ್ರಭುಗಳು ಈ ದೇವಾಲಯದ ಪುನರ್ನಿಮಾಣದಲ್ಲಿ ತೊಡಗಿಕೊಂಡ ಬಗೆಗೆ ಐತಿಹ್ಯಗಳೂ ಪ್ರಚಲಿತವಾಗಿವೆ.”
ಸೂಡಿಯ ಜೋಡುಕಳಸದ ಗುಡಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ನಾಗೇಶ್ವರ ಗುಡಿಯ ಹಿಂಭಾಗದ ಆವರಣವೊಂದರಲ್ಲಿ ದೊಡ್ಡದೊಂದು ಗಣಪತಿಯ ವಿಗ್ರಹವನ್ನೂ ನಂದಿ, ಶಿವಲಿಂಗಗಳನ್ನೂ ಇರಿಸಲಾಗಿದೆ. ಪಕ್ಕದಲ್ಲಿಯೇ ಚಾಲುಕ್ಯರ ನಿರ್ಮಾಣದ ಪುರಾತನ ಬಾವಿಯೊಂದಿದೆ. ಬಾವಿಯೂ ಸುತ್ತಲಿನ ಭವ್ಯಕಟ್ಟಡವೂ ಸೊಗಸಾಗಿವೆ. ಇನ್ನಷ್ಟು ಮುಂದೆ ಓಣಿಯೊಂದರಲ್ಲಿ ಸಾಗಿದರೆ, ಅಚಲೇಶ್ವರ ದೇವಾಲಯವು ಕಾಣಸಿಗುತ್ತದೆ.”









