ಬೈ ಟೂ

ಕಣ್ತಪ್ಪಿಸಿದಾಗಲೆ
ನೀನು ನೋಡುವಿ ಎಂಬುದು ನನಗೆ ಗೊತ್ತು
ಹಾಗೆ ನಿನಗೂ
ಹೋಟೆಲಿನ ಆ ಮೂಲೆಯಲ್ಲಿ ಕೂತವನೊಬ್ಬನಿಗೆ
ನಾವಿಬ್ಬರೂ ಪರಸ್ಪರ ನೋಡಲೆಷ್ಟು ಹಂಬಲಿಸುತ್ತೇವೆ
ಎಂಬುದು ಗೊತ್ತಾಗಿ
ನಮ್ಮನು ಪ್ರೇಮಿಗಳೆಂದು ಭಾವಿಸುತ್ತಾನೆ

ನಿನಗಿಷ್ಟು
ಮತ್ತೆ ನನಗೇಷ್ಟೋ ಹೇಳಲಿಕ್ಕಿದೆ
ನನ್ನೆದೆಯ ನಿನ್ನೆದೆಯ ಮದ್ದಳೆ ಸದ್ದಿನಲಿ ಗದ್ದಲಕೆ ಬಿದ್ದಿದ್ದೇವೆ
ಒಂದು ರಿದಂ ನಮ್ಮನು ಕುಣಿಸುತ್ತಿದೆ

ನನಗೆ ನೀನು
ನಿನಗೆ ನಾನು
ಹೇಳಲಿಕ್ಕಾದರೂ ಏನಿದೆ

ಬೈಟೂ ಕಾಫೀಯ ಘಮಲು ನಿನ್ನೊಳಗು ನನ್ನೊಳಗು
ನಾವು ಯಾವತ್ತು ಒಂದು ಬಟ್ಟಲು ಕಾಫೀಯನ್ನು ಹಂಚಿಕೊಳ್ಳುತ್ತೇವೆ
ನಾವು ಎರಡು ಬಟ್ಟಲು
ಒಂದು ಕಾಫೀ