ಸಣ್ಣ ಸದ್ದಿಗೂ ಬೆಚ್ಚುತ್ತಿದ್ದ ಮೀನಾಕ್ಷಿ:ಭಾರತಿ ಹೆಗಡೆ ಕಥಾನಕ
“ಅವಳ ಜಾತಕ ಹೊರಹಾಕಿ ಆಗಲೇ 5-6 ವರ್ಷಗಳೇ ಕಳೆದು ಹೋಗಿದ್ದವು. ಜಾತಕ ಹೊಂದಿದರೂ, ನೋಡಲು ಪರವಾಗಿಲ್ಲ ಎಂದೆನಿಸಿದರೂ, ಗಂಡಿನ ಕಡೆಯವರು ಬೇಡುವಂಥ ಎಲ್ಲ ಗುಣಗಳೂ ಅವಳಲ್ಲಿದ್ದರೂ, ವರದಕ್ಷಿಣೆಕೊಡಲು ತಯಾರಿದ್ದರೂ ಅವಳ ಮದುವೆ ಮಾತ್ರ ಆಗಲೇ ಇಲ್ಲ.”
ಇದೆಲ್ಲ ನಿಜವಾಗಲೂ ನಿಮಗೇ ಆಗಿದ್ದಾ?:ಒರ್ಹಾನ್ ಪಾಮುಕ್ ಭಾಷಣ ಮಾಲಿಕೆ
“ಎಷ್ಟು ಭಾಗ ನಿಜವಾದ ಜೀವನಾನುಭವದಿಂದ ಮೂಡಿದ್ದು, ಎಷ್ಟು ಭಾಗ ಕಲ್ಪನೆಯಿಂದ ಮೂಡಿದ್ದು ಅನ್ನುವ ಅಚ್ಚರಿಯಿದೆಯಲ್ಲ ಅದು ಕಾದಂಬರಿ ಓದುತ್ತ ನಾವು ಪಡುವ ಸಂತೋಷದ ಒಂದು ಬಗೆ.”
ತಂತ್ರಜ್ಞಾನ ಮತ್ತು ಸಮಕಾಲೀನ ಯಕ್ಷಗಾನ:ಯೋಗೀಂದ್ರ ಬರಹ
”ವಾಟ್ಸಪ್ಪ್ ಗುಂಪುಗಳಲ್ಲಿ, ಯುಟ್ಯೂಬ್ ನಲ್ಲಿ ಆಟ ನಡೆಯುತ್ತಿರುವಾಗಲೇ ಆಗಿನ ಆಟದ ಭಾವಚಿತ್ರಗಳು ಮುದ್ರಣಗಳ ತುಣುಕುಗಳು ಹರಿದಾಡುತ್ತವೆ. ಪ್ರತಿವಾರವೂ ಯಕ್ಷಗಾನದ, ತಾಳಮದ್ದಲೆಗಳ ವಿಮರ್ಶೆಗಳು ಪತ್ರಿಕೆಗಳಲ್ಲಿ, ಫೇಸ್ಬುಕ್ ಗಳಲ್ಲಿ ಬರುತ್ತವೆ.”
ನೋಡುಗನ ಮುಖಕ್ಕೇ ಕನ್ನಡಿ ಹಿಡಿವ ಅಸ್ಗರ್ ಫ಼ರ್ಹಾದಿ ಸಿನೆಮಾ
ನಿರ್ದೇಶಕ ಫ಼ರ್ಹಾದಿ ಕಟ್ಟಕಡೆಯವರೆಗೂ ಗಾಳಿಪಟವನ್ನು ತೋರಿಸುವುದೇ ಇಲ್ಲ.ಫ್ರೇಂ ನ ಎಡಕ್ಕೆ, ಬಲಕ್ಕೆ, ಒಮ್ಮೊಮ್ಮೆ ಹೊರಕ್ಕೆ ಎಲಿಯ ಮುಖ ಚಲಿಸುತ್ತಲೇ ಇರುತ್ತದೆ.ಗಾಳಿಪಟದ ಹಾರಾಟ ಅವಳ ಮುಖದಲ್ಲೇ ನಮಗೆ ಕಾಣಿಸುತ್ತಿರುತ್ತದೆ.
ಆಷಾಢ ಶುಕ್ರವಾರದ ಬೆಳಗು:ಸಾಗು ಮಸಾಲೆ ಪರಿಮಳದ ಘಮಲು
”ಆಷಾಢ ಶುಕ್ರವಾರದಂದು ನಮ್ಮ ತಂದೆ ನಮಗಿಂತ ಬೇಗ ಎದ್ದು ಹಂಡೆಯಲ್ಲಿ ನೀರುತುಂಬಿ ಸೌದೆಒಲೆ ಉರಿಸಿರುತ್ತಿದ್ದರು. ನಮ್ಮನ್ನು ನಾಲ್ಕುಘಂಟೆಗೇ ಎಬ್ಬಿಸಿ ಬಿಸಿಬಿಸಿ ಫಿಲ್ಟರ್ ಕಾಫಿ ಕೊಟ್ಟ ಕೂಡಲೆ ನಮ್ಮ ಎಂಜಿನ್ ಶುರು ಆಗುತ್ತಿತ್ತು. ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಮನೆಯಿಂದ ನಾಲ್ಕುವರೆ ಘಂಟೆಗೆ ಸೈಕಲ್ ಏರಿದೆವೆಂದರೆ ಬೆಟ್ಟದ ಕಡೆಗೆ ನಮ್ಮ ಪಯಣ.”
ಕಾದಂಬರಿ ಓದುವುದೆಂದರೆ:ಒರ್ಹಾನ್ ಪಾಮುಕ್ ಭಾಷಣ ಮಾಲಿಕೆ
‘ಕಾದಂಬರಿಗೆ ಕೇಂದ್ರವಿದೆ ಎಂದು ಗೊತ್ತಿರುವುದರಿಂದ, ಅಥವಾ ಹಾಗೆ ನಂಬುವುದರಿಂದ ಓದುತ್ತಿರುವ ನಾವು ಕಾಡಿನಲ್ಲಿ ಒಂದೊಂದು ಎಲೆಯನ್ನೂ ಮುರಿದು ಬಿದ್ದ ಕೊಂಬೆಯನ್ನೂ ಹುಷಾರಾಗಿ ಗಮನಿಸುತ್ತ ಸುಳಿವು ಹುಡುಕುತ್ತಿರುವ ಬೇಟೆಗಾರನ ಹಾಗೆ ಇರುತ್ತೇವೆ.
ಗೋಡೆಯೊಡನೆ ಬಹಳ ಮಾತನಾಡುತ್ತಿದ್ದ ಗೀಜಗೋಡಿನ ಅಮ್ಮುಮ್ಮ
”ಆದರೆ ನಿಜಕ್ಕೂ ನಂತರದ ದಿನಗಳಲ್ಲಿ ಅಲ್ಲೊಂದು ಪವಾಡವೇ ನಡೆದುಹೋಯಿತು.ಅದುವರೆಗೆ ಒಂದೇ ಒಂದೂ ಮಾತನಾಡದ ಅಜ್ಜ-ಅಮ್ಮುಮ್ಮ ಇಬ್ಬರೂ ಮಾತನಾಡತೊಡಗಿದರು. ಎಲ್ಲಕ್ಕಿಂತ ಮುಖ್ಯವಾಗಿ ಅಮ್ಮುಮ್ಮ ಈಗೀಗ ಗೋಡೆ ಬಳಿ ಹೋಗುತ್ತಿರಲಿಲ್ಲ.ಅಜ್ಜನ ಹತ್ತಿರವೇ ಮಾತನಾಡುತ್ತಿದ್ದಳು.”
ಯಾರಿಗಾಗಿ ಬರೆಯುತ್ತೀರಿ ಅನ್ನುವ ಅನುಗಾಲದ ಪ್ರಶ್ನೆ!
”ಇಂದಿನ ಸಾಹಿತ್ಯಕ ಲೇಖಕರು ಏನನ್ನೂ ಓದದ ತಮ್ಮ ಬಹುಸಂಖ್ಯಾತ ರಾಷ್ಟ್ರೀಯರಿಗಾಗಿ ಬರೆಯುವ ಬದಲಾಗಿ ಜಗತ್ತಿನಲ್ಲಿರುವ ಅಲ್ಪ ಸಂಖ್ಯಾತ ಸಾಹಿತ್ಯಕ ಓದುಗರಿಗಾಗಿ ಬರೆಯುತ್ತಾರೆ. ಅಂದರೆ ಈ ಸಾಮಾನ್ಯರೂಪದ ಪ್ರಶ್ನೆಗೆ ವಿವರಣೆ ಇದು.”
ವೈದೇಹಿಯವರ ಕಾಲುದಾರಿಯ ಕಥನಗಳು ಮತ್ತು ಕಾಡುವ ಕಥಾಪಾತ್ರಗಳು
ಹದಿಹರೆಯದ ದಿನಗಳಲ್ಲಿ ಓದಿನ ಕಿಚ್ಚುಹಚ್ಚಿದವರು ವೈದೇಹಿ.ಹಾಗೆ ಅವರು ಒಂದಷ್ಟು ಪಾತ್ರಗಳನ್ನು ಎದೆಯಲ್ಲಿ ಊರಿಬಿಟ್ಟರು. ಅವುಗಳ ಒಡಲ ಉರಿ ಒಳಗೊಳಗೇ ಸದಾ ಉರಿಯುತ್ತ ಪ್ರಖರ ಸಂವೇದನೆಯೊಂದನ್ನು ರೂಪಿಸಿದ್ದು ಸುಳ್ಳಲ್ಲ ಆ ಪಾತ್ರಗಳಾದರೂ ಎಂಥವು? ಅಕ್ಕು, ಅಮ್ಮಚ್ಚಿ, ಸಿರಿ, ಸೌಗಂಧಿ, ಕಮಲಾವತಿ, ಸುಬ್ಬಕ್ಕ ಇಂಥವೇ.”









