“ವಾಸ್ತುಪುರುಷ್” ಮರಾಠಿ ಚಿತ್ರ ಪರಂಪರೆಯಲ್ಲಿ ಹೊಸಯುಗದ ಚಿತ್ರ
“ವಾಸ್ತುಪುರುಷ್, ಸೌಂದರ್ಯಾತ್ಮಕ ಪ್ರಜ್ಞೆಯನ್ನು ರೂಢಿಸಿಕೊಳ್ಳುತ್ತಾ ತಾತ್ವಿಕ ಕಾಳಜಿಯನ್ನು ಹೊಂದಿದೆ. ಈ ಸಿನೆಮಾವು ವ್ಯಕ್ತಿಗಳು, ಸಮುದಾಯಗಳ, ಆಧುನಿಕ ಭಾರತದ ಶೋಧನೆಗಳ, ಆಕಾಂಕ್ಷೆಗಳ, ನಿರಾಸೆಗಳ ಮತ್ತು ಆತ್ಮಾವಲೋಕನದ ಪಯಣಗಳ ಕುರಿತಾದ ಮಹೋನ್ನತ ಚಿಂತನೆ ಮತ್ತು ಯಾತ್ರೆ.”
ಜ್ಯೋತಿಷಿ ಹೇಳಿದ ಮಾತು:ಇ.ಆರ್.ರಾಮಚಂದ್ರನ್ ಬರಹ
“ಶ್ರೀದೇವಿಯ ಸರದಿ ಬಂದಾಗ, ಜ್ಯೋತಿಷಿ ಸ್ವಲ್ಪ ಗಂಭೀರವಾಗಿ `ಮದುವೆ ನಿನಗೆ ಒಳ್ಳೆಯದು ಮಾಡಲ್ಲ. ನಿನ್ನ ಗಂಡನಾಗುವನಿಗೆ ಆಯಸ್ಸು ಕಡಿಮೆ ಆಗುತ್ತೆ’ ಎಂದ. ಹುಡುಗಿಯರೆಲ್ಲಾ ಶ್ರೀದೇವಿಗೆ ಸಮಾಧಾನ ಮಾಡಿ ಯಾವ ಜ್ಯೋತಿಷಿಯನ್ನೂ ನಂಬಲಾಗುವುದಿಲ್ಲ ಎಂದು ಸಮಾಧಾನ ಮಾಡಿದರು. ಅಷ್ಟಕ್ಕೂ ಅಲ್ಲಿ ಯಾರಿಗೂ ಜ್ಯೋತಿಷ್ಯದಲ್ಲಿ ಹೆಚ್ಚು ನಂಬಿಕೆ ಇರಲಿಲ್ಲ”
ಕವಿತೆಯನ್ನು ಕೇಂದ್ರವಾಗಿಟ್ಟುಕೊಂಡು ಎಂಬ ಮಾತೆಂದರೆ
ಕವಿತೆ ಬರೆಯೋದು ಬಹಳ ಸುಲಭ ಅಂತ ಬಹಳಷ್ಟು ಕವಿಗಳು ನಂಬಿಕೊಂಡಂತಿದೆ. ಹಾಗಾಗಿಯೇ ಅವರು ಯಾವ ವಿಷಯ, ವಸ್ತು, ಘಟನೆ, ಕಂಡ ತಕ್ಷಣಕ್ಕೆ ಕಂಡಂತೆಯೇ ಅದನ್ನು ಕವಿತೆಯ ರೂಪಕ್ಕಿಳಿಸಿ ಸಂತೋಷ ಪಡುತ್ತಾರೆ. ಆದರೆ ಅದನ್ನೆ ಮತ್ತೆ ಬರೆಬರೆದು ತನ್ನ ಸಂತೋಷಕ್ಕೆ ಓದುಗರನ್ನಾ ಕಾವ್ಯದಿಂದಲೇ ವಿಮುಖರಾಗುವಷ್ಟು ಮಟ್ಟಿಗೆ ಗುರಿಪಡಿಸುವುದು ಸರಿಯಲ್ಲವಷ್ಟೇ.
ಕವಿ ತಿರುಮಲೇಶರು ಬರೆದ ಬೆರ್ಚಪ್ಪ ಪ್ರಪಂಚ
“ಬೆರ್ಚಪ್ಪನಿಗೆ ಹಕ್ಕಿಗಳು ಬೆದರುತ್ತವೆಯೇ? ನನಗೀ ಬಗ್ಗೆ ಸಂಶಯವಿದೆ. ಬೆರ್ಚಪ್ಪನ ಹೆಗಲ ಮೇಲೇ ಕೂತು ದಣಿವಾರಿಸಿಕೊಳ್ಳುತ್ತಿರುವ ಹಕ್ಕಿಗಳನ್ನು ನಾನು ಕಂಡಿದ್ದೇನೆ. ಇನ್ನು ಈ ಕುರಿತು ಹಕ್ಕಿಗಳನ್ನು ಕೇಳಿ ಪ್ರಯೋಜನವಿಲ್ಲ. ಅವು ಕಬಳಿ ಹಾಕಿದ ಭತ್ತದ ಹೊಟ್ಟುಗಳನ್ನು ನೋಡಿದರೆ ಗೊತ್ತಾಗುತ್ತದೆ: ಹಕ್ಕಿಗಳು ನಿಜ ಹೇಳಲಾರವು ಎನ್ನುವುದು.”
ನಮ್ಮ ಆತ್ಮ ಒರಗಿ ಸುಧಾರಿಸಿಕೊಳ್ಳುವುದಕ್ಕೆ ಇನ್ನೊಂದು ಆತ್ಮ ಬೇಕು, ನಮ್ಮನ್ನು ಬೆಚ್ಚಗಿಡುವುದಕ್ಕೆ ಇನ್ನೊಂದು ಮೈಯಿ ಬೇಕು
“ಹೌದು, ನಿನಗೆ ಮರುಳಾಗಿದ್ದೇನೆ. ಈಗಲೂ. ನನ್ನೊಳಗೆ ಇಷ್ಟು ತೀವ್ರವಾದ ದೇಹಭಾವವನ್ನು ಯಾರೂ ಮೂಡಿಸಿಲ್ಲ. ನಿನ್ನ ಸಂಬಂಧ ಕತ್ತರಿಸಿಕೊಂಡೆ. ಯಾಕೆಗೊತ್ತಾ. ಸುಮ್ಮನೆ ಹೀಗೆಬಂದು ಹಾಗೆ ಹೋಗುವ ಭ್ರಮೆ, ಮರುಳು ನನಗಿಷ್ಟವಿಲ್ಲ.”
ಇದ್ದಿಲಾಗಿ ಆಕಾಶದಲ್ಲಿ ಹಾರಾಡುವ ಸುಟ್ಟ ಕಾಗದದ ಚೂರುಗಳು…
“ಏನಾದರೂ ಮಾಡಬೇಕು. ಈ ವಿಕೃತ ಜೋಕು ಕೊನೆಯಾಗಬೇಕು. ನಿಲ್ಲಿಸಬೇಕು ನಾನೇ. ತಡವಾಗುವ ಮೊದಲೇ. ಕವಿತೆ ಬರೆದರೆ, ಕಾಗದ ಬರೆದರೆ ಫಲವಿಲ್ಲ. ದೊಡ್ಡವರೆಲ್ಲ ಕಿವುಡರು. ಲೇಸು ಭದ್ರವಾಗಿ ಕಟ್ಟಿಕೊಂಡು, ಶೂಗಳನ್ನು ಕಿರುಗುಟ್ಟಿಸುತ್ತ ರಸ್ತೆಯ ಮೇಲೆ ನಡೆಯುವ ದೊಡ್ಡವರಿಗೆ ಸಣ್ಣ ನರಳಾಟದ ಕುಂಯ್ ಕುಂಯ್ ಸದ್ದು ಕೇಳಿಸುವುದೇ ಇಲ್ಲ. ಎಡ್, ಇದೆಲ್ಲ ಭೀತಮನದ ಮಾತು ಅನಿಸಬಹುದು. ನನಗೆ ಭೀತಿ ಇರಬಹುದು.”
ಸರ್ವ ಕಾಲಕ್ಕೂ ಸಲ್ಲುವ ಇಂಗ್ಮರ್ ಬರ್ಗ್ಮನ್: ಎ. ಎನ್. ಪ್ರಸನ್ನ ಬರಹ
ಇಂಗ್ ಮರ್ ಬರ್ಗ್ ಮನ್ ಚಲನಚಿತ್ರದ ಬೆರಗು. ಅವನು ಆ ಕಲಾ ಪ್ರಕಾರಕ್ಕೆ ಕೊಟ್ಟ ಕಾವು ಎಂಥದೆಂದರೆ ಅವು ಹುಟ್ಟಿಸುವ ಕುದಿತದಿಂದ ತಪ್ಪಿಸಿಕೊಳ್ಳುವುದು ಕಷ್ಟ. ಏಕೆಂದರೆ ಅವು ನಾವು ಯಾರು, ಏನು ಮತ್ತು ಹೇಗೆ ಎನ್ನುವ ಪ್ರಶ್ನೆಗಳನ್ನು ಹುಟ್ಟಿಸಿ ಕಂಗೆಡಿಸುತ್ತವೆ. ಅವನ ಚಿತ್ರಗಳಿಗೆ ಸ್ವಂತ ಜೀವನಾನುಭವವೇ ಫೌಂಡೇಷನ್.
ಹೆಣ್ಣು, ಪ್ರೇಮ ಮತ್ತು ರಾಷ್ಟ್ರೀಯತೆ:ನಿಸಾರ್ ತಾಫಿಕ್ ಖಬ್ಬಾನಿ ಕಾವ್ಯಲೋಕ
ಖಬ್ಬಾನಿಯವರ ಮೂಲ ಪ್ರೇರಣೆ ಹೆಣ್ಣೇ ಆದರೂ ಅವರ ಕಾವ್ಯದಲ್ಲಿ ಅರಬ್ ರಾಷ್ಟ್ರೀಯತೆ ಎದ್ದು ಕಾಣಿಸುತ್ತದೆ. ಅವರ ನಂತರದ ಕವಿತೆಗಳಲ್ಲಿ ಪರಮಾಧಿಕಾರದ ವಿರುದ್ಧದ ಪ್ರತಿರೋಧವಿದೆ. ರೊಮ್ಯಾಂಟಿಕ್ ಮತ್ತು ರಾಜಕೀಯದ ನೈರಾಶ್ಯವಿದೆ.
ಮುಚ್ಚಿದ ಖಾಲಿ ಬಾಗಿಲು, ಗಾಜಿನ ಚೌಕದಲ್ಲಿ ಇಷ್ಟಗಲ ಆಕಾಶ, ಪೈನ್ ಮರಗಳ ಮೊನಚು
“ಇವತ್ತು ರಾತ್ರಿ, ಮಲಗುವ ಮೊದಲು, ಸ್ವಲ್ಪ ಹೊತ್ತು ಹೊರಗೆ ಸುತ್ತಾಡಬೇಕು ಅನಿಸಿತು. ಮನೆಯೊಳಗೆ ನಚ್ಚಗೆ ಹಿತವಾಗಿತ್ತು, ಹಳಸಲು ಗಾಳಿ ಅನಿಸಿತು.ಬಾಗಿಲು ಮುಚ್ಚಿಕೊಂಡೇ ಇತ್ತು. ಬಿಳಿಯ, ಸಾದಾ, ಖಾಲಿ ಬಾಗಿಲು, ಒಗಟಿನ ಹಾಗೆ. ತಲೆ ಎತ್ತಿ ನೋಡಿದೆ.









