ಯಕ್ಷಗಾನದ ವೇಷದಲ್ಲಿ ಪಾತ್ರದ ಗಾತ್ರ: ಪ್ರಜ್ಞಾ ಮತ್ತಿಹಳ್ಳಿ ಬರೆದ ಲೇಖನ
“ಪಾತ್ರವೊಂದನ್ನು ಧರಿಸುವ ಕಲಾವಿದನಿಗೆ ಇರಬೇಕಾದ ಅರ್ಹತೆಗಳೇನು? ಆ ಪಾತ್ರ ಪುರಾಣ ಕಾಲದಲ್ಲಿದ್ದಷ್ಟೇ ಎತ್ತರ, ಗಾತ್ರ, ಬಣ್ಣ, ರೂಪಗಳು ಬೇಕೆ? ಖಂಡಿತ ಇಲ್ಲ. ಯಕ್ಷಗಾನದ ಮಟ್ಟಿಗೆ ಅಂತಹ ನಿರ್ಬಂಧಗಳೇನೂ ಇಲ್ಲ. ತೀರಾ ಕೃಶ ಶರೀರದ ಶಿವರಾಮ ಹೆಗಡೆಯವರ ದುಷ್ಟಬುದ್ಧಿ, ಕೌರವ ನೋಡಿದವರು ಈ ಮಾತನ್ನು ಅರ್ಥ ಮಾಡಿಕೊಳ್ಳಬಲ್ಲರು.”
ಮಣ್ಣಿನ ವಾಸನೆ ಮತ್ತು ವಸ್ತುಪ್ರತಿರೂಪ ವಿಚಾರ: ಕೆ. ವಿ. ತಿರುಮಲೇಶ್ ಲೇಖನ
“ಕವಿಯ ಒಳಗು ಪೂರ್ತಿ ಹೊರಗಿನಿಂದ ಮುಕ್ತವಲ್ಲ ಎನ್ನುವುದಕ್ಕೆ ಈ ಮಾತು. ಇಂಥ ಅಂತರಂಗಕ್ಕೆ ಪ್ರತಿಮಾಲೋಕದ ಮೂಲಕ ಅಭಿವ್ಯಕ್ತಿ ಕೊಡುವುದೇ ಸೃಷ್ಟಿಕ್ರಿಯೆ. “ಕವಿಯ ಅಥವಾ ಕಲೆಗಾರನ ಕೆಲಸ ತನ್ನ ಅನುಭವಕ್ಕೆ ತಕ್ಕ ವಸ್ತುಪ್ರತಿಲೋಕವನ್ನು ಸೃಷ್ಟಿಸುವುದು. ಈ ಅರ್ಥದಲ್ಲಿ ಕವಿ ‘ನೂತನ ಬ್ರಹ್ಮ’ನಲ್ಲದೆ ಅಘಟಿತ ಘಟನೆಗಳನ್ನು ಕಲ್ಪಿಸುವುದರಿಂದ ಅಲ್ಲ.”
ಮೆಹಬೂಬ ಮುಲ್ತಾನಿ ಅನುವಾದಿಸಿದ ಗೀತ್ ಚರ್ತುವೇದಿ ಬರೆದ ಲೇಖನ
“ಫ್ಲೋರಂತಿನೊ ಅವಳ ಪ್ರೀತಿಯಿಲ್ಲದೆ ಭಗ್ನಗೊಂಡು ಅಸ್ತವ್ಯಸ್ತಗೊಂಡಿರುತ್ತಾನೆ. ಅವನಿಗೆ ಅವನ ಪ್ರೀತಿಯಲ್ಲಿ ಅದ್ಯಾವ ಕೊರತೆಯಿತ್ತು ಎನ್ನುವ ವಿಷಯದ್ದೇ ಚಿಂತೆಯಾಗಿರುತ್ತದೆ. ಅವನು ಹಲವಾರು ಕಾರಣಗಳ ಹುಡುಕಾಟದ ನಂತರವೂ ಒಂದಿಷ್ಟು ಲವಲೇಶ ಕಳೆದುಕೊಳ್ಳದೇ ಅವಳನ್ನು ಮೊದಲಿನಷ್ಟೇ ಪ್ರೀತಿಸುತ್ತಾನೆ. ಅವಳ ಬಗ್ಗೆ ಒಂದು ಕ್ಷಣಕ್ಕಾಗುವಷ್ಟೂ ಆತ ಕೆಟ್ಟದನ್ನು ಯೋಚಿಸುವುದಿಲ್ಲ. ಅಷ್ಟೇ ಅಲ್ಲ ಅವಳ ಬಗ್ಗೆ ಮೊದಲಿನ ಪ್ರೀತಿಯನ್ನೇ”
ಸಾಹಿತ್ಯದ ನಿಷಿದ್ಧ ವಲಯ: ಕೆ.ವಿ. ತಿರುಮಲೇಶ್ ಲೇಖನ
“ನಾನು ಆಗಾಗ ರೋಮನ್ ಇತಿಹಾಸ ಓದುತ್ತಿದ್ದೆ. ಸಿಕ್ಕಿದ ಮಾಹಿತಿಗಳನ್ನೇ ಬಳಸಿಕೊಂಡು ಮೊದಲು “ಟೈಬೀರಿಯಸ್”, ನಂತರ “ಕಲಿಗುಲ” ಬರೆದೆ. ಇವುಗಳ ಬಗ್ಗೆ ಜನ ಏನೆನ್ನುತ್ತಾರೋ ಎನ್ನುವ ಕುತೂಲ ಇತ್ತು. ಎರಡೂ ಪೂರ್ಣಪ್ರಮಾಣದ ನಾಟಕಗಳು. ನನ್ನ ಜೀವನ ಸಂಧ್ಯೆಯಲ್ಲಿ ಮಾಡಿದ ಕೆಲಸಗಳು. ಇನ್ನೂ ಬರೆಯಬೇಕೆಂದಿದ್ದೆ. ನನ್ನ ಭಾಷಾ ಬಾಂಧವರಿಂದ ಒಂದು ಒಳ್ಳೆಯ ಮಾತು ಬರುತ್ತಿದ್ದರೆ ಬಹುಶಃ ಹಾಗೆ ಮಾಡುತ್ತಿದ್ದೆನೋ ಏನೋ.”
ನನಗಿನ್ನೂ ನೆನಪಿದೆ. ಬಹುಶಃ ಆಗ ನಾನು ತುಂಬಾ ಎಳೆಯ ಹುಡುಗಿ
“ಆರಂಭವೂ ಇಲ್ಲದ ಅಂತ್ಯವೂ ಇಲ್ಲದ, ಹಾದಿಯಿಲ್ಲದ ಹಾದಿಯಲ್ಲಿ ಏನೂ ಗೊತ್ತಿಲ್ಲದೆ ಬರೆಯುತ್ತಾ ಬಿಳಿಯ ಮುಗಿಲಿನ ಒಳಗೆ ಹಾದು ಹೋಗುತ್ತಿದ್ದೇನೆ. ನಿಮಗೆಲ್ಲರಿಗೂ ನಮಸ್ಕಾರ.”
ನಕ್ಷತ್ರ ಎಂಬ ಹೆಸರಿನಲ್ಲಿ ಕವಿತೆ ಬರೆಯುತ್ತಿದ್ದ ನಾಗಶ್ರೀ ಶ್ರೀರಕ್ಷ ನಮ್ಮನ್ನು ಅಗಲಿ ಇಂದಿಗೆ ಎರಡು ವರ್ಷಗಳಾದವು. ಕೆಂಡಸಂಪಿಗೆಯ ಸಹಾಯಕ ಸಂಪಾದಕಿಯೂ ಆಗಿದ್ದ ಕನ್ನಡದ ಈ ಅನನ್ಯ ಕವಯತ್ರಿ ತನ್ನ ಏಕೈಕ ಕವಿತಾ ಸಂಕಲನಕ್ಕೆ ಬರೆದ ಪ್ರಸ್ತಾವನೆಯ ಸಾಲುಗಳು..”
ತರ ತರದ ತರಕಾರಿ: ಕೆ.ವಿ. ತಿರುಮಲೇಶ್ ಲೇಖನ
“ತರಕಾರಿಗಳಲ್ಲಿ ಕುಂಬಳದ ಕುರಿತು ನನಗೆ ಹೆಚ್ಚು ಮಮತೆ ಇದೆ. ಆದರೆ ಇದನ್ನು ಯಾಕೆ ದೇವರ ಪೂಜೆಯಿಂದ ನಿಷಿದ್ಧ ಮಾಡಿದ್ದಾರೋ ತಿಳಿಯದು. ಅಪರ ಕ್ರಿಯೆಗಳಿಗೆ, ಮಾಟಮಂತ್ರಗಳಿಗೆ ಮಾತ್ರ ಇದು ಸಲ್ಲುವಂಥದು. ಅಲ್ಲದೆ ಹೊಸ ಮನೆಗಳನ್ನು ಕಟ್ಟಿಸುವಾಗ ಎಲ್ಲರಿಗೂ ಕಾಣುವ ಹಾಗೆ ಎದುರಿಗೇ ಇದನ್ನು ತೂಗಿ ಹಾಕುವುದಿದೆ, ಜನರ ಕೆಟ್ಟ ದೃಷ್ಟಿ ತಾಕದಿರಲಿ ಎಂದು…”
ಆಹಾರದಲ್ಲಿನ ಆರೋಗ್ಯದ ಗುಟ್ಟು: ಕ್ಷಮಾ ವಿ. ಭಾನುಪ್ರಕಾಶ್ ಬರಹ
“ನಮ್ಮ ದೇಹವು ನಮ್ಮ ಹಿಂದಿನ ತಲೆಮಾರಿನವರಂತೆಯೋ, ಹೊಲಗಳಲ್ಲಿ ದಿನವೆಲ್ಲಾ ದುಡಿಯುವ ಶ್ರಮಿಕ ರೈತನಂತೆಯೋ ದಣಿಯುವುದಿಲ್ಲವಾದ್ದರಿಂದ ಅದಕ್ಕೆಅವರಷ್ಟೇ ಪ್ರಮಾಣದಲ್ಲಿ ಆಹಾರ ಕೂಡ ಬೇಡ; ಇದು ಅತ್ಯಂತ ಮೂಲಭೂತ ವಾಸ್ತವ; ಹಾಗಾಗಿ ನಮ್ಮ ದೇಹವು ಎಷ್ಟು ಪ್ರಮಾಣದ ಶಕ್ತಿ ಬೇಡುತ್ತದೋ ಅದಕ್ಕೆ ತಕ್ಕಷ್ಟು ಆಹಾರ…”
ರೈನರ್ ಮರಿಯಾ ರಿಲ್ಕೆಯ ಕಾವ್ಯ – ಒಂದು ಪ್ರವೇಶಿಕೆ: ಆರ್. ವಿಜಯರಾಘವನ್ ಅನುವಾದಿತ ಲೇಖನ
“ರಿಲ್ಕೆ ಹಲವು ಬಾರಿ ರಷ್ಯಾದಲ್ಲಿ ತಂಗಿದ್ದವನು. ವಿಶೇಷವಾಗಿ ದೋಸ್ಟೊಯೆವ್ಸ್ಕಿಯ ಕಾದಂಬರಿಗಳ ಪರಿಚಯವಾದುದು ಅವನ ಸಾಹಿತ್ಯಕ ಬೆಳವಣಿಗೆಯಲ್ಲಿ ಪ್ರಬಲವಾದ ಅಂಶ. ಅವನ ಬರಹಗಳು ಗಾಢವಾಗಲು ಇದು ನೆರವಾಯಿತು. ಈ ಪ್ರಭಾವವಿಲ್ಲದೆ ರಿಲ್ಕೆಯ ಸೃಷ್ಟಿಗಳು ಅನಗತ್ಯವಾದ ಭವ್ಯ ಸೌಂದರ್ಯದಲ್ಲಿ..”
ಶಿಶುನಾಳ ಶರೀಫರ ಕಾವ್ಯ: ಕೆ. ವಿ. ತಿರುಮಲೇಶ್ ಲೇಖನ
“ಶರೀಫರ ಅನುಭಾವಲೋಕ ಆಧ್ಯಾತ್ಮಿಕವಾದರೂ ಅನುಭವಲೋಕ ಪ್ರಾಪಂಚಿಕವೇ. ಅದು ಕೇವಲ ಮಾನವ ಜೀವಿಗಳಿಂದ ಮಾತ್ರವೇ ತುಂಬಿರುವುದಲ್ಲ. ಸಕಲ ಪಶುಪಕ್ಷಿ ಕ್ರಿಮಿಕೀಟಗಳಿಗೂ ಜಲ ಜಲಧಾರೆಗಳಿಗೂ ವೃಕ್ಷಗಳಿಗೂ ಅಲ್ಲಿ ನೆಲೆಯಿದೆ. ಅವರ ಕಾವ್ಯದಲ್ಲಿ ಕೋಳಿಗಳ ಪ್ರಸ್ತಾಪ ಬರುವಷ್ಟು ಇನ್ನು ಯಾರ ಕಾವ್ಯದಲ್ಲೂ ಬರುವುದಿಲ್ಲ. ಜನ್ನನ ಯಶೋಧರ ಚರಿತೆಯಲ್ಲಿ…”









