‘ಬ್ರೈಡಲ್ ಫಾಲ್’ ನಯಾಗರಾ ಜಲಪಾತ: ಸುಜಾತಾ ತಿರುಗಾಟ ಕಥನ
“ಕೇವಲ ನಲವತ್ತು ವರುಶದ ಹಿಂದೆ ಬೇಸಿಗೆಯಲ್ಲೂ ನೀರ ಸುರುವಿನಲ್ಲಿ ಕಣ್ ತಣಿಸುತ್ತಿದ್ದ ಜಲಪಾತವನ್ನು ನಾವು ನೋಡಿ ಬಂದಿದ್ದೆವು. ಈಗೊಮ್ಮೆ ಜನವರಿ ತಿಂಗಳಿನಲ್ಲಿ ಹೋದಾಗ ಗಬ್ಬೆದ್ದ ಹಳ್ಳಕೊಳ್ಳದಂತೆ ಭಾಸವಾಗಿತ್ತು. ಭೂಮ್ತಾಯಿಯೇ ಎದ್ದು ಬಾಯಿಬಡಿದುಕೊಳ್ಳುವಂತೆ ಒಡಲು ಬರಿದಾಗಿತ್ತು. ಮನುಷ್ಯ ನಡೆದಾಡಿದ ದಾರಿಯಲ್ಲಿ ಹುಲ್ಲೂ ಹುಟ್ಟಲಾರದು ಎಂಬುದು ಜಾನಪದರ ನಂಬಿಕೆ. ಎತ್ತರದ ಜಾಗದಲ್ಲಿ ನಾವು ನಿಂತು ಭೂಮಿಯನ್ನು ನೋಡಿದಾಗ ಮನುಷ್ಯನ ಈ ಆಟಗಳ ಸಣ್ಣತನ ತೋರುತ್ತದೆ.”
ಕಾಫಿ ಗಿಡದ ಹೂಗೊಂಚಲ ಕಥೆ : ಸುಜಾತಾ ತಿರುಗಾಟ ಕಥನ
“ತೋಟ ಹಾದು ಬರಲು ಹೋದರೆ ಮಳೆಹದ ಸಾಲದೆ ಅಲ್ಲಲ್ಲೇ ಬರಕಲಾಗಿರುವ ತೋಟ ಕಾಣಿಸಿತು. ಈ ವರ್ಷದ ಮಳೆಗಾಲದ ಅಧಿಕ ವೃಷ್ಟಿಯಲ್ಲಿ ಕೊಳೆತ ಕೆಲವು ಎತ್ತರದ ಒಣಗಿದ ಮೆಣಸಿನ ಬಳ್ಳಿಯೂ ಕಂಡವು. ಅಷ್ಟರಲ್ಲಿ ಕಟು ವಾಸನೆ ಬಡಿಯಿತು. ಜೇನ್ನೊಣದ ಝೇಂಕಾರ. ಗಂಧ ಹುಡುಕಿ ಹೋದರೆ ಓಡುತ್ತಿದ್ದ ಸ್ಪ್ರಿಂಕ್ಲರ್. ತಣ್ಣಗೆ ಚಿಮ್ಮುತ್ತಿದ್ದ ಸ್ಪ್ರಿಂಕ್ಲರ್ ನೀರಿನ ಪಟ್ಟೆಯ ಅಂಚುಕಟ್ಟಿ ದಪ್ಪ ಮೊಗ್ಗಿನ ಜಡೆಯಂಥ ಮೊಗ್ಗೆದ್ದು ನಿಂತಿದ್ದವು.”
ನಯಾಗರ ಎಂಬ ಜೈವಿಕ ವೈವಿಧ್ಯ ತಾಣ: ಸುಜಾತಾ ತಿರುಗಾಟ ಕಥನ
“ಹತ್ತಾರು ತಳಿಗಳನ್ನು, ಸಸ್ಯ ಸಂಕುಲವನ್ನು ಕಾಪಾಡಿಕೊಳ್ಳುವ ಶಿಸ್ತು, ಶ್ರದ್ಧೆ, ಅಮೇರಿಕಾ ದೇಶದ ಹೆಚ್ಚುಗಾರಿಕೆಯೇ ಅನ್ನಬಹುದು. ಮುಂದಿನ ಮೂವತ್ತು ವರ್ಷದ ಯೋಜನೆಯನ್ನಿಟ್ಟುಕೊಂಡೆ ಈ ದೇಶ ರಸ್ತೆಗಳನ್ನು ರೂಪಿಸುತ್ತದೆ. ಎಲ್ಲಿ ಮರಗಳನ್ನು ಕಡಿಯಲಾಗುತ್ತದೋ ಅಲ್ಲಿ ಎಚ್ಚರದಿಂದ ಮರ ನೆಡುತ್ತದೆ.”
ಚಿತ್ರೋತ್ಸವವೆಂಬ ಮಾಯಾಬಜಾರು:ಸುಜಾತಾ ತಿರುಗಾಟ ಕಥನ
“ಇಂಥ ತಣ್ಣಗಿನ ಕ್ರೌರ್ಯದ ಗೆರೆ ದಾಟಿ ಬಂದ ಸಂಗೀತ ನಿರ್ದೇಶಕನ ಕೈಗೆಣ್ಣುಗಳು ತನ್ನ ಪಿಯಾನೋ ಮಣೆಗಳನ್ನು ಒತ್ತಲಾರದಂತೆ ವಿರೂಪಗೊಂಡಿರುತ್ತವೆ. ಗೆರೆ ಎಳೆದುಕೊಂಡ ತಮ್ಮ ತಮ್ಮ ದೇಶಗಳಂತೆ ತಮ್ಮ ಭಿನ್ನ ಅಭಿರುಚಿಯನ್ನು ಹೊಂದಿದ ಜೀವಗಳು ತಮ್ಮ ಗೆರೆಗಳನ್ನು ಮೀರಿದ ಆಕಾಶದ್ದಕ್ಕೂ ಹರಡಿದ ಕಣ್ಣೋಟದ ಪ್ರೇಮವನ್ನು ಉಳಿಸಿಕೊಳ್ಳುತ್ತವೆ.”
ತಮಟೆ ನುಡಿಸುವವರ ಬದುಕು ಮತ್ತು ಬೆರಳ ಮಿಡಿತಗಳು: ಸುಜಾತಾ ತಿರುಗಾಟ ಕಥನ
“ತನ್ನ ವಾದ್ಯದ ಇತಿಹಾಸ ಹೇಳುವಾಗ ಅವರ ಕಣ್ಣಲ್ಲಿ ಭಾವುಕತೆ ಹಾಗೂ ತನ್ಮಯತೆ ಇತ್ತು. ಮುಳುಗುವ ಗುಣ ಇಲ್ಲದಿದ್ದರೆ ತಾಳ ಮೇಳದಲ್ಲಿ ಹೊಂದಾಣಿಕೆ ಇರಲು ಸಾಧ್ಯ ಇರೋದಿಲ್ಲ. ಅವರು ತಮಟೆ ನೆಲಕ್ಕೆ ಇಡುವಾಗಿನ ಅವರ ಬೆರಳಿನ ನವಿರು, ಮುಟ್ಟಿ ತೋರುವಾಗ ಕಲಾಕಾರನ ಹೆಮ್ಮೆ ತುಂಬಿ ತುಳುಕುತಿತ್ತು.”
ಕಲ್ಲಮೇಲೆ ಕೆತ್ತಿದ ಕಪ್ಪು ಗಿಳಿಯ ಚಿತ್ರ:ಸುಜಾತಾ ತಿರುಗಾಟ ಕಥನ
”ಒಳಗೆ ಕರುಳು ಕಿವುಚಿದಂತಾಯಿತು. ಇದುವರೆಗೂ ಕಪ್ಪುಕತ್ತಲಲಿ ಮುಚ್ಚಿಟ್ಟ ಬೆಳಕನ್ನು ಕಿತ್ತೆಸೆದು ಹೊರಬರುವ ಸ್ವರಗಳು ಸಮಾಜವನ್ನೇ ಧಿಕ್ಕರಿಸಿ ಕೂಗಿದಂತೆ. ಎಂದಿನಿಂದಲೋ ಆ ಕಬ್ಬಿಣದ ಬಾಗಿಲಲ್ಲಿ ತೂಗಿಬಿದ್ದ ಬೀಗಗಳು ತಮ್ಮ ಕೀಲಿ ಕಳೆದುಕೊಂಡು… ತಮ್ಮನ್ನು ಬಂಧಿಸಿಟ್ಟು ಕೂಡಿ ಹಾಕಿದ ಗೋಡೆಗಳ ನಡುವೆ ನ್ಯಾಯದ ಕೀಲಿಯ ಹುಡುಕಾಟದಲ್ಲಿದ್ದಂತೆ ತೋರಿದವು.”
ಪಾಂಗ್ಕೋರ್ ದ್ವೀಪ,ಮಂಗಟ್ಟೆ ಹಕ್ಕಿ ಮತ್ತು ಮಳೆಯ ಹಗಲು:ನರೇಂದ್ರ ಬಾಬು ಪ್ರವಾಸ ಕಥನ
“ಸಮುದ್ರ ತೀರದಲ್ಲಿ ನಿಂತರೆ ಮುಂದೆ ಇನ್ನೊಂದು ಸುಂದರ ಸಣ್ಣ ದ್ವೀಪ, ಸಮುದ್ರದಲ್ಲಿ ಚೆಲ್ಲಾಪಿಲ್ಲಿಯಾಗಿ ನಿಂತಿರುವ ಹಾಯಿ ದೋಣಿಗಳು. ದೂರದ ಆಳ ಕಡಲು, ಮಲಕ್ಕಾ ಜಲಸಂಧಿಯಲ್ಲಿ ಓಡಾಡುವ ದೊಡ್ಡ ದೊಡ್ಡ ಹಡಗುಗಳು. ಸಣ್ಣ ಊರಿನ ಪ್ರೀತಿ ತುಂಬಿದ ಜನ. ಬೀಚಿನ ಪಕ್ಕ, ಸಣ್ಣ ಸಣ್ಣಅಂಗಡಿಯಲ್ಲಿ ಕಾಯುತ್ತಿರುವ ನಿಗಿ, ನಿಗಿ, ಕೆಂಡದ ಮೇಲೆ ಸುಡುತ್ತಿರುವ ಜೋಳ.”
ನಾಟಕದ ನೆಂಟರ ಬದುಕಿನ ಚದುರಂಗ: ಸುಜಾತಾ ತಿರುಗಾಟ ಕಥನ
“ಗಾಡಿ ಎಳೆಯುವ ಜೋಡಿ ಎತ್ತಿಗೆ ಲವಕುಶರ ಹೆಸರಿಡುತ್ತಲೇ ಸೀತೆ ಪಟ್ಟ ಪಾಡು ದೃಷ್ಯದಿಂದ ಎದೆಗಿಳಿದ ಹೊತ್ತಿನಲ್ಲೇ… ತಮ್ಮವರ ಕಷ್ಟದ ಹೊತ್ತುಗಳನ್ನು ನೆನೆದು, “ಸೀತಾ ಮಾತೆ ನೀಸದಂಗೆ ನೀಸಬುಟ್ಲು ಕಣ ಬಾರವ್ವ ಅವಳು” ಎಂಬ ಮಾತಾಗುತ್ತಿದ್ದವು. “ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲವಂತೆ ಬಾ, ನಮ್ಮದೇನು?”
ನ್ಯೂಯಾರ್ಕ್ ಎಂಬ ಮಾಯಾನಗರಿ: ಸುಜಾತಾ ತಿರುಗಾಟ ಕಥನ
“ನಾಗರೀಕತೆಗೂ ಮುನ್ನ ಇರುವ ಮುಗ್ಧತೆ ಹಾಗೂ ನಾಗರೀಕತೆಯ ಪರಮಾವಧಿಯಲ್ಲಿ ಬರುವ ನೈಜತೆ ಎರಡಕ್ಕೂ ತಾಳೆಯಾಗುವಂತೆ ಇವರು ಕಾಣುತಿದ್ದರು. ಸಂಕೋಲೆ ಬಿಚ್ಚಿ ಹೆಜ್ಜೆಯೆತ್ತಿಟ್ಟ ಲಿಬರ್ಟಿ ಸ್ಟಾಛ್ಯೂಗೂ ಇಲ್ಲಿಗೂ ಹೊಂದಾಣಿಕೆಯಿದ್ದರೂ ಭಿನ್ನತೆ ಎದ್ದು ಕಾಣುತಿತ್ತು.”










