ಪದ್ಮಸಂಭವನ ಭವಸಾಗರದಲ್ಲಿ: ಅಬ್ದುಲ್ ರಶೀದ್ ಪ್ರವಾಸ ಕಥನ
ಕಾಶ್ಮೀರದ ಕಾರ್ಗಿಲ್ ನಿಂದ ಇನ್ನೂರೈವತ್ತು ಕಿಲೋಮೀಟರ್ ದಲ್ಲಿರುವ ಪದುಮ್ ಪಟ್ಟಣಕ್ಕೆ ಹೋಗಿದ್ದ ಲೇಖಕರ ಹಿಮ ಪಯಣದ ಕಥೆಗಳು.
ಜಕಾರ್ತದಲ್ಲಿ ಹೋಟೆಲ್ ಗಣೇಶ: ನಾಗಶ್ರೀ ಬರಹ
ಇಂಡೋನೇಶಿಯಾದಲ್ಲಿ ಹಿಂದೂ, ಬೌದ್ಧ ಧರ್ಮಗಳ ಆಳ್ವಿಕೆಯ ಪ್ರಭಾವದಿಂದ ಅದರ ಬೇರುಗಳಲ್ಲೇ ನಮ್ಮ ಸಂಸ್ಕೃತಿಯ ಕುರುಹುಗಳನ್ನು ಕಾಣಬಹುದು. ಅನೇಕ ಕಡೆಗಳಲ್ಲಿ ಗಣೇಶನೂ ಸೇರಿದಂತೆ ಕೃಷ್ಣ ಪಾಂಡವರ, ಭಗವದ್ಗೀತೆಯೆ ಕೆತ್ತನೆಗಳೂ ಇವೆ.
ದೇವಲೋಕದ ಕನ್ನಡಿ ಕೇದಾರ್‌ತಾಲ್
ರಸ್ತೆ ಬದಿಗೆ ಪರ್ವತದ ಪಕ್ಕೆಯ ಇಳಿಜಾರಿನಲ್ಲಿ ಒತ್ತಿಕೊಂಡಿರುವ ಮನೆಗಳು ಸಿಕ್ಕರೆ ಅದು ಯಾವುದೋ ಊರೋ ಅಥವಾ ಪಟ್ಟಣವೋ ಆಗಿರುತ್ತದೆ. ಯಾವ ಊರೂ ಒಂದು ಕಿ.ಮೀ. ಉದ್ದ ಮತ್ತು ನೂರನ್ನೂರು ಮೀಟರ್ ಅಗಲಕ್ಕಿಂತ ಹೆಚ್ಚಿರುವುದಿಲ್ಲ.
ಮನಮೋಹಕ ವಾಲ್ಪಾರೈ: ರಾಧಾಕೃಷ್ಣ ಪ್ರವಾಸ ಕಥನ
ಪೊಲ್ಲಾಚಿಯಿಂದ ಮತ್ತಷ್ಟು ಉತ್ತರಕ್ಕೆ ಸರಿದಂತೆ ಧುತ್ತನೆ ಕಾಣಿಸಿಕೊಳ್ಳತೊಡಗಿದುವು ಗಗನಚುಂಬಿ ಪರ್ವತ ಶ್ರೇಣಿಗಳು. ಈ ಶ್ರೇಣಿಗಳನ್ನು ಹತ್ತಿ ಇಳಿದು ಸಾಗಬೇಕಾಗಿತ್ತು. ಸುಮಾರು ಐದು ಸಾವಿರ ಅಡಿ ಎತ್ತರದಲ್ಲಿರುವ ವಾಲ್ಪಾರೈ ತಲುಪಲು. ಇದು ಅಂತಿಂಥ ಘಾಟಿಯಲ್ಲ ಅಸಾಮಾನ್ಯ ಘಾಟಿ.
ಡಿ.ಪಿ.ಸತೀಶ್ ಹಳೆದೆಹಲಿ ಅಲೆದಾಟ ೨: ಚಳಿಗಾಲಕ್ಕೆ ಕಾಯುತ್ತಾ
ಮೊಗಲರ ಕಾಲದ ಹಳೆದೆಹಲಿ ಮತ್ತು ಶೇಕಡಾ ನೂರರಷ್ಟು ಬ್ರಿಟೀಷ್ ಕಾಲದ ಹೊಸ ದೆಹಲಿ ನಡುವೆ ಇರುವುದು ನವ ದೆಹಲಿ ರೈಲು ನಿಲ್ದಾಣ, ಪಂಚ್ ಕುಯಿನ್ ರಸ್ತೆ ಮತ್ತು ಮಿಂಟೋ ಬ್ರಿಡ್ಜ್. ಇಲ್ಲಿನ ಭವ್ಯ ಕನಾಟ್ ಪ್ಲೇಸ್ ನಲ್ಲಿ ಆ ಕಾಲದ ನಾಲ್ಕು ಸಿನಿಮಾ ಥಿಯೇಟರ್ ಗಳು ಇನ್ನೂ ಇವೆ.
ಯಾಣಕ್ಕೆ ಯಾನ – ಒಂದು ಚಿಂತನೆ
ಅಲ್ಲೇ ಎಸೆದ ಡೈಯಾಪರ್ ನೋಡುವ ತನಕ ನಮಗೆ ಮನೆಯಲ್ಲಿ ಬಿದ್ದಿರುವ ಕೆಲಸದ ನೆನೆಪೇ ಆಗುವುದಿಲ್ಲ. ಎಸೆದ ಡೈಯಾಪರ್ ನಮ್ಮನ್ನು ಜರ್ರಂತ ವಾಪಸ್ ಯಥಾಸ್ಥಿತಿಗೆ ತರುತ್ತದೆ. ಮತ್ತೆ ಪ್ರವಾಸೊದ್ಯಮದ ಬಗ್ಗೆ ಪ್ರಶ್ನೆಗಳೇಳುತ್ತವೆ.
ಪೆಜತ್ತಾಯರ ನೇಪಾಲೀ ನವರಾತ್ರಿ ಡೈಲಿ ಸ್ಪೆಶಲ್ ಶುರು
ಹೆಚ್ಚಿನ ಪ್ರವಾಸಿಗಳಿಗೆ ಹೋಟೆಲ್ ಅನ್ನಪೂರ್ಣಾದ ‘ಕ್ಯಸೀನೋ’ ಬಹುದೊಡ್ದ ಆಕರ್ಷಣೆ. ಅಪವಾದ ಎಂಬಂತೆ, ನಾವು ಮಾತ್ರ ಆ ವೈಭವೋಪೇತ ಜೂಜುಕಟ್ಟೆಯಿಂದ ಬಹುದೂರ ಉಳಿದೆವು. ಕಾಠ್ಮಂಡುವಿನ ಹವಾಮಾನ ಬಹಳ ಚೆನ್ನಾಗಿತ್ತು. ಕ್ರೂರವಾದ ಚಳಿ ಇನ್ನೂ ಕಾಲಿಟ್ಟಿರಲಿಲ್ಲ.
ದೊಡ್ಡ ರೈಲುಗಳ ಕೊನೆಯ ನಿಲ್ದಾಣ ಕಲ್ಕಾ
ರೈಲು ಪರ್ವತಗಳ ಹೊಟ್ಟೆ ಕೆರೆದು ಮಾಡಿದ ಹಾದಿಯಲ್ಲಿ ನುಸುಳಿಕೊಂಡು ಹೋಯಿತು. ನೂರಾರು ಸೇತುವೆಗಳನ್ನು ದಾಟಿತು. ಶಿಖರಗಳು ಬಂದಾಗ ಉಬ್ಬಸ ಪಡುತ್ತ, ಇಳಿಜಾರು ಬಂದಾಗ ಜಾರಿಬೀಳುವಂತೆ ಮಾಡುತ್ತಿತ್ತು.
ತರೀಕೆರೆ ಏರಿಯಾ:ಮಲಾನಾ ಎಂಬ ಹಿಮಾಲಯದ ಹಳ್ಳಿ
ಮಲಾನದಲ್ಲಿ ನಮಗೆ ಹೊಟ್ಟೆ ಉರಿಸಿದ ಸಂಗತಿಯೊಂದಿತ್ತು. ಅದೆಂದರೆ, ಭಾರತೀಯರಾದ ನಾವು ನಮ್ಮದೇ ದೇಶದ ಒಂದು ಹಳ್ಳಿಯಲ್ಲಿ ಪರಕೀಯರಂತೆ ಅಂಜಿಕೊಂಡು ತಿರುಗುವಾಗ, ಊರತುಂಬ ವಸತಿಮಾಡಿದ್ದ ವಿದೇಶಿ ಪ್ರವಾಸಿಗರು, ಮನೆ ಅಳಿಯಂದಿರಂತೆ ನಿರಾಳವಾಗಿ ಓಡಾಡಿಕೊಂಡು ಇದ್ದುದು.









