ಅಸಂಗತ ಸಂಭಾಷಣೆಯ ಕತೆಗಾರ
ವಿಶಿಷ್ಟ ಶೈಲಿಯ ಕಥೆಗಳನ್ನು ಬರೆಯುತ್ತಿದ್ದ ಸಾಹಿತಿ ಎಂ. ವ್ಯಾಸ ಅವರು ಕಾಸರಗೋಡು ಜಿಲ್ಲೆಯವರು. ತಮ್ಮ ಸಾಹಿತ್ಯ ಕೃತಿಗಳ ಕುರಿತು ಪ್ರಚಾರ ಮಾಡುವುದು, ಅವಕಾಶಗಳ ಬೆನ್ನುಬಿದ್ದು ‘ಕೀರ್ತಿಶನಿ’ಯ ಸ್ನೇಹ ಮಾಡುವುದನ್ನು ಅವರು ಇಷ್ಟಪಡುತ್ತಿರಲಿಲ್ಲ. ಆದರೆ ಸಾರಸ್ವತ ಲೋಕದಲ್ಲಿ ಅವರು ಸೃಷ್ಟಿಸಿದ ಕಥಾಲೋಕವನ್ನು ಓದುಗರು ಮೆಚ್ಚಿದ್ದಾರೆ. 2008ರ ಜುಲೈ 23ರಂದು ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಅವರನ್ನು ನೆನಪಿಸಿಕೊಳ್ಳುತ್ತ, -ಕ್ಷಿತಿಜ್ ಬೀದರ್ ಬರೆದ ಬರಹ ಇಲ್ಲಿದೆ.
ಉಧಂಪುರದಲ್ಲೊಂದು ಚಹಾಕೂಟ
ದೇಶಬಂಧು ಡೋಗ್ರಾನೂತನ್ ಡೋಗ್ರಿ ಸಾಹಿತ್ಯದಲ್ಲಿ ಕೃಷಿ ಮಾಡಿದವರು. ಸಮಕಾಲೀನ ಆಗುಹೋಗುಗಳಿಗೆ ಪ್ರತಿಕ್ರಿಯಿಸುವವರೂ ಹೌದು. ಹಾಗಾಗಿ, ಭಾಷೆ ಮತ್ತು ರಾಜಕೀಯ ವಿಚಾರಗಳ ವಿಶ್ಲೇಷಣೆಗಳತ್ತ ಕೂಡ ಗಮನ ಹರಿಸಿದವರು. ಅವರ ಮನೆಯ ಚಾವಡಿ, ಸಾಹಿತ್ಯ ಚರ್ಚೆ, ಚಹಾಕೂಟಗಳಿಗೆ ಆಸರೆ. ದೇಶವಿಭಜನೆಯ ಸಂದರ್ಭವನ್ನು, ತುರ್ತುಪರಿಸ್ಥಿತಿ ಬಿಗುವನ್ನೂ…”
ಯೋಧರ ನಾಡಿನ ಕಲಾವಿದ, ಲೇಖಕ ಮೋಹನ್ ಸಿಂಗ್
ಡೋಗ್ರಿ ಭಾಷೆಯ ಲೇಖಕರಾಗಿ, ರಂಗಭೂಮಿ ಕಲಾವಿದರಾಗಿರುವ ಮೋಹನ್ ಸಿಂಗ್ ಹೋರಾಟಗಾರ ವ್ಯಕ್ತಿತ್ವದವರು. ಗುಲಾಬಿ ಜುಬ್ಬಾ ಬಿಳಿ ಪೈಜಾಮಾ ಧರಿಸಿ ಹಳದಿ ಬಣ್ಣದ ನ್ಯಾನೋ ಕಾರು ಡ್ರೈವ್ ಮಾಡುತ್ತ ಅವರು ವಿಜಯಪುರ ಬಸ್ ನಿಲ್ದಾಣಕ್ಕೆ ಬಂದಿದ್ದರು. ವಿಶಾಲವಾದ ಹೊಲಗದ್ದೆಗಳ ನಡುವಿನ ದಾರಿಯಲ್ಲಿ ಈ ಬಣ್ಣದ ಕಾರು ಚಲಿಸುತ್ತಿರುವಾಗ, ಮೋಹನ್ ಸಿಂಗ್ ಅವರ ವ್ಯಕ್ತಿತ್ವವೂ ಅಷ್ಟೇ..”
ಚನ್ನಕೇಶವ ನೆನಪಿಗೆ ಒಂದು ಹಳೆಯ ಬರಹ
ಕನ್ನಡ ರಂಗಭೂಮಿಯ ಪೂರ್ಣಪ್ರಮಾಣದ ಕೃಷಿಕ ಚನ್ನಕೇಶವ ತೀರಿಕೊಂಡಿದ್ದಾರೆ. ನಾಟಕ ಆಡುವುದು, ಆಡಿಸುವುದು,ಆಡುವುದನ್ನು ಕಲಿಸುವುದು, ನಾಟಕ ವಿನ್ಯಾಸ, ರಸಗ್ರಹಣ ಹೀಗೆ ತನ್ನ ಪೂರ್ಣ ಹೊತ್ತನ್ನು ರಂಗಭೂಮಿಯಲ್ಲೇ ಕಳೆಯುತ್ತಿದ್ದವರು ಅವರು. ಕಳೆದ ಶುಕ್ರವಾರ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿಧನರಾದರು. ಅವರ ನೆನಪಿಗಾಗಿ ಕೆಂಡಸಂಪಿಗೆಗೆ ಅವರು ಈ ಹಿಂದೆ ಬರೆಯುತ್ತಿದ್ದ ಸರಣಿಯ ಒಂದು ತುಣುಕು..
ಕರೆಯ ನಡುವೆ ನಿಂತು ಹೋದ ದೂರವಾಣಿ
ವಿಜ್ಞಾನ ಬರಹಗಾರ ಡಾ. ಹಾಲ್ದೊಡ್ಡೇರಿ ಸುಧೀಂದ್ರ ಹೊಸ ವಿಷಯಗಳನ್ನು ಕಲಿಯಲು ಸದಾ ಉತ್ಸುಕರಾಗಿರುತ್ತಿದ್ದರು. ಹೊಸತನ್ನು ತಿಳಿಯುವುದಷ್ಟೇ ಅಲ್ಲ, ಅನ್ವಯಿಸಿ ಅದರ ಫಲಿತಾಂಶ ಗಮನಿಸುವ, ಕುತೂಹಲದ ಮನಸ್ಸು ಅವರದ್ದು. ತಾವು ಕಂಡುಕೊಂಡ ವಿಚಾರಗಳನ್ನು ಹಂಚಿಕೊಳ್ಳುವುದರಲ್ಲಿಯೂ ಅವರಿಗೆ ಬಹಳ ಆಸಕ್ತಿ. ಅವರೊಡನೆ ಒಡನಾಡಿದ ಕ್ಷಣಗಳನ್ನು ನೆನಪು ಮಾಡಿಕೊಂಡು, ಬರಹಗಾರ ಟಿ.ಜಿ. ಶ್ರೀನಿಧಿ..”
ಹಾಲ್ದೊಡ್ಡೇರಿ ತೀರಿಹೋದರು…
ಕನ್ನಡದ ಅಗ್ರಗಣ್ಯ ವಿಜ್ಞಾನ ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ ಇಂದು ನಿಧನರಾಗಿದ್ದಾರೆ. ವಿಜ್ಞಾನದಷ್ಟೇ ಬರವಣಿಗೆಯನ್ನೂ ಅಪಾರವಾಗಿ ಪ್ರೀತಿಸುತ್ತಿದ್ದ ಸುಧೀಂದ್ರ ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅನುಪಮ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ ಪ್ರಕಟಿಸಿತ್ತು. ಆದರೆ ಪ್ರಶಸ್ತಿಯ ಸಂಭ್ರಮಕ್ಕೆ ಕಾಯದೇ ಅವರು ತೆರಳಿದರು. ತೀವ್ರ ಹೃದಯಾಘಾತಕ್ಕೆ ಒಳಗಾದ…”
ತಿರುಗಿ ಬಾರದ ಸಂಚಾರಿಯ ಕುರಿತು
ಏನೇ ಆದರೂ ಒಂದು ವಿಚಾರವಂತೂ ಸ್ಪಷ್ಟ ಮತ್ತು ವ್ಯಕ್ತ. ವಿಜಯ್ ಅವರ ಗೆಳೆಯರೊಬ್ಬರು ವಿಜಯ್ ಅವರನ್ನು ‘ಮಗು’ ಅಂತ ಕರೆದಾಗ ಅದು ನನಗೆ ಉತ್ಪ್ರೇಕ್ಷೆ ಅನಿಸಿತ್ತು. ಆದರೆ ವಿಜಯ್ ಫೋನಲ್ಲಿ ನನ್ನ ದೀರ್ಘ ಪ್ರಶ್ನೆಗಳಿಗೆ ನಗುತ್ತಿದ್ದ ಬಗೆ ನೆನೆಸಿಕೊಂಡರೆ ಮಗುವಿನ ನಗೆಯ ಶಬ್ದವೇ ತಾಳೆಯಾಗುತ್ತಿದೆ. ನಾನು ಬಿಲ್ಲು ಬಾಣ ಕೆಳಗಿರಿಸಿ ನಮ್ರತೆಯಿಂದ ಕೈ ಮುಗಿಯುತ್ತಿದ್ದೇನೆ.
ಅಗಲಿದ ಮೇರು ನಟ ಸಂಚಾರಿ ವಿಜಯ್ ಕುರಿತು..
ಮೊಗಳ್ಳಿ ನೆನಪಿನಲ್ಲಿ ಸಿದ್ಧಲಿಂಗಯ್ಯ
‘ಚಾಪ್ಸ್ ಅಂದ್ರೆನೇ ಅಂಗೆ.. ಬೋನ್ ಬಿಡಿಸಿಕೊಂಡು ತಿನ್ನಬೇಕೂ’ ಎನ್ನುತ್ತ, ಮೊಮ್ಮಕ್ಕಳನ್ನು ಕೂರಿಸಿಕೊಂಡು ತಾತ ಒಂದೇ ತಟ್ಟೆಯಲ್ಲಿ ಮಕ್ಕಳಿಗೆ ತಿನ್ನುವುದನ್ನು ಕಲಿಸುವಂತೆ ಆ ದಪ್ಪ ಚಾಪ್ಸ್ ಎತ್ತಿಕೊಂಡು ಬಿಡಿಸಿ ಬಿಡಿಸಿ ದವಡೆಯಲ್ಲಿಟ್ಟು ಗಸಗಸನೇ ಅಗಿದು ಮಸೆದು ನುಂಗಿ, ‘ಹೀಗೆ ತಿನ್ನಬೇಕು’ ಎಂದರು. ನಿಷ್ಕಲ್ಮಷವಾದ ಅವರ ಪ್ರೀತಿ, ಅಂತಃಕರಣ, ಸಜ್ಜನಿಕೆ, ಪ್ರಾಮಾಣಿಕತೆ ಬಹಳ ಅಪರೂಪವಾದುದು. ಡಾ. ಸಿದ್ಧಲಿಂಗಯ್ಯ ಅವರೊಂದಿಗಿನ ಒಡನಾಟದ ಕುರಿತು ಕಥೆಗಾರ ಮೊಗಳ್ಳಿ ಗಣೇಶ್ ಆಪ್ತ ಬರಹ.
ಸಿದ್ಧಲಿಂಗಯ್ಯ ನೆನಪಿಗೆ ಊರುಕೇರಿಯ ಪುಟಗಳು
ಕನ್ನಡದ ಊರು ಕೇರಿಯ ಕವಿ ಸಿದ್ದಲಿಂಗಯ್ಯ ತೀರಿಹೋಗಿದ್ದಾರೆ. ತಾನೊಬ್ಬ ಖ್ಯಾತ ಕವಿ ಎಂಬ ಯಾವ ಹಮ್ಮೂ ಇಲ್ಲದೆ ಸಹಜವಾಗಿ ಜೋಕುಗಳನ್ನು ಹಾರಿಸುತ್ತಾ ಬದುಕಿದ್ದ ಸಿದ್ದಲಿಂಗಯ್ಯ ಅಧಿಕಾರಗಳನ್ನು ಅನುಭವಿಸಿದಷ್ಟೇ ಸಹಜವಾಗಿ ಸರಳತೆಯನ್ನೂ ರೂಡಿಸಿಕೊಂಡಿದ್ದರು. ಬೆಂಗಳೂರಿನ ದಲಿತ ಕೇರಿಯೊಂದರ ಸ್ಮಶಾನದ ಕಲ್ಲುಗಳನ್ನೇ ತನ್ನ ಕಾವ್ಯಕೃಷಿಯ ಸೋಪಾನಗಳಂತೆ ಬಳಸಿಕೊಳ್ಳಬಲ್ಲ ಹುಟ್ಟಾ ಸೃಜನಶೀಲತೆಯ ಜೊತೆಜೊತೆಗೇ ಸಿಟ್ಟನ್ನು, ಪ್ರತಿಭಟನೆಯನ್ನು…”









