ಪರ್ವತಗಳು ಬರಹಗಾರರಿಗೆ ಉಪಕಾರಿಯಾಗಿರುತ್ತವೆ..: ಖಂಡಿಗೆ ಮಹಾಲಿಂಗ ಭಟ್ ಬರಹ
‘ಯಾವನು ಬೆಟ್ಟಗಳಿಗೆ ಹೋಗುವನೋ, ಅವನು ತನ್ನ ತಾಯಿಯಲ್ಲಿಗೆ ಹೋಗುವನು’ ಎಂಬುದಾಗಿ ಕಿಪ್ಲಿಂಗ್ ಬರೆದಿರುವನು ಮತ್ತು ಅವನು ಇದರಿಂದ ಹೆಚ್ಚಿನ ಸತ್ಯವನ್ನು ಬರೆದುದು ಅಪರೂಪ. ಯಾಕೆಂದರೆ ಬೆಟ್ಟಗಳಲ್ಲಿ ಜೀವಿಸುವುದು ತನ್ನ ತಾಯಿಯ ಎದೆಯಲ್ಲಿ ಹುದುಗಿಕೊಂಡು ಮಲಗಿದಷ್ಟು ಹಿತಕರವೆನಿಸುತ್ತದೆ. ಪ್ರತಿ ಬಾರಿ ನಾನು ಬೇರೆಡೆಗೆ ಹೋಗಿಪುನಃ ಹಿಂದಿರುಗುವಾಗ ಮನಸ್ಸಿಗೆ ತುಂಬಾ ಹಿತಕರ ಹಾಗೂ ಅಪ್ಯಾಯಕರವೆನಿಸುತ್ತದೆ.
ರಸ್ಕಿನ್ ಬಾಂಡ್ ಅವರ “ರೇನ್ ಇನ್ ದ ಮೌಂಟೇನ್ಸ್” ಕೃತಿಯ ಒಂದು ಬರಹವನ್ನು ಡಾ. ಖಂಡಿಗೆ ಮಹಾಲಿಂಗ ಭಟ್ ಕನ್ನಡಕ್ಕೆ ಅನುವಾದಿಸಿದ್ದು, ನಿಮ್ಮ ಓದಿಗೆ ಇಲ್ಲಿದೆ
ಭಾವಯಾಮಿ ಗೌರೀ..: ದೀಪಾ ಫಡ್ಕೆ ಬರಹ
ವೃತ್ತಿ, ಪ್ರವೃತ್ತಿಗಳ ನಡುವೆ ಉಯ್ಯಾಲೆಯಾಡುತ್ತಿರುವ ಆಧುನಿಕ ಕಾಲದ ಗೌರಿಯರಿಗೆ ತಿಂಗಳಿಗೆ ಮೊದಲೇ ಹಬ್ಬದ ತಯಾರಿ ಅಸಾಧ್ಯ. ಅಡುಗೆ ಮನೆಯ ನಲ್ಲಿಯ ನೀರಲ್ಲಿ `ಗಂಗೇಚ ಯಮುನೇಚೈವ..’ ಎನ್ನುತ್ತಾ ಗಂಗೆಯನ್ನು ಆವಾಹಿಸಿ ಕಲಶ ತುಂಬುವ ನಮಗೆ ನಗರದ ಪುಟ್ಟ ಪುಟ್ಟ ಮನೆಗಳಲ್ಲಿ ಹಬ್ಬವೆಂದರೆ ನಿತ್ಯದ ಒಂದು ಟಬ್ ಪಾತ್ರೆಗಳ ಬದಲು ಎರಡು ಟಬ್ ಪಾತ್ರೆಗಳು ಎಂದೂ ಒಮ್ಮೊಮ್ಮೆ ಕಾಣುವುದಿದೆ.
ಜಗದೆಲ್ಲ ಗೌರಿಯರ ಕುರಿತು ದೀಪಾ ಫಡ್ಕೆ ಬರಹ ನಿಮ್ಮ ಓದಿಗೆ
ಕ್ಯಾಲಿಫೋರ್ನಿಯಾ ಮತ್ತು ಭೂಕಂಪ: ಗಿರಿಧರ್ ಗುಂಜಗೋಡು ಬರಹ
ನನ್ನ ಹೆದರಿಕೆ ಏನೆಂದರೆ ನಾನು ಟಾಯ್ಲೆಟ್ಟಿನಲ್ಲಿದ್ದಾಗಲೋ ಇಲ್ಲಾ ಸ್ನಾನ ಮಾಡಬೇಕಾದರೋ ಭೂಕಂಪವಾದರೆ ಏನು ಮಾಡೋದು ಅಂತ. ಆ ಅವಸ್ಥೆಯಲ್ಲಿ ಹೊರಗೆ ಓಡುವುದು ಎಷ್ಟು ಮುಜುಗರದ ಸನ್ನಿವೇಶ ಅಂತ ಯೋಚಿಸಿ. ನಾನು ಗೆಳೆಯನೊಟ್ಟಿಗೆ ಮಾತನಾಡುತ್ತಾ ಇದೇ ವಿಷಯ ಹೇಳಿದೆ.
ಕ್ಯಾಲಿಫೋರ್ನಿಯಾದಲ್ಲಾದ ಭೂಕಂಪದ ಅನುಭವಗಳ ಕುರಿತು ಗಿರಿಧರ್ ಗುಂಜಗೋಡು ಬರಹ
ಮುಯ್ಯಿಗೆ ಮುಯ್ಯಿ …!: ವಸಂತಕುಮಾರ್ ಕಲ್ಯಾಣಿ ಪ್ರಬಂಧ
ಇನ್ನೊಬ್ಬ ಸಹೋದ್ಯೋಗಿ ಬ್ರಹ್ಮಚಾರಿ ಸಾಧ್ಯವಾದಷ್ಟು ಕಾರ್ಯಕ್ರಮಗಳಿಗೆ ಕೈ ಕೊಡುತ್ತಿದ್ದ. ನಂತರ ತಡವಾಗಿ ಮದುವೆಯಾದ. ಒಂದು ಮಗುವಾಯಿತು. ಅಷ್ಟೇ ಸಾಕು ಎಂದು ನಿರ್ಧರಿಸಿದ. ಆನಂತರ ಅವನು ಯಾರದಾದರೂ ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಮೊದಲನೆಯ ಮದುವೆಗೆ ಹೋಗುತ್ತಿದ್ದ. ಉಡುಗೊರೆ ಕೊಡುತ್ತಿದ್ದ. ಎರಡನೆಯದಕ್ಕೆ ತಪ್ಪಿಸಿಕೊಳ್ಳುತ್ತಿದ್ದ.
ವಸಂತಕುಮಾರ್ ಕಲ್ಯಾಣಿ ಬರೆದ ಪ್ರಬಂಧ “ಮುಯ್ಯಿಗೆ ಮುಯ್ಯಿ…!”
ಹುತ್ತಗಟ್ಟಿದ ನಾಗಪ್ಪನ ಕತೆ: ಸುಮಾ ಸತೀಶ್ ಬರಹ
ಮ್ಯಾಲೆ ಆಕಾಸ್ದಾಗೆ ಸಿವ ಪಾರೋತಿ ಸಂಚಾರ ಹೊಂಟಿದ್ರು. ಪಾರೋತಿಗೆ ಯಾರೋ ಅಳೋ ಸದ್ದು ಕೇಳ್ತೋ. ಗಂಡಂಗೆ ಯಾರೋ ಹೆಣ್ಣು ಮಗು ಅಳೋ ಸದ್ದು ಬರ್ತಾ ಐತೆ. ಹೋಗಿ ನೋಡೋಮಾಂತ ಬೋ ಹಠ ಮಾಡಿದ್ಲು. ಸಿವ ಇದ್ದೋನೇ, ಥೋ ಈ ಹೆಣ್ಣುಮಕ್ಕಳ ಕಾಟ ಇದ್ದಿದ್ದೇಯಾ, ನೆಮ್ದಿಯಾಗಿ ಸಂಚಾರ ಹೋಗೋಕೂ ಬಿಡಾಕಿಲ್ಲಾ ಅಂಬ್ತ ಯೋಳಿ, ಆ ತಂಗಿ ತಾವ್ಕೆ ಕರ್ಕೊಂಡು ಬಂದ.
ಸುಮಾ ಸತೀಶ್ ಬರಹ ನಿಮ್ಮ ಓದಿಗೆ
ಸ್ಮಾರ್ಟ್ ಫೋನ್ – ಸ್ಮಾರ್ಟ್ ಸುರಕ್ಷೆ: ಡಾ. ಪ್ರಮೋದ್ ದಾಮ್ಲೆ ಬರಹ
ಈಗಿನ ಬಹುತೇಕ ಜನರ ಜೀವನದ ಭಾಗವೇ ಆಗಿಹೋಗಿರುವ ಸ್ಮಾರ್ಟ್‌ಫೋನ್‌ನಲ್ಲಿ ಅಡಗಿಸಿಟ್ಟ ನಮ್ಮ ವೈಯಕ್ತಿಯ ವಿವರಗಳು ಸೋರಿಕೆಯಾಗುವುದುಸಾಮಾನ್ಯವಾಗುತ್ತಿರುವ ಹೊತ್ತಿನಲ್ಲಿ, ಹೇಗೆ ಇಂಥ ಅಪಾಯದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಎಂಬುದರ ಕುರಿತು ಡಾ. ಪ್ರಮೋದ್ ದಾಮ್ಲೆ ಬರಹ
ತುಂಬಿದ ಅಣೆಕಟ್ಟೆಯ ಸುತ್ತ-ಮುತ್ತ: ಗೊರೂರು ಶಿವೇಶ್ ಪ್ರಬಂಧ
ಅಣೆಕಟ್ಟಿನಿಂದಾಗಿ ನಮ್ಮೂರಿಗೆ ಆದ ಲಾಭಕ್ಕಿಂತ ನಷ್ಟವೇ ಹೆಚ್ಚು. ಮಾದರಿ ಗ್ರಾಮವಾಗಿದ್ದ ಊರು ಈಗ ಶೀತಪೀಡಿತ ಪ್ರದೇಶವಾಗಿದೆ. ಅಸ್ತಮಾ ಪೀಡಿತರ ಜೊತೆಗೆ ಮಲೇರಿಯಾ ಡೆಂಗಿ ಕಾಯಿಲೆಗಳು ಆಗಾಗ ಕಾಡುತ್ತಿರುತ್ತವೆ. ಕೆಲವು ವರ್ಷಗಳ ಹಿಂದೆ ಹಳೆಯ ಊರನ್ನು ಕೂಡ ಮುಳುಗಡೆ ವ್ಯಾಪ್ತಿಗೆ ತರಲಾಗಿದೆ.
ಗೊರೂರು ಶಿವೇಶ್ ಬರೆದ ಪ್ರಬಂಧ ನಿಮ್ಮ ಓದಿಗೆ
ಹಾಳು ಮನೆಯ ಅತಿಥಿ !: ಶರಣಗೌಡ ಬಿ.ಪಾಟೀಲ ತಿಳಗೂಳ ಪ್ರಬಂಧ
“ಊರಾಗ ಜಾತ್ರೆ ಉತ್ಸವ ಮದುವೆ ಮುಂಜಿ ಏನಾದರು ಇದ್ದಾಗಾದ್ರು ಗಂಗಣ್ಣ ಬಂದು ಹೋಗಬಾರದಾ? ಎಂಥಹ ಮನುಷ್ಯ? ಆಗಾಗ ಬಂದು ಹೋದರೆ ಮನೆ ಕೂಡ ಸ್ವಚ್ಛವಾಗಿರ್ತಾದೆ, ಜನ ಕೂಡ ಗುರುತು ಹಿಡೀತಾರೆ, ಇಲ್ಲದಿದ್ದರೆ ಯಾರು ಗುರುತು ಹಿಡೀತಾರೆ?
ಶರಣಗೌಡ ಬಿ.ಪಾಟೀಲ ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ
ಕಥೆಯ ದುಃಖಾಂತ ಮನದಲ್ಲಿ ಅನಂತ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ
ಆಯುರ್ವೇದ ವೈದ್ಯಪದ್ಧತಿಯಲ್ಲಿ ವಿರೇಚನ ಎನ್ನುವ ಚಿಕಿತ್ಸೆ ಇದೆ. ದೇಹದೊಳಗಿನ ಕಲ್ಮಶಗಳನ್ನು ಭೇದಿಯ ರೂಪದಲ್ಲಿ ಹೊರಹಾಕುವ ಮೂಲಕ ಶರೀರವನ್ನು ಪರಿಶುದ್ಧಗೊಳಿಸುವ ಪ್ರಕ್ರಿಯೆಯಿದು. ಕಾವ್ಯಮೀಮಾಂಸೆಯಲ್ಲಿ ಬರುವ ‘ಕೆಥಾರ್ಸಿಸ್’ ಎನ್ನುವ ಪರಿಕಲ್ಪನೆಯೂ ಇದೇ ಪ್ರಕ್ರಿಯೆಯನ್ನು ಆಧರಿಸಿದೆ.
ಡಾ. ವಿಶ್ವನಾಥ ನೇರಳಕಟ್ಟೆ ಬರಹ ನಿಮ್ಮ ಓದಿಗೆ









