ನೆಲ್ಯಾರು ಗೋವಿಂದ ಭಟ್ಟರು ಹಾಸನ ತಲುಪಿದರು
ಅವರದೇ ಆದ “ ಹಳ್ಳಿಯಿಂದ ” ಕನ್ನಡ ಬ್ಲಾಗ್ನಲ್ಲಿ ಅವರು ಹೀಗೆ ಹೇಳುತ್ತಾರೆ. “ಈಗೊಂದು ವಿಶಿಷ್ಟವಾದ ಪ್ರವಾಸ ಕೈಗೊಂಡಿದ್ದೇನೆ. ಸೈಕಲಿನಲ್ಲಿ ರಿಕಂಬಂಟ್ ಅರ್ಥಾತ್ ಮಲಗಿ ಬಿಡುವುದು ಒಂದು ಬೆಳಕು ಕಾಣದ ಮಾದರಿ. ನನಗೋ ಮೈಮಾಲುವ ಕಾರಣ ದ್ವಿಚಕ್ರ ಪರವಾನಿಗೆ ರದ್ದಾಗಿದೆ.
ತ್ರಿಚಕ್ರಿ ಗೋವಿಂದ ಭಟ್ಟರ ಕಥೆ: ಪೆಜತ್ತಾಯರ ಬರಹ
ಇಂದು ಐವತ್ತೆರಡರ ಹರೆಯದ ಶ್ರೀ ಗೋವಿಂದ ಭಟ್ಟರು ಸೈಕಲಿನಲ್ಲೇ ಪ್ರಪಂಚ ಸುತ್ತಿ ಬಂದ ಸಾಹಸಿಯಾದರೂ, ಪವರ್ಡ್ ಹ್ಯಾಂಗ್ ಗ್ಲೈಡರ್ ಹಾರಿಸುವಾಗ ಅವಘಡಕ್ಕೊಳಗಾಗಿ ಬೆನ್ನು ಮೂಳೆಗೆ ಪೆಟ್ಟು ಬಿತ್ತು, ಅವರ ಮೇಲೆ ನಡೆದ ಹಲವು ಆಪರೇಶನ್ ಗಳು ನಿರೀಕ್ಷಿತ ಫಲ ನೀಡದೇಹೋದುವು!
ನೊಸಂತಿ ಮೇಷ್ಟ್ರ ನೆನಪು
ಎರಡು ವರ್ಷಗಳ ಹಿಂದೆ ಇಂತಹುದೇ ಒಂದು ದಿನ ಮಧ್ಯಾಹ್ನ ನಾನು ವಿಭಾಗದ ಕೋಣೆಯಲ್ಲಿ ಕುಳಿತಿರುವಾಗ, ಮಿತ್ರರೊಬ್ಬರು ‘ನೊಸಂತಿಯವರಿಗೆ ಹೃದಯಾಘಾತ ಆಯಿತಂತೆ. ಚೇಂಬರಿನಲ್ಲಿಯೇ ಕುಸಿದು ಪ್ರಾಣಬಿಟ್ಟರಂತೆ. ನೀವು ಅವರ ವಿದ್ಯಾರ್ಥಿಯಂತಲ್ಲ?
ತರೀಕೆರೆ ಏರಿಯಾ: ಮೊಹರಂ ಹಾಡುಗಾರ ಕಾಸಿಂ ಸಾಬ್ ನದಾಫ್
ಸಂಜೆ ಆವರಿಸುತ್ತಿತ್ತು. ಅವರ ಅಂಗಡಿಯಲ್ಲಿ ಲೈಟಿರಲಿಲ್ಲ. ಬಿಲ್ ಕಟ್ಟಿಲ್ಲವೆಂದು ಕರೆಂಟಿನವರು ಕನೆಕ್ಷನ್ ಕಿತ್ತಿದ್ದರು. ನಾನು ಅವರನ್ನು ನೋಡಲು ಮತ್ತು ಅವರ ಹಾಡು ಕೇಳಲು ಹಂಪಿಯಿಂದ ಬಂದಿದ್ದೇನೆಂದೂ ತಿಳಿಸಿದೆ. ಕೂಡಲೇ ಮುದಿದೇಹದಲ್ಲಿ ಇದ್ದಕ್ಕಿದ್ದಂತೆ ಎಲ್ಲಿಲ್ಲದ ಚೈತನ್ಯ ಬಂದುಬಿಟ್ಟಿತು.
ತರೀಕೆರೆ ಏರಿಯಾ: ರಾಮದುರ್ಗವೇ ಲೋಕವಾಗಿರುವ ಸುರಕೋಡರು
ಸುರಕೋಡರ ಜಾತ್ಯತೀತ ಸಂಗಾತಿಗಳ ಸಹವಾಸ ನನ್ನ ಅನುಭವಕ್ಕೂ ಬಂದಿದೆ. ಒಮ್ಮೆ ಒಬ್ಬ ಜನಪದ ಗಾಯಕನನ್ನು ಹುಡುಕಿಕೊಂಡು ರಾಮದುರ್ಗಕ್ಕೆ ಹೋಗಿದ್ದೆ. ಅವನು ಮನೆಯಲ್ಲಿರಲಿಲ್ಲ. ಸಿರಸಂಗಿಗೆ ಹೋಗಿದ್ದೆ. ಏನೂ ತೋಚದೆ ಚಾದಂಗಡಿಯಲ್ಲಿ ಕುಳಿತು, ಸುರಕೋಡರಿಗೆ ಫೋನು ಮಾಡಿದೆ.
ಎಂದೂ ಮುಗಿಯದ ಸತ್ಯವ್ರತರ ‘ಸಂಬಂಜ’: ರಹಮತ್ ತರೀಕೆರೆ
‘ಸತ್ಯವ್ರತ’-ಹೆಸರಿನಲ್ಲಿ ಒಂದು ಬಗೆಯ ಆಡಂಬರವೂ ಇದೆ. ಆತ್ಮವಿಶ್ವಾಸವೂ ಇದೆ. ಇಂತಹ ಹೆಸರನ್ನು ಇಟ್ಟುಕೊಳ್ಳಲು ಧೈರ್ಯಬೇಕು. ಸತ್ಯವ್ರತರು ಈ ಹೆಸರನ್ನು ಸತ್ಯವನ್ನು ಒಂದು ವ್ರತದಂತೆ ಪಾಲಿಸುತ್ತಿದ್ದ ಗಾಂಧೀಜಿಯಿಂದಲೇ ಪಡೆದುಕೊಂಡಿರಬಹುದು.
ಎನ್ಕೆ ಹನುಮಂತಯ್ಯ ಹೀಗೆ ತೀರಿ ಹೋಗಬೇಕಿತ್ತೇ… ತರೀಕೆರೆ ಪ್ರಶ್ನೆಗಳು
ತ್ತು ವರ್ಷದ ಹಿಂದೆ ಕಪ್ಪನೆಯ ಜಾಲಿಮರದ ವಿಗ್ರಹದಂತಿದ್ದ ಈ ಹುಡುಗ, ಎಂಎ ಮುಗಿಸಿಕೊಂಡು, ಪಿಎಚ್.ಡಿ., ಮಾಡಲು ಕನ್ನಡ ವಿವಿಗೆ ಒಮ್ಮೆ ಬಂದರು. `ಗುರುಗಳೇ ನೀವೇ ಮಾರ್ಗದರ್ಶನ ಮಾಡಬೇಕು’ ಎಂದರು.
ಸಗ್ಗಕ್ಕೆ ಮದಿರೆಯ ಕಿಚ್ಚು ಹಚ್ಚುತ್ತಿರುವ ಕಿರಂ:ತರೀಕೆರೆ ಬರಹ
ಇನ್ನೊಂದು ಪಾನಗೋಷ್ಠಿ. ಅದು ಬಹುಶಃ ನಮಗೆ ಮೂರು ತಿಂಗಳ ಬಳಿಕ ವಿಶ್ವವಿದ್ಯಾಲಯದಿಂದ ಮೊದಲನೇ ಸಂಬಳ ಬಂದ ದಿನ. ಭರ್ಜರಿ ಪಾನಗೋಷ್ಠಿ ಮಾಡಿದೆವು. ಮೇಷ್ಟರ ಮಾತು ಮಾತು ಮಾತು! ತಮಾಶೆ. ನಗುವಿನಲ್ಲಿ ಮೂರು ನಾಲ್ಕು ಗಂಟೆ ಕಳೆದವು.
ನರಪ್ರಾಣಿಯ ಕೋಲಾಹಲಗಳ ಬಗೆವ ಪ್ರಾಣಿವೈದ್ಯ:ಟಿ.ಎಸ್.ರಮಾನಂದರ ಪರಿಚಯ
ನನಗೊಮ್ಮೆ ಆಕಸ್ಮಿಕವಾಗಿ ರಮಾನಂದರ ‘ವೈದ್ಯನ ಶಿಕಾರಿ’ ಎಂಬ ಪುಸ್ತಕ ಓದಲು ಸಿಕ್ಕಿತು. ಈ ಲೇಖಕರ ಹೆಸರನ್ನು ಹಿಂದೆ ನಾನು ಕೇಳಿರಲಿಲ್ಲ. ಆದರೆ ಪುಸ್ತಕ ಓದಲು ಆರಂಭಿಸುತ್ತಿದ್ದಂತೆ ಕನ್ನಡದ ಅತ್ಯುತ್ತಮ ಗದ್ಯಬರೆಹವನ್ನು ಓದುತ್ತಿದ್ದೇನೆ ಎಂದು ಅನಿಸತೊಡಗಿತು.









