Advertisement
ಭವ್ಯ ಟಿ.ಎಸ್. ಬರೆದ ಈ ದಿನದ ಕವಿತೆ

ಭವ್ಯ ಟಿ.ಎಸ್. ಬರೆದ ಈ ದಿನದ ಕವಿತೆ

ಬೇಗುದಿ

ಅವಳೆದೆಯ ಬೇಗುದಿ
ಆರದೊಲೆಯ ಕೆಂಡದಂತೆ
ದಹಿಸಿದೆ ಭಾವಗಳ ಇಂಚಿಂಚಾಗಿ
ಕಣ್ಣೀರಿನ ಒರತೆಯೂ ಬತ್ತಿರುವಾಗ
ಅವಳಿಗೀಗ ಜಗವೇ ಬರಡು
ಎದೆಯ ಭೂಮಿಯಲ್ಲಿ ಬರಿಯ
ಬಿರುಕುಗಳು…
ಅವಳ ದನಿಯೇಕೋ
ಈಗ ಗುನುಗುಲಾರದು
ಹಾಡಿಗೆ ನೋವು ಬಿಡಿಸಲಾರದ ಅಂಟು
ಆಸೆಯ ಹಕ್ಕಿಗಳು
ಹಾರಲಾರವೀಗ
ಮನವೇ ಪಂಜರದ ಗೂಡು
ಮಾಸಬಾರದು ಮುಖವೆಂದು
ಜನರ ಮೆಚ್ಚಿಸಲು
ಹುಸಿ ನಗೆಯ ಲೇಪಿಸುತ್ತಾಳೆ ತುಟಿಗೆ
ತನ್ನ ನಗುವಿಗೆ‌ ತಾನೇ
ಶಪಿಸಿ ಸುಮ್ಮನಾಗುವಂತೆ
ಪ್ರೀತಿಯ ಮೊಗೆಮೊಗೆದು
ಎರೆದವಳೀಗ ಅನಾಥೆ
ಬದುಕಾಗಿದೆ ಒಂಟಿ ಸಂತೆ
ಬಿಕರಿಗೆ ಭಾವಗಳಿಲ್ಲದೆ….

ಭವ್ಯ ಟಿ.ಎಸ್. ಕನ್ನಡ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕಾನುಗೋಡು
ಹೊಸನಗರ, ಶಿವಮೊಗ್ಗ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ