”ನಮ್ಮ ಪಯಣಕ್ಕೆ ಅಂತದ್ದೇನೂ ಉದ್ದೇಶವಿರಲಿಲ್ಲ. ನಾವಿಬ್ಬರೂ ಸುಮ್ಮನೇ ಬೈಕನ್ನೇರಿ ಮಾಳದ ಹಸಿರಿನಲ್ಲಿ ಕರಗಿಬಿಟ್ಟರೆ, ರಾಧಾಕೃಷ್ಣ ಜೋಶಿಯವರ ಮನೆಗೆ ಹೋಗಿ ಮಾಳದ ವಿಶೇಷ ಕೇಳುತ್ತಿದ್ದೆವು. ಅವರಿಂದಲೇ ನಮಗೆ ಹೊಸ ದಾರಿಗಳು ಸಿಕ್ಕುತ್ತಿತ್ತು. ಇವತ್ತೂ ಅವರ ಮನೆಗೆ ಹೋದಾಗ ಮಳೆ ಹಗುರಕ್ಕೆ ಸುರಿದು ಅವರ ಗದ್ದೆ ಮನೆಯು ಒದ್ದೆಯಾಗುತ್ತಿತ್ತು.ಅವರ ಮನೆಯಲ್ಲಿ ತೋಟದ ಮಾವಿನಹಣ್ಣಿನ ಸತ್ಕಾರವಾಯಿತು. ಅಷ್ಟೊತ್ತಿಗೆ ಮಳೆ ಇನ್ನೂ ಜಾಸ್ತಿಯಾಗಿ ಕಾಡಿನಲ್ಲಿ ಮತ್ತೂ ಸುತ್ತುವ ಆಸೆಯೂ ಹೆಚ್ಚಿತು”
ಪ್ರಸಾದ್ ಶೆಣೈ ಬರೆದ ಮಾಳ ಕಾಡಿನ ಕಥೆಗಳ ನಾಲ್ಕನೆಯ ಕಂತು.

 

ಕುದುರೆಮುಖ ಗಿರಿ ಶೃಂಗಗಳ ಕಡೆ ಕತ್ತೆತ್ತಿ ನೋಡಿದರೆ ಹಸಿರು ಮೋಡಗಳ ಜೊತೆ ಕೂಡಿಕೊಂಡು ಅಲ್ಲೊಂದು ಬೆಳ್ಳಿಬಣ್ಣದ ಪಲ್ಲಕ್ಕಿಯೊಂದು ನಿಂತಂತ್ತಿತ್ತು. ಬೇಸಿಗೆಯಲ್ಲಿ ಇಷ್ಟೇ ಇಷ್ಟು ಹಸಿರು ಕೂದಲಿರುವ ಮಂಡೆಯಂತೆ ಕಾಣುತ್ತಿದ್ದ ಬೆಟ್ಟಗಳು, ಈಗ ಒಂದಷ್ಟು ಮೋಡಗಳ ಬಣ್ಣಗಳನ್ನೂ ಮತ್ತೊಂದಿಷ್ಟು ಪಕೃತಿ ಮಾತೆಯ ಬಳಿಯಲ್ಲಿದ್ದ ರಂಗೆಲ್ಲವನ್ನೂ ತುಂಬಿಕೊಂಡು ನಿಂತಾಗ ಆ ಸೆರಗು ಹಿಡಿದುಕೊಂಡು ಮಾಳದ ಕಾಡುದಾರಿಯತ್ತ ಹೋಗದೇ ಇರಲು ಮನಸ್ಸು ಕೇಳುವುದದಾದರೂ ಹೇಗೆ? ಅದೂ ಅಲ್ಲದೇ ಇನ್ನೇನು ಮಳೆ ಬಂದೇ ಬರುತ್ತದೆ… ಅಯ್ಯೋ ದೂರದಲ್ಲಿ ಮಳೆ ಬಂದೇ ಬಿಟ್ಟಿತು ಅಂತೆಲ್ಲಾ ಅನ್ನಿಸಲು ಶುರುವಾದಾಗ, ಅಷ್ಟೊತ್ತು ರಂಗಾಗಿಯೇ ಕಾಣುತ್ತಿದ್ದ ಬೆಟ್ಟಗಳು ಮಳೆಯಿಂದ ನೆನೆದು ಚಂಡಿಚಂಡಿಯಾಗಿ ಸೀನಲು ತೊಡಗಿದಾಗ, ಆ ಕಾಜಾಣ ಹಕ್ಕಿಯ ಜೋಡಿ ಗೂಡಿನತ್ತ ಹೋಗಲು ಮನಸ್ಸು ಬಾರದೇ ಅಲ್ಲೇ ಕೊಂಬೆಯೊಂದರಲ್ಲಿ ಕೂತು ಮಳೆಯ ಮಹಾಮಜ್ಜನಗೈಯುತ್ತಿರುವಾಗ, ಅಯ್ಯೋ ಇನ್ನೇನು ಮಳೆ ಜೋರಾಗುತ್ತದೆ ಅಂತ ಹಾಲಿನ ಡೈರಿಯತ್ತ ಬಂದ ಆ ಹರೆಯದ ಹುಡುಗಿಯ ನುಣುಪಾದ ಪಾದಗಳು ಮನೆ ದಾರಿ ಹಿಡಿಯುವ ಹವಣಿಕೆಯಲ್ಲಿದ್ದಾಗ, ಮೋಡಗಳೆಲ್ಲಾ ಇನ್ನೂ ಕಪ್ಪಾಗಿ ಮಾಳವೆಲ್ಲಾ ಕತ್ತಲಲ್ಲಿ ಮುದ್ದಾಗಿ ಕಾಣುವಾಗ, ನಮಗೆ ಈ ಸ್ವರ್ಗದತ್ತ ಬರದೇ ಇರಲು ಹುಚ್ಚೆ?

ಮಳೆ ಎಂದರೆ ಪೇಟೆಯ ಮಂದಿಗೆ ದೊಡ್ಡ ರಗಳೆಯಾಗಿರಬಹುದು. ಆದರೆ ಮಲೆನಾಡಿನ ಕೆಳಗಿರುವ ಮಾಳದಂತಹ ಸಣ್ಣ ಸಣ್ಣ ಸ್ವರ್ಗದಂಥ ಊರುಗಳಲ್ಲಿ ಮಳೆ ಸುರಿದರೆ ನೆನೆಯುತ್ತಾ, ಹಸಿರು ಮುಕ್ಕುತ್ತಿರುವ ದಾರಿಯನ್ನು ನೋಡುತ್ತ, ಮಳೆಯೂ, ಮಂಜೂ ಒಟ್ಟಾಗಿ ಮಾಡಿರುವ ಹೊಸ ಹೆದ್ದಾರಿಯನ್ನು ನೋಡುತ್ತ ನಿಂತರೆ ಜೀವನದ ಪರಮ ಸಂತೋಷವೊಂದು ಒಮ್ಮೆಲೇ ಸಿಕ್ಕಿಬಿಡುತ್ತದೆ.

ಆ ಸಂಜೆ ನಾವು ಮೋಡಗಳಿಂದ ಕಪ್ಪಾಗಿ ಸಣ್ಣಗೇ ಮಳೆ ಸುರಿಸುತ್ತಿದ್ದ ದಾರಿಯಲ್ಲಿ ನಡೆದು ಹೋಗುತ್ತಿರುವಾಗ ದಾರಿ ತುಂಬಾ ಪಾಚಿಗಟ್ಟಿ, ಶ್ರಾವಣಕ್ಕೆ ಚಿಗುರುವ ಹೂಗಿಡಗಳು ಈಗಲೇ ಚಿಗುರಿ ಗಾಳಿಗೆ ಸಣ್ಣಗೇ ತೂಗುತ್ತಿದ್ದವು. ಮೊನ್ನೆ ಕರಾವಳಿಯಲ್ಲಿ ಸುರಿದ ಕುಂಭದ್ರೋಣ ಮಳೆಯ ಕಾಟ ಮಾಳ ಕಾಡಿಗೂ ತಗುಲಿ, ಜೋರಾಗಿ ಬೀಸಿದ ಗಾಳಿಯ ಪ್ರಭಾವಕ್ಕೆ ಕೆಲವೊಂದು ತೆಂಗಿನ ಮರಗಳು ಭಯಂಕರವಾಗಿ ದಾರಿಯಲ್ಲೆಲ್ಲಾ ಬಾಗಿ ನಿಂತಿದ್ದರೂ, ಲಲನೆಯೊಬ್ಬಳು ಸಹಜವಾಗಿ ಬಳುಕಿಸುವ ಕಟಿಯ ತರವೇ ಕಂಡು ಒಂದು ತರ ಪುಲಕವಾಗುತ್ತಿತ್ತು. ನಾವು ಈ ಹಿಂದೆ ಗಂಗಾಮೂಲದಿಂದ ನೋಡಿದ ಬೆಟ್ಟಗಳು ಮುಂಗಾರು ಪೂರ್ವ ಮಳೆಯಿಂದಾಗಿ ಎಷ್ಟೊಂದು ಹಸಿರಾಗಿ ಕಾಣುತ್ತಿತ್ತೆಂದರೆ ನಮ್ಮ ಕಣ್ಣ ನೋಟವನ್ನು ಆ ಹಸಿರ ಬೆಟ್ಟದಿಂದ ದೂರ ಮಾಡಲು ಎಳ್ಳಷ್ಟು ಮನಸ್ಸೇ ಬರುತ್ತಿರಲಿಲ್ಲ. ನಾವು ಮಾಳಕ್ಕೆ ದಿನೇ ದಿನೇ ಬಂದರೂ ಮಾಳ ನಮಗೆ ಬೋರು ಹೊಡೆಸಲು ಸಾಧ್ಯವೇ ಇರಲಿಲ್ಲ. ಯಾಕೆಂದರೆ ಪ್ರತಿದಿನವೂ ಮಾಳ ಒಂದೊಂದು ತರ ತನ್ನ ಸೌಂದರ್ಯ ತೋರಿಸುತ್ತಲೇ ಇರುತ್ತಿತ್ತು. ಇವತ್ತದು ಆಗತಾನೇ ಹುಟ್ಟಿದ ಮಗುವಿನಂತೆ ಕಂಡರೆ, ನಾಳೆ ಕಿಲಕಿಲನೇ ನಕ್ಕು ಹಗುರಾಗಿಸುವ ಪುಟ್ಟನಂತೆ ಕಾಣಿಸುತ್ತದೆ, ನಾಳಿದ್ದು ಅಂಬೆಗಾಲಿಟ್ಟು ತಂಟೆ ಮಾಡುವ ತುಂಟ ಮಗುವಿನ ತರ. ಒಟ್ಟಾರೆ ಮಾಳ ತನ್ನ ನಗುವನ್ನೂ, ಹಸಿರನ್ನೂ ಬಿಟ್ಟುಕೊಡುತ್ತಲೇ ಇರಲಿಲ್ಲ. ಬಂದ ಜಾಗಕ್ಕೆ ಮತ್ತೆ ಮತ್ತೆ ಬಂದರೂ ಪ್ರತೀ ಪಯಣವೂ ಹೊಸತೇ ಅನ್ನಿಸುವಂತೆ ಮಾಡುತ್ತಿದ್ದುದು ಮಾಳ ಕಾಡಿನ ಅಪ್ರತಿಮ ಚೆಲುವು.
ನಮ್ಮ ಪಯಣಕ್ಕೆ ಅಂತದ್ದೆನೂ ಉದ್ದೇಶವಿರಲಿಲ್ಲ. ನಾವಿಬ್ಬರೂ ಸುಮ್ಮನೇ ಬೈಕನ್ನೇರಿ ಮಾಳದ ಹಸಿರಿನಲ್ಲಿ ಕರಗಿಬಿಟ್ಟರೆ, ರಾಧಾಕೃಷ್ಣ ಜೋಶಿಯವರ ಮನೆಗೆ ಹೋಗಿ ಮಾಳದ ವಿಶೇಷ ಕೇಳುತ್ತಿದ್ದೆವು. ಅವರಿಂದಲೇ ನಮಗೆ ಹೊಸ ದಾರಿಗಳು ಸಿಕ್ಕುತ್ತಿತ್ತು. ಇವತ್ತೂ ಜೋಶಿಯವರ ಮನೆಗೆ ಹೋದಾಗ ಮಳೆ ಹಗುರನೇ ಸುರಿದು ಅವರ ಗದ್ದೆ ಮನೆಯು ಒದ್ದೆಯಾಗುತ್ತಿತ್ತು. ಆಮೇಲೆ ಅವರ ಮನೆಯಲ್ಲಿ ತೋಟದ ಮಾವಿನಹಣ್ಣಿನ ಸತ್ಕಾರವಾಯಿತು. ಅಷ್ಟೊತ್ತಿಗೆ ಮಳೆ ಇನ್ನೂ ಜಾಸ್ತಿಯಾಗಿ ಕಾಡಿನಲ್ಲಿ ಮತ್ತೂ ಸುತ್ತುವ ಆಸೆಯೂ ಹೆಚ್ಚಿತು.

ಬೇಸಿಗೆಯಲ್ಲಿ ಇಷ್ಟೇ ಇಷ್ಟು ಹಸಿರು ಕೂದಲಿರುವ ಮಂಡೆಯಂತೆ ಕಾಣುತ್ತಿದ್ದ ಬೆಟ್ಟಗಳು, ಈಗ ಒಂದಷ್ಟು ಮೋಡಗಳ ಬಣ್ಣಗಳನ್ನೂ ಮತ್ತೊಂದಿಷ್ಟು ಪಕೃತಿ ಮಾತೆಯ ಬಳಿಯಲ್ಲಿದ್ದ ರಂಗೆಲ್ಲವನ್ನೂ ತುಂಬಿಕೊಂಡು ನಿಂತಾಗ ಆ ಸೆರಗು ಹಿಡಿದುಕೊಂಡು ಮಾಳದ ಕಾಡುದಾರಿಯತ್ತ ಹೋಗದೇ ಇರಲು ಮನಸ್ಸು ಕೇಳುವುದದಾದರೂ ಹೇಗೆ? ಅದೂ ಅಲ್ಲದೇ ಇನ್ನೇನು ಮಳೆ ಬಂದೇ ಬರುತ್ತದೆ… ಅಯ್ಯೋ ದೂರದಲ್ಲಿ ಮಳೆ ಬಂದೇ ಬಿಟ್ಟಿತು ಅಂತೆಲ್ಲಾ ಅನ್ನಿಸಲು ಶುರುವಾದಾಗ, ಅಷ್ಟೊತ್ತು ರಂಗಾಗಿಯೇ ಕಾಣುತ್ತಿದ್ದ ಬೆಟ್ಟಗಳು ಮಳೆಯಿಂದ ನೆನೆದು ಚಂಡಿಚಂಡಿಯಾಗಿ ಸೀನಲು ತೊಡಗಿದಾಗ, ಆ ಕಾಜಾಣ ಹಕ್ಕಿಯ ಜೋಡಿ ಗೂಡಿನತ್ತ ಹೋಗಲು ಮನಸ್ಸು ಬಾರದೇ ಅಲ್ಲೇ ಕೊಂಬೆಯೊಂದರಲ್ಲಿ ಕೂತು ಮಳೆಯ ಮಹಾಮಜ್ಜನಗೈಯುತ್ತಿರುವಾಗ, ಅಯ್ಯೋ ಇನ್ನೇನು ಮಳೆ ಜೋರಾಗುತ್ತದೆ ಅಂತ ಹಾಲಿನ ಡೈರಿಯತ್ತ ಬಂದ ಆ ಹರೆಯದ ಹುಡುಗಿಯ ನುಣುಪಾದ ಪಾದಗಳು ಮನೆ ದಾರಿ ಹಿಡಿಯುವ ಹವಣಿಕೆಯಲ್ಲಿದ್ದಾಗ, ಮೋಡಗಳೆಲ್ಲಾ ಇನ್ನೂ ಕಪ್ಪಾಗಿ ಮಾಳವೆಲ್ಲಾ ಕತ್ತಲಲ್ಲಿ ಮುದ್ದಾಗಿ ಕಾಣುವಾಗ, ನಮಗೆ ಈ ಸ್ವರ್ಗದತ್ತ ಬರದೇ ಇರಲು ಹುಚ್ಚೆ?

“ಇಲ್ಲೇ ಕೊಂಚ ದೂರ ಸಾಗಿದರೆ ಕೇಶವ ಡೋಂಗ್ರೆಯವರ ಮನೆ ಸಿಗುತ್ತದೆ, ಅವರೊಬ್ಬರು ವಿಚಿತ್ರ ಮನುಷ್ಯ, ಅವರದ್ದು ಅಪರೂಪದ ವ್ಯಕ್ತಿತ್ವ. ಮಹಾನಗರ ಬಿಟ್ಟು, ಕಾಡಿಗೆ ಬಂದು ತೋಟದಲ್ಲಿ ಕೆಲಸ ಮಾಡಿಕೊಂಡಿದ್ದಾರೆ” ಅಂದಾಗ ನಮಗೆ ಅಚ್ಚರಿಯಾಗಿ ಏನೋ ಒಂದು ವಿಧದ ಖುಷಿಯಾಯ್ತು. ನಾನಂತೂ ಅಂತವರನ್ನೇ ಹುಡುಕುತ್ತಿದ್ದೆ. ಯಾರ ಹಂಗೂ ಇಲ್ಲದೇ ಸಹಜವಾಗಿ ಕಾಡಿನಲ್ಲಿ ಬದುಕಿ ಹೋಗಬೇಕು. ಹಗಲೆಲ್ಲಾ ಶ್ರಮದಿಂದ ಕೆಲಸ ಮಾಡಿದರೆ ರಾತ್ರಿ ಆ ಶ್ರಮದ ದಣಿವಿನಿಂದಲೇ ಒಳ್ಳೆ ನಿದ್ದೆ ಹತ್ತಬೇಕು, ಬೆಳಗಾತ ಎದ್ದು ಮತ್ತೆ ಕೆಲಸ ಶುರುವಾಗಬೇಕು ಎನ್ನುತ್ತ ಕನಸು ಕಾಣುತ್ತಿರುವ ನನಗೆ ಡೊಂಗ್ರೆಯವರ ಬಗ್ಗೆ ಕೇಳಿದ ಕೂಡಲೇ ಬದುಕಿನ ಭರವಸೆಯ ಎಳೆಯೊಂದು ಸಿಕ್ಕಂತಾಯ್ತು. “ಬನ್ನಿ ಹೋಗೋಣ ಅವರ ಮನೆಗೆ”ಎಂದು ಜೋಶಿಯವರು ನಮ್ಮನ್ನು ಅವರ ಮನೆಯತ್ತ ಸಾಗಿಸಿದರು. ಮಳೆ ಬಿಸಿಲಂತೆ ಚೆಲ್ಲಿ ಎದೆ ತಂಪು ಮಾಡಿತ್ತು. ಜೋಶಿಯವರ ಮನೆಯ ಪನ್ನೇರಳೆ ಹಣ್ಣು ತಿನ್ನುತ್ತಾ, ಕೇರೆಹಾವಿನಂತಿರುವ ಡೋಂಗ್ರೆಯವರ ಮನೆ ದಾರಿ ಹಿಡಿಯುತ್ತ ಸಾಗಿದಾಗ ಒಮ್ಮೆಲೇ ಗಾಳಿಪಾದೆ ಎನ್ನುವ ದೊಡ್ಡ ಬೆಟ್ಟವೊಂದು ಗಿಳಿಹಸಿರು ಬಣ್ಣದಿಂದ ಕಂಗೊಳಿಸುತ್ತಿತ್ತು. ಆ ಬೆಟ್ಟ ಎಷ್ಟು ಚೆಂದ ಇತ್ತೆಂದರೆ ಯಾವ ಹೈ ಟೆಕ್ನಾಲಜಿವುಳ್ಳ ಕ್ಯಾಮರಾಗಳಿಗೂ ಅದರ ಚೆಂದವನ್ನು ಸೆರೆಹಿಡಿಯಲು ಸಾಧ್ಯವೇ ಇಲ್ಲ ಎನ್ನಿಸುವಷ್ಟು ಚೆಂದವಿತ್ತು. ಬದುಕಿನ ಎಲ್ಲಾ ಕ್ಷಣಗಳನ್ನೂ ಕ್ಯಾಮರಾ ಮೂಲಕ ದಾಖಲಿಸಿ ಚಿತ್ರಗಳ ತೀಟೆ ತೀರಿಸಿಕೊಳ್ಳುವ ನಮಗೆ ಇವತ್ಯಾಕೋ ಆ ಬೆಟ್ಟದ ಫೋಟೋ ತೆಗೆಯೋದೇ ಬೇಡವೆನ್ನಿಸುತ್ತಿತ್ತು. ಕಣ್ಣಿಗಿಂತ ಚೆಂದದ ಕ್ಯಾಮರಾ ಬೇರೊಂದಿಲ್ಲ ಅಂತ ಮತ್ತೆ ಮತ್ತೆ ಅನ್ನಿಸುತ್ತಲೇ ಇದ್ದಾಗ ಬೆಟ್ಟ ಇನ್ನೂ ಹಚ್ಚ ಹಸುರಾಗಿ ಬಾನು ನೀಲಿಯಾಗುತ್ತಿತ್ತು.

ಆ ಬೆಟ್ಟದ ಕೆಳಗೆ ವಿಶಾಲವಾದ ಬಯಲು ಬಯಲಾದ ಜಾಗ, ಅಲ್ಲಲ್ಲಿ ಕಲ್ಲುಗಳಿಂದ ತುಂಬಿಕೊಂಡ ಪ್ರದೇಶ. ಅಲ್ಲೇ ಒಮ್ಮೆ ಪ್ರಾಚೀನದಂತೆ ಮತ್ತೊಮ್ಮೆ ಆಧುನಿಕವಾಗಿ ಕಾಣುತ್ತಿದ್ದ ಡೋಂಗ್ರೆಯವರ ಮನೆ. ಡೋಂಗ್ರೆಯವರು ತೋಟದಲ್ಲೆಲ್ಲೋ ಕೆಲಸ ಮಾಡುತ್ತಿರುವುದನ್ನು ಗಮನಿಸಿದ ಜೋಶಿಯವರು, ಕೋಗಿಲೆಯಂತೆ “ಕೂಹೂ ಅಂತೊಂದು ಕೂಗು ಹಾಕಿದರು. ಅದನ್ನು ಕೇಳಿದ ಡೋಂಗ್ರೆಯವರು ಆ ಕೋಗಿಲೆಯ ಅಮ್ಮನಂತೆ ಕೂಗಿ ತಾನು ಇನ್ನೇನು ಬಂದೆ ಅನ್ನುವ ಸಿಗ್ನಲ್ಲು ನೀಡಿದರು. ಅವರ ಕೋಗಿಲೆಯಂತಹ ಕೂಗು ಕೇಳಿದ ಕಾಜಾಣ ಹಕ್ಕಿಗಳಿಗೆ ಆ ಸದ್ದು ವಿಚಿತ್ರವಾಗಿ ಕೇಳಿತೇನೋ!. ಅವುಗಳು ಅಲ್ಲೇ ತಂತಿಯಲ್ಲಿ ಕೂತುಕೊಂಡು ಒಮ್ಮೆ ಸುತ್ತಲೂ ಮಿಕಿ ಮಿಕಿ ನೋಡಿ ಮತ್ತೆ ತಮ್ಮ ಕೆಲಸದಲ್ಲಿ ಮಗ್ನರಾದವು. ಅಷ್ಟೊತ್ತಿಗೆ ಲುಂಗಿ ಉಟ್ಟ ಹದಾ ಗಡ್ಡದ ಕುಳ್ಳಗಿನ ವ್ಯಕ್ತಿಯೊಬ್ಬ ಜಿಗ್ಗೆಂದು ಕಾಡಪೊದೆಗಳ ನಡುವಿನಿಂದ ಪ್ರತ್ಯಕ್ಷರಾದರು. “ಇವರೇ ಕೇಶವ ಡೋಂಗ್ರೆಯವರು ಅಂತ ಖಾತ್ರಿಪಟ್ಟ ನಮ್ಮ ಕಣ್ಣು ವಿಶೇಷವಾಗಿ ನಕ್ಕಿತು. ಮುಖದಲ್ಲಿಯೇ ವಿಚಿತ್ರವಾದ ಹಾಸ್ಯ ಪ್ರಜ್ಞೆ ತುಂಬಿಕೊಂಡ ಅವರನ್ನು ನೋಡಿದ್ದೇ, ಇವರು ಗ್ಯಾರಂಟಿ ಒಳ್ಳೆಯ ಅಸಾಮಿಯೇ, ಖಂಡಿತ ಇವರ ಬಳಿ ಕೇಳಲು ರಾಶಿ ರಾಶಿ ಕತೆಗಳಿವೆ ಅನ್ನಿಸಿ ಸಂತೋಷವಾಯಿತು.

“ಐದೇ ಐದು ನಿಮಿಷ, ನನ್ನ ವೇಷ ಬದಲಾಯಿಸಿಕೊಂಡು ಬರುವೆ ಎಂದು ಯಕ್ಷಗಾನ ಕಲಾವಿದನಂತೆ ನಮ್ಮತ್ತ ಕೊಂಚ ನಕ್ಕು ಸೀದಾ ಮನೆಯೊಳೊಕ್ಕ ಅವರು, ಐದೇ ನಿಮಿಷದಲ್ಲಿ ಬಂದು ಮಾತಿಗೆ ಅನುವಾದರು.
“ಏನಿಲ್ಲ ನಿಮ್ಮ ಕತೆ ಕೇಳಲು ಬಂದೆವು. ನಮಗೂ ಇದೇ ತರ ಕೃಷಿ ಮಾಡುತ್ತ ಯಾರ ಹಂಗೂ ಇಲ್ಲದೇ ಕಷ್ಟಪಟ್ಟು ಬದುಕುವ ಆಸೆ. ಅದಕ್ಕಾಗಿ ನಿಮ್ಮನ್ನು ಕಾಣಲು ಬಂದೆವು ಅಂತ ನಮ್ಮ ಬಗ್ಗೆ ಅವರಿಗೆ ಭರವಸೆ ಬರಲಿ ಅಂತ ನಮ್ಮ ಪ್ರವರಗಳನ್ನೆಲ್ಲಾ ತೋಡಿಕೊಂಡೆವು.

ಮೊನ್ನೆ ಕರಾವಳಿಯಲ್ಲಿ ಸುರಿದ ಕುಂಭದ್ರೋಣ ಮಳೆಯ ಕಾಟ ಮಾಳ ಕಾಡಿಗೂ ತಗುಲಿ, ಜೋರಾಗಿ ಬೀಸಿದ ಗಾಳಿಯ ಪ್ರಭಾವಕ್ಕೆ ಕೆಲವೊಂದು ತೆಂಗಿನ ಮರಗಳು ಭಯಂಕರವಾಗಿ ದಾರಿಯಲ್ಲೆಲ್ಲಾ ಬಾಗಿ ನಿಂತಿದ್ದರೂ, ಲಲನೆಯೊಬ್ಬಳು ಸಹಜವಾಗಿ ಬಳುಕಿಸುವ ಕಟಿಯ ತರವೇ ಕಂಡು ಒಂದು ತರ ಪುಲಕವಾಗುತ್ತಿತ್ತು. ನಾವು ಈ ಹಿಂದೆ ಗಂಗಾಮೂಲದಿಂದ ನೋಡಿದ ಬೆಟ್ಟಗಳು ಮುಂಗಾರು ಪೂರ್ವ ಮಳೆಯಿಂದಾಗಿ ಎಷ್ಟೊಂದು ಹಸಿರಾಗಿ ಕಾಣುತ್ತಿತ್ತೆಂದರೆ ನಮ್ಮ ಕಣ್ಣ ನೋಟವನ್ನು ಆ ಹಸಿರ ಬೆಟ್ಟದಿಂದ ದೂರ ಮಾಡಲು ಎಳ್ಳಷ್ಟು ಮನಸ್ಸೇ ಬರುತ್ತಿರಲಿಲ್ಲ. ನಾವು ಮಾಳಕ್ಕೆ ದಿನೇ ದಿನೇ ಬಂದರೂ ಮಾಳ ನಮಗೆ ಬೋರು ಹೊಡೆಸಲು ಸಾಧ್ಯವೇ ಇರಲಿಲ್ಲ. ಯಾಕೆಂದರೆ ಪ್ರತಿದಿನವೂ ಮಾಳ ಒಂದೊಂದು ತರ ತನ್ನ ಸೌಂದರ್ಯ ತೋರಿಸುತ್ತಲೇ ಇರುತ್ತಿತ್ತು. ಇವತ್ತದು ಆಗತಾನೇ ಹುಟ್ಟಿದ ಮಗುವಿನಂತೆ ಕಂಡರೆ, ನಾಳೆ ಕಿಲಕಿಲನೇ ನಕ್ಕು ಹಗುರಾಗಿಸುವ ಪುಟ್ಟನಂತೆ ಕಾಣಿಸುತ್ತದೆ, ನಾಳಿದ್ದು ಅಂಬೆಗಾಲಿಟ್ಟು ತಂಟೆ ಮಾಡುವ ತುಂಟ ಮಗುವಿನ ತರ. ಒಟ್ಟಾರೆ ಮಾಳ ತನ್ನ ನಗುವನ್ನೂ, ಹಸಿರನ್ನೂ ಬಿಟ್ಟುಕೊಡುತ್ತಲೇ ಇರಲಿಲ್ಲ. ಬಂದ ಜಾಗಕ್ಕೆ ಮತ್ತೆ ಮತ್ತೆ ಬಂದರೂ ಪ್ರತೀ ಪಯಣವೂ ಹೊಸತೇ ಅನ್ನಿಸುವಂತೆ ಮಾಡುತ್ತಿದ್ದುದು ಮಾಳ ಕಾಡಿನ ಅಪ್ರತಿಮ ಚೆಲುವು.

“ನಾನು ಮಣಿಪಾಲದಲ್ಲಿ ಎಂ.ಬಿ.ಎ.ಮಾಡಿ ಆ ನಂತರ ಸೀದಾ ಮಹಾನಗರಕ್ಕೆ ಕೆಲಸಕ್ಕೆ ಸೇರಿದೆ. ಅಲ್ಲಿನ ಬಣ್ಣ ಬಣ್ಣದ ಬದುಕನ್ನು ೨೩ ವರ್ಷಗಳ ಕಾಲ ಅನುಭವಿಸಿದೆ. ಆದರೆ ಇನ್ನೂ ಅಲ್ಲಿದ್ದರೆ ಬದುಕು ವೇಗವಾಗಿ ಯಾವುದೇ ವಿಶೇಷವಿಲ್ಲದೇ ಖುಷಿಯಿಲ್ಲದೇ ಬರೀ ಯಾಂತ್ರಿಕವಾಗುತ್ತದೆ ಅನ್ನಿಸಿತು. ಮಾಳದಲ್ಲಿಯೇ ಹುಟ್ಟಿ ಬೆಳೆದದ್ದರಿಂದ ಮಹಾನಗರದಲ್ಲಿಯೂ ಮಾಳದ ಕಾಡು, ಬೆಟ್ಟ, ಹಸುರೆಲ್ಲಾ ಕಾಡುತ್ತಿದ್ದವು. ಎಂಡೇಂಜರಡ್ ಸ್ಪೀಸೀಸ್ ಆಫ್ ಪ್ಲಾಂಟ್ ಆಂಡ್ ಎನಿಮಲ್ಸ್ ಅಂತೊಂದು ಪ್ರಾಜೆಕ್ಟ್ ಮಾಡಿ ಒಂದು ಎನ್.ಜಿ.ಓ ಮಾಡ್ಬೇಕು ಅಂತ ಮತ್ತೆ ಈ ಕಾಡಿಗೆ ಮರಳಿದೆ. ಏಳು ಎಕರೆ ಜಾಗ ಖರೀದಿಸಿದೆ. ಅಪರೂಪದ ಜೀವಿಗಳನ್ನು ಗುರುತಿಸಿ ಒಂದು ಟ್ರಸ್ಟ್ ಮಾಡೋಣ ಅಂತ ಕೆಲವೊಂದು ಗೆಳೆಯರನ್ನು ಕೇಳಿಕೊಂಡೆ. ಆದ್ರೆ ಅವರೆಲ್ಲಾ ಇದರಲ್ಲಿ ನಮಗೆಷ್ಟು ಸಿಗುತ್ತದೆ? ಅಂತ ವ್ಯವಹಾರಿಕ ಮರ್ಜಿ ತೋರಿಸಿದ್ದರಿಂದ ಆ ಪ್ರಾಜೆಕ್ಟ್ ಅನ್ನು ಒಬ್ಬನೇ ಮಾಡಲು ಧೈರ್ಯಸಾಲದೇ ಸುಮ್ಮನಾದೆ. ಈಗಲೂ ಆ ಕನಸು ನನಸಾಗಿಲ್ಲ. ಅಪರೂಪದ ಜೀವಿಗಳು ಸಿಕ್ಕಿದ್ದಾವೆ ಅಂತ ಖುಷಿಪಡುವವರು ಯಾರೂ ಇಲ್ಲ. ಹಣ ಸಿಕ್ಕರೆ ಮಾತ್ರ ಖುಷಿ ಎನ್ನುವಂತಾಗಿದೆ. ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ ಕಾದಂಬರಿಯಲ್ಲಿ ಹಾರುವ ಓತಿಯಂತಹ ಅಪರೂಪದ ಓತಿ, ಹಕ್ಕಿ, ಕೀಟಗಳನ್ನು ನಾನು ಮಾಳದ ಈ ಕಾಡಿನಲ್ಲಿಯೇ ನೋಡಿದ್ದೇನೆ. ಸುಮಾರು ಅಪರೂಪದ ಕೀಟಗಳನ್ನು ಹುಡುಕಿಕೊಡಬಲ್ಲೆ ಎಂದು ಡೋಂಗ್ರೆಯವರು ಸುತ್ತಲೂ ಕಾಡನ್ನೊಮ್ಮೆ ಧೇನಿಸಿದರು. ಅಷ್ಟೊತ್ತಿಗೆ ಗಾಳಿಪಾದೆ ಇನ್ನಷ್ಟು ಹಸುರಾಗಿ ತನ್ನ ಪೂರ್ತಿ ದೇಹವನ್ನು ಮೋಡಗಳ ನಡುವಿನಿಂದಲೂ ಚೆಂದವಾಗಿ ತೋರಿಸಿತು. ಬಿಮ್ಮಗೆ ನಿಂತಿದ್ದ ಗಿಡ ಮರಗಳಿಗೆ ಬೆಳ್ಳನೇ ಮಂಜು ಮುಸುಕುವಾಗಲೇ ಮಳೆ ಜೋರಾಯಿತು. ಬೀಳುತ್ತಿರುವುದು ಮಳೆಯಾ? ಮಂಜಾ ಎನ್ನುವ ಅರಿವಾಗದೇ ಸುಮ್ಮನೇ ದೂರ ಬಲು ದೂರ ನೋಡಿದೆ. ಅಲ್ಲೊಂದು ಕರಿಬಂಡೆ, ಮಂಜು, ಮಳೆ ತಿನ್ನುತ್ತಾ ಬೆಟ್ಟದ ಮುಕುಟದಂತೆ ಕಾಣುತ್ತಿತ್ತು.

“ಅದೇ ಗಾಳಿಪಾದೆ ನೋಡಿ, ತುಂಬಾ ಚೆಂದ ಇದೆ ಅದು. ಆದ್ರೆ ಹತ್ತೋಕೆ ಭಯಂಕರ ಕಷ್ಟ ಉಂಟು, ನಾನೊಮ್ಮೆ ಹೋಗಿದ್ದೆ. ಇನ್ನೊಮ್ಮೆ ನಾವು ಹೋಗೋಣ ಅಂತ ಅಲ್ಲೇ ಕೂತಿದ್ದ ಜೋಶಿಯವರು ಆಸೆ ಹುಟ್ಟಿಸಿದರು. ಮಾತು ಮುಂದುವರೆಸಿ:
ಈ ಕಾಲದಲ್ಲಿ ತೇಜಸ್ವಿಯವರಂತೆ ಬದುಕೋದು ಕಷ್ಟ ಅನ್ನಿಸುದಿಲ್ಲವಾ ನಿಮಗೆ? ಎಂದು ಮಳೆ ಸದ್ದಿನ ನಡುವೆ ಹಗುರಾಗಿ ಡೊಂಗ್ರೆಯವರನ್ನು ದಿಟ್ಟಿಸುತ್ತಲೇ ಕೇಳಿದೆ.
“ಎಂತ ಕಷ್ಟ ಮಾರಾಯ್ರೆ? ನಾನು ಸ್ವಲ್ಪನಾದ್ರೂ ಅವರ ತರ ಬದುಕುತ್ತಿಲ್ಲವಾ? ಗಟ್ಟಿ ಮನಸ್ಸು ಬೇಕು ಅಷ್ಟೆ. ಧೋ ಎಂದು ಸುರಿವ ಮಳೆ, ಅಲ್ಲೊಂದು ಬೆಟ್ಟ, ನನ್ನ ತೋಟ, ಪುಟ್ಟದ್ದೊಂದು ಮನೆ, ಬಿಸಿಬಿಸಿ ಗಂಜಿ ಊಟ, ಇವೆಲ್ಲ ಸ್ವರ್ಗ ಇಲ್ಲಿ. ಇಷ್ಟಿದ್ದರೆ ಸಾಕು ಬದುಕಿಗಿನ್ನೇನು ಬೇಕು ಹೇಳಿ? ನಮಗೇನು ಮಕ್ಕಳಿಲ್ಲ, ಹೆಂಡತಿಗೆ ಟೀಚರ್ ಕೆಲಸಕ್ಕೆ ಹಾಕಿಸಿದ್ದೇನೆ, ದುಡಿಯುತ್ತಿದ್ದಾಳೆ ಅಂತ ನಿಡುಸುಯ್ದರು, “ಹೋ ಹೋ ಹಾಗಾದ್ರೆ ತೋಟದ ಆದಾಯ ಕಡಿಮೆಯಾದರೂ ಹೆಂಡತಿ ಆದಾಯ ತರುತ್ತಾರಲ್ಲ, ನಾವೂ ನಿಮ್ಮ ತರ ಬದುಕಬೇಕಾದರೆ ಹರೆಯದ ಯಾವುದಾದರೂ ಟೀಚರ್ ಹುಡುಗಿಯನ್ನೇ ಲಪಟಾಯಿಸೋದು ಒಳ್ಳೆದೇನೋ” ಅಂತ ನಕ್ಕೆ. ಡೋಂಗ್ರೆಯವರು ಕಿಸಲ್ಲನೇ ನಕ್ಕರು. ಜಗಲಿಯಲ್ಲಿ ಕೂತಿದ್ದ ಅವರ ಹೆಂಡತಿಯೂ, ಅಮ್ಮನೂ ಗೊಳ್ಳೆಂದರು. ಡೋಂಗ್ರೆಯವರ ಹೆಂಡತಿ ಇಟ್ಟಿದ್ದ ಅನಾನಾಸು ಹಣ್ಣಿನ ಹೋಳುಗಳು ಪಟಪಟನೇ ಪ್ಲೇಟಿನಿಂದ ಖಾಲಿಯಾಗುತ್ತಿದ್ದವು. ಹಗಲೆಲ್ಲಾ ಆವಿಯಾಗಿ ಕಾಡು ಮತ್ತೂ ಮೌನವಾಗಿ ಇರುಳು ಕವಿಯುತ್ತಿತ್ತು. ಸೊಳ್ಳೆ ಕಾಟ ಇದ್ದಿದ್ದರಿಂದ ಡೋಂಗ್ರೆಯವರು ಎಲೆ ಅಡಿಕೆ ಹಾಕುತ್ತ ಅಲ್ಲೇ ಇದ್ದ ಹೊಗೆ ಪಾತ್ರೆಯಲ್ಲಿ ತೆಂಗಿನ ಗರಟ ಎಲ್ಲಾ ಹಾಕಿ ಸುತ್ತಲೂ ಹೊಗೆ ಬರುವಂತೆ ಸಣ್ಣಗೇ ಬೆಂಕಿ ಹಾಕಿ, ಮತ್ತೆ ಮಾತು ಶುರುಮಾಡಿದರು.

ಈ ಕಾಲದಲ್ಲಿ ತೇಜಸ್ವಿಯವರಂತೆ ಬದುಕೋದು ಕಷ್ಟ ಅನ್ನಿಸುದಿಲ್ಲವಾ ನಿಮಗೆ? ಎಂದು ಮಳೆ ಸದ್ದಿನ ನಡುವೆ ಹಗುರಾಗಿ ಡೊಂಗ್ರೆಯವರನ್ನು ದಿಟ್ಟಿಸುತ್ತಲೇ ಕೇಳಿದೆ. “ಎಂತ ಕಷ್ಟ ಮಾರಾಯ್ರೆ? ನಾನು ಸ್ವಲ್ಪನಾದ್ರೂ ಅವರ ತರ ಬದುಕುತ್ತಿಲ್ಲವಾ? ಗಟ್ಟಿ ಮನಸ್ಸು ಬೇಕು ಅಷ್ಟೆ. ಧೋ ಎಂದು ಸುರಿವ ಮಳೆ, ಅಲ್ಲೊಂದು ಬೆಟ್ಟ, ನನ್ನ ತೋಟ, ಪುಟ್ಟದ್ದೊಂದು ಮನೆ, ಬಿಸಿಬಿಸಿ ಗಂಜಿ ಊಟ, ಇವೆಲ್ಲ ಸ್ವರ್ಗ ಇಲ್ಲಿ. ಇಷ್ಟಿದ್ದರೆ ಸಾಕು ಬದುಕಿಗಿನ್ನೇನು ಬೇಕು ಹೇಳಿ? ನಮಗೇನು ಮಕ್ಕಳಿಲ್ಲ, ಹೆಂಡತಿಗೆ ಟೀಚರ್ ಕೆಲಸಕ್ಕೆ ಹಾಕಿಸಿದ್ದೇನೆ, ದುಡಿಯುತ್ತಿದ್ದಾಳೆ ಅಂತ ನಿಡುಸುಯ್ದರು, “ಹೋ ಹೋ ಹಾಗಾದ್ರೆ ತೋಟದ ಆದಾಯ ಕಡಿಮೆಯಾದರೂ ಹೆಂಡತಿ ಆದಾಯ ತರುತ್ತಾರಲ್ಲ, ನಾವೂ ನಿಮ್ಮ ತರ ಬದುಕಬೇಕಾದರೆ ಹರೆಯದ ಯಾವುದಾದರೂ ಟೀಚರ್ ಹುಡುಗಿಯನ್ನೇ ಲಪಟಾಯಿಸೋದು ಒಳ್ಳೆದೇನೋ” ಅಂತ ನಕ್ಕೆ. ಡೋಂಗ್ರೆಯವರು ಕಿಸಲ್ಲನೇ ನಕ್ಕರು. ಜಗಲಿಯಲ್ಲಿ ಕೂತಿದ್ದ ಅವರ ಹೆಂಡತಿಯೂ, ಅಮ್ಮನೂ ಗೊಳ್ಳೆಂದರು. ಡೋಂಗ್ರೆಯವರ ಹೆಂಡತಿ ಇಟ್ಟಿದ್ದ ಅನಾನಾಸು ಹಣ್ಣಿನ ಹೋಳುಗಳು ಪಟಪಟನೇ ಪ್ಲೇಟಿನಿಂದ ಖಾಲಿಯಾಗುತ್ತಿದ್ದವು. ಹಗಲೆಲ್ಲಾ ಆವಿಯಾಗಿ ಕಾಡು ಮತ್ತೂ ಮೌನವಾಗಿ ಇರುಳು ಕವಿಯುತ್ತಿತ್ತು.

“ನೋಡಿ ಮಹಾನಗರದ ಜಂಜಡದಲ್ಲಿ ದಿನದ ಐದಾರು ಗಂಟೆ ಎ.ಸಿ ಕಾರಿನಲ್ಲಿ, ಸ್ಟಾರ್ ಹೋಟೇಲಿನ ಮೀಟಿಂಗುಗಳಲ್ಲಿ, ಅಫೀಶಿಯಲ್ ಇ-ಮೇಲುಗಳಲ್ಲಿ ಕಳೆದು ಹೋಗುತ್ತಿತ್ತು. ಇಷ್ಟೊತ್ತಿಗೆ ನಾನು ವಾಟ್ ಹ್ಯಾಪಂಡ್ ಅಂತ ಬಾಸ್ ನ ಇ -ಮೇಲ್ ಗೆ ಉತ್ತರ ಕೊಡಬೇಕಿತ್ತು. ಆದರೆ ಈಗ ನೋಡಿ ಆರಾಮಾಗಿ ಎಲೆ ಅಡಿಕೆ ಜಗಿಯುತ್ತಿದ್ದೇನೆ. ನಿಮ್ಮ ಜೊತೆ ನಿಶ್ಚಿಂತೆಯಿಂದ ಮಾತಾಡುತ್ತಿದ್ದೇನೆ. ಕಾಡಿನ ಮೌನ ಕೇಳುತ್ತಿದ್ದೇನೆ, ಇದೇ ಪರಿಸರವೇ ಖುಷಿಗೆ ಮೂಲ ಕಾರಣ. ಇದಕ್ಕಿಂತ ಖುಷಿ ಬೇರೇನಿದೆ ಹೇಳಿ, ಯಾರಿಗೆ ಬೇಕು ಮಹಾನಗರದ ಕೊಳಚೆ ನೀರು? ಇಲ್ಲಿ ಬೆಟ್ಟದಿಂದ ಇಳಿಯುವ ಅಮೃತದಂತಹ ಜಲಧಾರೆಯೇ ಸಿಕ್ಕುವಾಗ.” ಅಂತ ಅವರು ಹಗುರಾದರು.

“ಹೌದು ನಮ್ಮಂತವರಿಗೆ ಇದೇ ನಿಜವಾದ ಬದುಕುವ ದಾರಿ, ಇದೇ ಅಪ್ಪಟ ಖುಷಿ ಎನ್ನಿಸಿ ಆ ಇರುಳಲ್ಲೂ ಮೈ ಬೆರಗಿನಿಂದ ಕಂಪಿಸಿತು ನನಗೆ. ಸರಿಯಾಗಿ ಕಣ್ಣು ತೆರೆದು ಜಗತ್ತು ನೋಡಿದರೆ ಖುಷಿ ಸಿಗದೇ ಇರಲು ಸಾಧ್ಯವೇ ಇಲ್ಲ. ನನ್ನ ಆ ಖುಷಿಯನ್ನು ಈ ಕಾಡಿನಲ್ಲಿ, ಅಡಿಕೆ ತೋಟದ ನಡುವೆ ನಾನೇ ಕಂಡುಕೊಂಡಿದ್ದೇನೆ. ನಿಮಗೆ ಏನು ಇಷ್ಟವಾಗುತ್ತದೋ ಹಾಗೇ ಬದುಕಿ, ಅದರಲ್ಲಿ ಕಷ್ಟವಿದ್ದರೂ ಅದೇ ನಮಗೆ ಇಷ್ಟಕೊಡುತ್ತದೆ. ಹಾಗೆ ಬದುಕಿದಾಗ ಮಾತ್ರ ಜೀವನಕ್ಕೆ ಅರ್ಥ. ಎಂದು ಡೋಂಗ್ರೆಯವರು ಕಣ್ಣರಳಿಸಿದಾಗ ಬದುಕಿನ ಪ್ರೀತಿ ಜಾಸ್ತಿಯಾಯಿತು. ಅದೇ ವೇಳೆಗೆ ಆಕಾಶದಲ್ಲಿ ಮಿಂಚು ಹೊಳೆದಾಗ ಆ ಮಿಂಚಿನ ಬೆಳಕು ಜಗುಲಿಯಲ್ಲೆಲ್ಲಾ ಜಿಗ್ಗಂತ ಹೊಳೆದು ಡೊಂಗ್ರೆಯವರು ಬದುಕಿನ ನಿಜವಾದ ಬೆಳಕಿನಲ್ಲಿ ಮಿಂದೆದ್ದವರಂತೆ ಕಂಡರು. ಇರುಳಾಗಿದ್ದರಿಂದ ನಾವು ಡೋಂಗ್ರೆಯವರಿಗೆ ಬೀಳ್ಕೊಟ್ಟು ಕತೆ ಕೇಳಲು ಇನ್ನೊಮ್ಮೆ ಬರುವುದಾಗಿಯೂ, ರಾತ್ರಿ ಪೂರ್ತಿ ಮಳೆ ನೋಡುತ್ತ ಕತೆ ಕೇಳೋಣ ಅಂತ ಭರವಸೆಕೊಟ್ಟು ಬೈಕೇರಿದವು. ಕಗ್ಗತ್ತಲ ಕಾಡಿನಲ್ಲಿ ಮಿಂಚು ತೋರಿಸುತ್ತಿದ್ದ ದಾರಿಯಲ್ಲಿ ಸಂಭ್ರಮಿಸುತ್ತಾ ಕಾಡ ದಾರಿಯ ತುಂಬಾ ಕಾಡಿದ ಕೇಶವ ಡೋಂಗ್ರೆಯವರ ಮಾತುಗಾರಿಕೆಯನ್ನು ಮತ್ತೆ ಮತ್ತೆ ನೆನೆದುಕೊಳ್ಳುತ್ತ ದಾರಿ ಸಾಗಿದಾಗ ಮತ್ತೆ ಮಿಂಚೊಂದು ಬೆಳಗಿ ನಾನೂ ಕೆಲ ಕ್ಷಣ ಬೆಳಕಾಗಿ ಹೋದೆ.